ಒಂದು ಕಡೆ ಸಹ್ಯಾದ್ರಿ ಪರ್ವತ ಮಾಲೆ ಮತ್ತೊಂದು ಕಡೆ ಶರಧಿಯ ಮೊರೆತ ಇದರ ನಡುವೆ ಪವಡಿಸಿರುವ ಉತ್ತರ ಕನ್ನಡ ಜಿಲ್ಲೆಯ ಮಂಕಿಯ ದೇವರಗದ್ದೆಯಲ್ಲಿ ಕರಾವಳಿ ವಿದ್ಯಾವರ್ಧಕ ಸಂಘದ 25ನೇ ವಾರ್ಷಿಕೋತ್ಸವ ಮತ್ತು ಸಭಾಭವನದ ಉದ್ಘಾಟನಾ ಸಮಾರಂಭದ ಸಂಭ್ರಮದ ಕ್ಷಣಗಳು.
ಕರಾವಳಿ ವಿದ್ಯಾವರ್ಧಕ ಸಂಘದ ಸಭಾ ಭವನ ಲೋಕಾರ್ಪಣೆ ಹಾಗೂ ಬೆಳ್ಳಿ ಹಬ್ಬದ ಸಂಭ್ರಮ ದಿನಾಂಕ 27/3/2023 ಸೋಮವಾರ ನಡೆಯಿತು ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿ ಹಾಗೂ ಶ್ರೀ ಶ್ರೀ ವಿಧುಶೇಖರ ಮಹಾ ಸ್ವಾಮಿಗಳ ದಿವ್ಯಾನುಗ್ರಹದಿಂದ ಬೆಳಿಗ್ಗೆ 10ಕ್ಕೆ ಮಾನ್ಯ ಶಾಸಕರದ ಶ್ರೀ ಸುನೀಲ್ ನಾಯ್ಕ್ ರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಅದೇ ದಿನ ಸಂಜೆ 8ಗಂಟೆಗೆ 25ನೇ ಬೆಳ್ಳಿ ಹಬ್ಬದ ಸಂಭ್ರಮದ ಸಭಾ ಕಾರ್ಯಕ್ರಮವನ್ನು ಭಟ್ಕಳ ಹೊನ್ನಾವರ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಸುನೀಲ್ ನಾಯ್ಕ್ ರವರು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಸಂಘವು 25ನೇ ವಾರ್ಷಿಕೋತ್ಸವ ಆಚರಿಸಿ ಕೊಳ್ಳುವುದರ ಜೊತೆಗೆ ಸಭಾಭವನವನ್ನೂ ಲೋಕಾರ್ಪಣೆ ಮಾಡಿದ್ದು ವಿಶೇಷವಾದದ್ದು ಸಂಘದ ಸದಸ್ಯರು ಹಲವು ಬಾರಿ ಸಭಾಭವನಕ್ಕೆ ಅನುದಾನ ನೀಡುವಂತೆ ಭೇಟಿ ನೀಡಿದ್ದರು ಒಂದು ಬಾರಿ ಕೂಡ ಬೇಸರಿಸಿಕೊಳ್ಳದೆ ಸದಾ ನಗು ಮುಖದಿಂದ ಬಂದು ಚರ್ಚಿಸಿ ಹೋಗುತ್ತಿದ್ದರು.ಅವರ ಆ ತಾಳ್ಮೆಗೆ ಇನ್ನೂ ಹೆಚ್ಚಿನ ಸಹಕಾರ ನೀಡಲು ಪ್ರೇರಣೆ ಆಯಿತು ಎಂದರು.
ಮುಂದುವರೆದು ಮಾತನಾಡಿ ಸಭಾಭವನ ಉದ್ಘಾಟನೆ ಗೊಳ್ಳಲು ಎಲ್ಲ ಸದಸ್ಯರು ಅವಿರತ ಪ್ರಯತ್ನ, ಕ್ರಿಯಾಶೀಲತೆ ಕಾರಣ ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದರು. ಮೀನುಗಾರರಿಗು ತನಗೂ ಮೊದಲಿನಿಂದಲೂ ಅವಿನಾಭಾವ ಸಂಬಂಧ ಇದೆ ಎಂದರು. ಆನಂತರ ಕೊಂಕಣಿ ಖಾರ್ವಿ ಸಮಾಜದ ಪ್ರಮುಖರು, ಮುಂಬೈ ನ ಉದ್ಯಮಿಗಳಾದ ಶ್ರೀ ರವಿ ನಾಯ್ಕ್ ಮಾತನಾಡಿ ಸಂಘದ ಸದಸ್ಯರು ತಮ್ಮ ಮನೆಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಾಗ ಸಣ್ಣ ಭವನ ಎಂದು ತಿಳಿದಿದ್ದೆ, ಆದರೆ ಇಲ್ಲಿ ಬಂದು ನೋಡಿದರೆ ದೊಡ್ಡದಾದ ಸಭಾ ಭವನ ಕಂಡು ಆಶ್ಚರ್ಯ ವಾಯಿತು ಎಂದರು. ಅದೇ ಸಂದರ್ಭದಲ್ಲಿ ತ್ರಾಸಿಯ ಕೊಂಕಣಿ ಖಾರ್ವಿ ಭವನ ಕಟ್ಟಲು ಮಂಕಿಗೆ ಬಂದಾಗ ಇಲ್ಲಿನ ಸಮಾಜದವರು ಸಹಕಾರ ನೀಡಿದ ರೀತಿಗೆ ಅಭಿನಂದನೆ ಸಲ್ಲಿಸಿದರು. ಸಮಾರಂಭದಲ್ಲಿ ಭಾಷಣ ಮಾಡಿದ ನಮೋ ರಾಘವೇಂದ್ರ ಖಾರ್ವಿಯವರು ಸಮಾಜ ಎದುರಿಸುತ್ತಿರುವ ಸಮಸ್ಯೆ, ಅಭಿವೃದ್ಧಿಯ ಮಾರ್ಗೋಪಾಯಗಳ ಬಗ್ಗೆ ತಮ್ಮ ಮಾತಿನ ಶೈಲಿಯ ಮೂಲಕ ಅದ್ಬುತವಾಗಿ ಎಳೆ ಎಳೆಯಾಗಿ ಬಿತ್ತರಿಸಿದರು, ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.
ಮುಖ್ಯ ಅತಿಥಿಗಳಾದ ಶ್ರೀ ಅಶೋಕ್ ಕಾಸರಕೋಡ್ ಮಾತನಾಡಿ ಸಂಘದ ಸದಸ್ಯರ ಪ್ರಯತ್ನ ಹಾಗೂ ಶಾಸಕರು ಸಹಕಾರದ ಫಲವಾಗಿ ಕೇವಲ 1 ತಿಂಗಳಿನಲ್ಲಿ ಸಭಾಭವನ ಪೂರ್ಣಗೊಳಿಸಿದ್ದನ್ನು ಅಧ್ಬುತ ಎಂದರು. ವೇದಿಕೆಯಲ್ಲಿ ಪ್ರಕಾಶ್ ತಾಂಡೆಲ್, ಸುಬ್ರಾಯ ನಾಯ್ಕ್, ಸತೀಶ್ ಖಾರ್ವಿ, ವೆಂಕಟೇಶ್ ಮೇಸ್ತ ಮಂಜುನಾಥ್ ನಾಯ್ಕ್, ಸಾಂತಾ ರೋಡ್ರಿಗಸ್, ಸುರೇಶ್ ಹರಿಕಂತ್ರ, ಸಿದ್ದಿಕ್, ಕಿರಣ್ ಕುಮಾರ್, ರಾಮ ಖಾರ್ವಿ, ಕೋಟಾನ್ ಸುಧಾಕರ್ ಖಾರ್ವಿ ಇನ್ನಿತರರು ಇದ್ದರು. ಇದೇ ಸಂದರ್ಭದಲ್ಲಿ ಈಜಿನಲ್ಲಿ ವಿಶೇಷ ಸಾಧನೆಗೈದ ಕಾಸರಕೊಡಿನ ಲೋಹಿತ್ ತಾಂಡೆಲ್ ರನ್ನ ಸನ್ಮಾನಿಸಲಾಯಿತು. ಕಳೆದ 25ವರ್ಷಗಳಲ್ಲಿ ಆಗಿ ಹೋದ ಅಧ್ಯಕ್ಷರುಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು.
ಸಂಘದ ಅಧ್ಯಕ್ಷರಾದ ರಘು ಖಾರ್ವಿ ಯವರು ಪ್ರಾಸ್ತಾವಿಕ ಭಾಷಣ ಮಾಡಿದರು, ಪ್ರಾರ್ಥನೆ ಜಾಹ್ನವಿ ಮತ್ತು ಆಶಿತಾ ಹಾಡಿದರು, ನಾಗರಾಜ್ ಖಾರ್ವಿ ಸ್ವಾಗತಿಸಿದರು ಹಾಗೂ ಸಂತೋಷ್ ಖಾರ್ವಿ ವಂದಿಸಿದರು.