ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ ಅಂದರೆ ಇಂದು ತಾ. 15 ಎಪ್ರಿಲ್ ಶಂಕರಾಚಾರ್ಯರ ಜನ್ಮದಿನ ಪ್ರಪಂಚದಾದ್ಯಂತ ಇಂದು ಶಂಕರಜಯಂತಿ ಉತ್ಸವ ಆಚರಿಸುತ್ತಾರೆ. ಮಾನ್ಯ ಪ್ರದಾನ ಮಂತ್ರಿಗಳ ದೂರ ದೃಷ್ಠಿತ್ವ್ವದ ಫಲದಿಂದ ಇಂದು ವಿಶ್ವ ತತ್ವಜ್ಞಾನಿಗಳ ದಿನ ಎಂದು ಆಚರಣೆಮಾಡಲಾಗುತ್ತದೆ. ಆದಿ ಶಂಕರರ ಜೀವನ, ಅವರ ಸಿದ್ದಾಂತ, ಆಧ್ಯಾತ್ಮಿಕ ವಿಚಾರ, ಅದ್ವೈತ ಪ್ರತಿಪಾದನೆ ಇವನ್ನೆಲ್ಲವನ್ನೂ ಮನಗೊಂಡು ಪ್ರಪಂಚದಾದ್ಯಂತ ಶಂಕರರ ಜಯಂತಿ ಉತ್ಸವದ ಜೊತೆಗೆ ವಿಶ್ವ ತತ್ವಜ್ಞಾನಿಗಳ ದಿನ ಎಂದು ಆಚರಿಸಲಾಗುತ್ತಿರುವುದು. ಭಾರತೀಯರಾದ ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.
ಕಳೆದ ಎರಡು ವರುಷದಿಂದ ಶೃಂಗೇರಿ ಶಾರದಾಪೀಠದಿಂದ ನಮ್ಮ ಗುರು ದ್ವಯರು ಆದೇಶ ಹೊರಡಿಸಿದ್ದಾರೆ. ನಮ್ಮೆಲ್ಲಾ ಶಿಷ್ಯ ವರ್ಗದವರು
ಹಿಂದು ಬಾಂಧವರು ಶಂಕರ ಜಯಂತಿ ಉತ್ಸವವನ್ನು ಮನೆ-ಮನಗಳಲ್ಲಿ ಶಂಕರ ಎನ್ನುವ ಕಲ್ಪನೆಯೊಂದಿಗೆ ಆಚರಿಸಬೇಕು. ಶಂಕರರ ಜೀವನ ಸಾರ ಅವರ ಬದುಕು, ಜ್ಞಾನ, ಅವರ ಸಿದ್ದಾಂತವೆಲ್ಲವೂ ಪ್ರಸರಣವಾಗಬೇಕು ತನ್ಮೂಲಕ ಹಿಂದೂ ಸನಾತನ ಸಂಸ್ಕಾರ,-ಸಂಸ್ಕೃತಿ ಬೆಳೆಯಬೇಕು ಉಳಿಯಬೇಕು ಎನ್ನುವ ಉದ್ಧೇಶದಿಂದ ಶಾಂಕರ ತತ್ವ ಪ್ರಸಾರ ಅಭಿಯಾನ ಸಮಿತಿ ನಮ್ಮ ಉಡುಪಿ ಜಿಲ್ಲೆಯಲ್ಲಿ ಕಾರ್ಯ ಪ್ರವೃತ್ತಹೊಂದಿದೆ.
ಎಪ್ರಿಲ್ 21 ರಿಂದ ಮೇ 5 ನೇ ತಾರೀಖಿನೊಳಗೆ ಎಲ್ಲಾ ಕಡೆಯಲ್ಲೂ ಶಂಕರ ಜಯಂತಿ ಆಚರಣೆಗೆ ಅವಕಾಶವಿರುತ್ತದೆ. ಶಂಕರಾಚಾರ್ಯರ ಭಾವಚಿತ್ರವಿಟ್ಟು, ಹೂವಿನಿಂದ ಅಲಂಕರಿಸಿ, ದೀಪ ಹಚ್ಚಿ ಆರತಿ ಬೆಳಗಿ ಸೇರಿದವರೆಲ್ಲಾ || ಓಂ ನಮಃ ಶಂಕರಾಯ ನಮಃ || ಎಂದು ಮಂತ್ರ ಪಠಿಸಿ ಪುಷ್ಪಾರ್ಚನೆ ಮಾಡಿ ನಮಿಸಬೇಕು, ಭಜನೆ ಹಾಗೂ ಶಂಕರಾಚಾರ್ಯರ ಬಗೆಗಿನ ವಿಚಾರವನ್ನು ಪ್ರಾಜ್ಞರಿಂದ ನೆರೆದ ಭಕ್ತಾಧಿಗಳಿಗೆ ತಿಳಿಸುವುದು. ಆ ನಂತರ ಪ್ರಸಾದ ಅಥವಾ ಲಘು ಉಪಹಾರವನ್ನು ಸೇವಿಸಿ ಸರಳ ರೀತಿಯಲ್ಲಿ ಉತ್ಸವವನ್ನು ಆಚರಿಸಬಹುದು.
ದಿನಾಂಕ: 21 ಎಪ್ರಿಲ್ 2023 ಶುಕ್ರವಾರ ಬೆಳಿಗ್ಗೆ ಶುಭ ಮಹೂರ್ತದಲ್ಲಿ ಕೋಡಿ ಕನ್ಯಾಣ ಶ್ರೀ ಚಕ್ರೇಶ್ವರಿ ದೇವಸ್ಥಾನದಲ್ಲಿ ಶಂಕರ ಜಯಂತಿ ಉತ್ಸವದ ಉದ್ಘಾಟನಾ ಸಮಾರಂಭ ಹಾಗೂ ಶಂಕರ ಜಯಂತಿ ಉತ್ಸವ ಸಂಪನ್ನಗೊಂಡಿದ್ದು, ಸಮಾಜದ ಮಾತೆಯರು ಹಾಗೂ ಮಹನಿಯರು, ಮಕ್ಕಳು ಭಾಗಿಯಾಗಿದ್ದರು. ಇದು ಸಮಸ್ತ ಹಿಂದೂ ಬಾಂಧವರಿಂದ ನೆರವೇರಲ್ಪಡುವ ಆಚರಣೆ ಆದುದರಿಂದ ದೇಗುಲಕ್ಕೆ ಇತರ ಹಿಂದೂ ಸಮಾಜದ ಭಕ್ತಾಧಿಗಳು ಸೇರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಗುರುವಂದನಾ ಸಮಿತಿಯ ಅಧ್ಯಕ್ಷರಾದ ಶ್ರೀ ಮಾಧವ ಖಾರ್ವಿ ವಹಿಸಿದ್ದರು. ಉದ್ಘಾಟನೆಯನ್ನು ಶ್ರೀಮತಿ ಸವಿತ ಎರ್ಮಾಳ್, ಜಿಲ್ಲಾ ಸಹಸಂಚಾಲಕರು ಶ್ರೀ ಶಾಂಕರ ತತ್ವ ಪ್ರಸಾರ ಸಮಿತಿ, ಇವರು ವಹಿಸಿ ಪ್ರಾಸ್ತಾವಿ ಮಾತನ್ನಾಡಿದರು, ಬೌದ್ದಿಕ್ ಎನ್ನ. ಆರ್. ದಾಮೋದರ ಶರ್ಮ, ಬಾರ್ಕೂರು ಇವರು ನೀಡಿದರು. ಶಂಕರರ ಬದುಕು ಮತ್ತು ಅವರ ವಿಚಾರದೊಂದಿಗೆ ನಾವು ಹೇಗೆ ಸಂಸ್ಕಾರಯುತ, ಮೌಲ್ಯಯುತ ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ಬಹಳ ಸೊಗಸಾಗಿ ವಿವರಿಸಿದರು. ವೇದಿಕೆಯಲ್ಲಿ ಶ್ರೀ ಚಕ್ರೇಶ್ವರಿ ದೇವಸ್ಥಾನದ ಅಧಕ್ಷರು ಹಾಗೂ ಅಂದಿನ ಕಾರ್ಯಕ್ರಮದ ಕ್ಷೇತ್ರ ಸಂಯೋಜಕರಾಗಿ ಶ್ರೀ ರಾಮಚಂದ್ರ ಖಾರ್ವಿ ಉಪಸ್ಥಿತರಿದ್ದರು. ಶ್ರೀ ಆನಂದ್ ತಂಡೇಲ್ಕರ್ ವಂದಿಸಿದರು. ಶ್ರೀ ಸುರೇಶ್ ಖಾರ್ವಿ ಕಾರ್ಯಕ್ರಮವನ್ನು ನಿರೂಪಿಸಿದರು. ನೆರದಂತ ಸಮಾಜದ ಭಕ್ತಾಧಿಗಳು ಶಂಕರರ ವಿಚಾರವನ್ನು ಆಲಿಸಿದರು, ಭಜನೆಯಲ್ಲಿ ಪಾಲ್ಗೊಂಡರು ಮತ್ತು ಕಾರ‍್ಯಕ್ರಮವನ್ನು ಚಂದಗಾಣಿಸಿಕೊಟ್ಟರು.
ವರದಿ: ಶ್ರೀ ಸುರೇಶ್ ಖಾರ್ವಿ, ಕೋಡಿ ಕನ್ಯಾಣ