“ಕಾಸರಕೋಡ ಟೊಂಕ ” ಕಡಲಾಮೆಗಳ ಸಂತತಿಯ ಹಬ್ಬ

ಕಾಸರಕೋಡ ಟೊಂಕ ” ಕಡಲಾಮೆಗಳ ಸಂತತಿಯ ಹಬ್ಬ
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರ ಪ್ರದೇಶವಾದ ಹೊನ್ನಾವರದ “ಕಾಸರಕೋಡ ಟೊಂಕ ” ಮೀನುಗಾರಿಕಾ ಪ್ರದೇಶದಲ್ಲಿ ಈಗ ಕಡಲಾಮೆಗಳ ಸಂತತಿಯ ಹಬ್ಬ

ದಿನಾಂಕ 04/04/2023 ತುಸು ರಾತ್ರಿ 9ರ ಹೊತ್ತಲ್ಲಿ ಪುಟ್ಟ ಪುಟ್ಟ ಕಡಲಾಮೆಯ ಮರಿಗಳು ಒಂದರೊಂದರಂತೆ ಭೂ ತಾಯಿಯ ಮಡಿಲಿನಿಂದ ಹೊರಬಂದು, ತನ್ನ ತಾಯಿ 45 ದಿನಗಳ ಹಿಂದೆ ಕಳ್ಳಕಾಕರ ಕಣ್ಣು ತಪ್ಪಿಸಿ ಜೋಪಾನವಾಗಿ ಭೂಗರ್ಭದಲ್ಲಿ ಮೊಟ್ಟೆಯ ರೂಪದಲ್ಲಿ ಇಟ್ಟ ನಮ್ಮನ್ನೆಲ್ಲ ಏನೊಂದು ತೊಂದರೆ ಆಗದಂತೆ ಜೋಪಾನವಾಗಿ ಪ್ರತಿದಿನ ನೋಡಿಕೊಂಡ ಇಲ್ಲಿನ ಸ್ಥಳೀಯ “ಕಾಸರಕೋಡ ಟೊಂಕ ಮೀನುಗಾರ” ಮಹಿಳೆಯರು, ಯುವಕರು, ಸ್ಥಳೀಯರು, ಅರಣ್ಯಇಲಾಖೆ, ಹೋರಾಟಗಾರರೆಲ್ಲರೂ ಸೇರಿ ಒಟ್ಟು ಈ ಪ್ರದೇಶದಲ್ಲಿ 46 ಗೂಡುಗಳಿದ್ದು, 45 ನಂಬರ್ ಗೂಡಿನಿಂದ್ ಬಂದ ಕಡಲಾಮೆಯ ಮರಿಯನ್ನು “ಹೊನ್ನಾವರ ನ್ಯಾಯಾಲಯದ” ಸೀನಿಯರ್ ನ್ಯಾಯಾಧೀಶರಾದ ಮಾನ್ಯ ಶ್ರೀ ಕುಮಾರ್ ಜೀ ಯವರು ಹಾಗೂ ಶ್ರೀಮತಿಯವರು ಪರಿವಾರ ಸಮೇತವಾಗಿ ಆಗಮಿಸಿ ಮದ್ಯರಾತ್ರಿ ತನಕ ಪುಟ್ಟ ಪುಟ್ಟ ಕಡಲಾಮೆಯ ಮರಿಗಳನ್ನು ಸಮುದ್ರಕ್ಕೆ ಬಿಟ್ಟು ಸಂತೋಷಗೊಂಡರು.

ಮಾನ್ಯ ಹೊನ್ನಾವರ ನ್ಯಾಯಾಧೀಶರು ಆಗಮಿಸಿದ ಈ ಸಂದರ್ಭದಲ್ಲಿ ಸ್ಥಳೀಯ ಮೀನುಗಾರರೆಲ್ಲರೂ ಸಂತೋಷಪಟ್ಟು, ದೈವ ಸ್ವರೂಪಿಯಾದ ಸಾಕ್ಷಾತ್ “ಮಹಾವಿಷ್ಣುವಿನ” ಕೂರ್ಮ ಅವತಾರವಾದ ಕಡಲಾಮೆಯ ಮರಿಗಳು ಬಂದ್ ಈ ಸುಸಂದರ್ಭದಲ್ಲಿ ಸಾಕ್ಷಾತ್ “ನ್ಯಾಯದೇವತೆಯೆ” ಈ ಸಂದರ್ಭದಲ್ಲಿ ಹಾಜರಿದ್ದದ್ದು ಸ್ಥಳೀಯ ಮೀನುಗಾರರ ಸಂತೋಷಕ್ಕೆ ಪಾರವೆ ಇರಲಿಲ್ಲ. ನಾಲ್ಕೈದು ದಿನಗಳ ಹಿಂದೆ ಗೌರವಾನ್ವಿತ ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಸಹ ಪರಿವಾರ ಸಮೇತ ಆಗಮಿಸಿ ಪುಟ್ಟ ಪುಟ್ಟ ಕಡಲಾಮೆಯ ಮರಿಯನ್ನು ಸಮುದ್ರಕ್ಕೆ ಬಿಟ್ಟು ಸಂತೋಷ ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ RFO ವಿಕ್ರಂ ಸರ್ ರವರು ಸ್ಥಳೀಯರಾದ ಗಣಪತಿ ತಾಂಡೇಲ್, ರೇಣುಕಾ ತಾಂಡೇಲ್, ರಾಜೇಶ್ ತಾಂಡೇಲ್, ರಮೇಶ್ ತಾಂಡೇಲ್, ಜಗದೀಶ್ ತಾಂಡೇಲ್, ಭಾಸ್ಕರ, ವಿನಯ್, ನರಸಿಂಹ, ವಿಕ್ರಂ, ಗಿರೀಶ್, ಸಚಿನ್, ರಾಜು ತಾಂಡೇಲ್, ಪುಟ್ಟ ಪುಟ್ಟ ಮಕ್ಕಳು ಮಹಿಳೆಯರು ಮತ್ತಿರರು ಮಧ್ಯರಾತ್ರಿ ತನಕ ಹಾಜರಿದ್ದರು. ಕರ್ನಾಟಕದ ಕರಾವಳಿಯ ತೀರಪ್ರದೇಶದಲ್ಲಿ ಕಡಲಾಮೆಯೆ ಇಲ್ಲ ಎಂದು “ವಾದಿಸಿ” ಸಾದಿಸಲು ಹೊರಟ HPPL ವಾಣಿಜ್ಯ ಬಂದರು ಕಂಪನಿಗೆ, ಕಂಪನಿಯ ಕೆಲವು ಬಂಡವಾಳ ಶಾಹಿಗಳಿಗೆ ಮತ್ತು ಕೆಲವು ಹಿತಾಸಕ್ತಿಗಳಿಗೆ ಮೂಕ ಕೂರ್ಮಗಳಾದ ಕಡಲಾಮೆಯೆ ತಕ್ಕ ಉತ್ತರ ನೀಡಿದ್ದು, ನೀಡುತ್ತಿರುವದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಪರಿಸರ ಪ್ರೇಮಿಗಳು, ಪರಿಸರವಾದಿಗಳು, ಸಂಬಂಧಪಟ್ಟವರು ಇನ್ನಾದರೂ ಈ ಪ್ರದೇಶವನ್ನು ಕಡಲಾಮೆಯ ಅವಾಸ ಸ್ಥಾನ ಎಂದು ಘೋಷಿಸಲಿ ಎಂದು ಮೀನುಗಾರರ ಅಭಿಪ್ರಾಯವಾಗಿದೆ.

ಬರವಣಿಗೆ
ರಾಜು ತಾಂಡೇಲ್
ಟೊಂಕ.

Leave a Reply

Your email address will not be published. Required fields are marked *