29 ಕರ್ನಾಟಕ ಬಟಾಲಿಯನ್ ಎನ್.ಸಿ.ಸಿ. ಕಾರವಾರ ಇದರ ಎನ್.ಸಿ.ಸಿ.ಟ್ರುಪ್ ಕಮಾಂಡರ್, ಪಿ.ಎಮ್.ಹೈಸ್ಕೂಲ್ ಅಂಕೋಲಾದ ಶಿಕ್ಷಕರಾದ ಜಿ.ಆರ್.ತಾಂಡೇಲ ಅವರು ಮೇಜರ್ ರ್ಯಾಂಕಿನ ಚೀಫ್ ಆಫೀಸರ್ ಆಗಿ ಬಡ್ತಿ ಹೊಂದಿರುತ್ತಾರೆ. ಜಿ.ಆರ್.ತಾಂಡೇಲ ಅವರಿಗೆ ಮೇಜರ ರ್ಯಾಂಕಿನ ಸಿಂಹ ಲಾಂಛನ ತೊಡಿಸಿ ಗೌರವಿಸುವ ಕಾರ್ಯಕ್ರಮವು ಎ.ಟಿ.ಸಿ. ಕ್ಯಾಂಪ್ ಕಾರವಾರದಲ್ಲಿ ಎನ್.ಸಿ.ಸಿ.ಕೆಡೆಟ್‌ಗಳ ಮುಂದೆ ಕಮಾಂಡಿಂಗ್ ಆಫೀಸರ್ ಕರ್ನಲ್ ಮಿಲಿಂದ ಕಟ್ಟಿಯವರು ಅರ್ಥಪೂರ್ಣವಾಗಿ ನೆರವೇರಿಸಿದರು.
ಎನ್.ಸಿ.ಸಿ.ಘಟಕದ ಚೀಫ್ ಆಫಿಸರ್ ಜಿ.ಆರ್.ತಾಂಡೇಲ ಅವರು ಮಾತನಾಡಿ ನನ್ನ ಸಾಧನೆಯ ಯಶಸ್ವಿಗೆ ಕಾರಣೀಕರ್ತರಾದ ಕುಟುಂಬದವರಿಗೆ, ಶಿಕ್ಷಕ ವೃತ್ತಿ ಮಾಡಲು ಅವಕಾಶ ನೀಡಿದ ಕೆನರಾ ವೆಲಫೆರ ಟ್ರಸ್ಟಿನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರಿಗೆ, ಶಿಕ್ಷಣ ಇಲಾಕೆಯ ಅಧಿಕಾರಿ ವೃಂದದವರಿಗೆ, ಮಾರ್ಗದರ್ಶನ ಮಾಡಿದ ಪಿ.ಎಮ್.ಹೈಸ್ಕೂಲಿನ ಎಲ್ಲಾ ಗುರು ವೃಂದದವರಿಗೂ, ಸಹಕರಿಸಿದ ಸಹೋದ್ಯೋಗಿ ಬಂಧುಗಳಿಗೆ, ಪ್ರೋತ್ಸಾಹಿಸಿದ ಹಿತೈಷಿಗಳಿಗೆ ಧನ್ಯವಾದಗಳು ಅರ್ಪಿಸಿದರು. ಸಂದರ್ಭದಲ್ಲಿ ಸುಬೇದಾರ ಮೇಜರ್ ಶಹಾಪುರ್ಕರ್ ಸಾಬ್, ಮೇಜರ್ ಹುಸೇನ್ ಶೇಖ್ ಉಪಸ್ಥಿತರಿದ್ದರು.
ಜಿ.ಆರ್.ತಾಂಡೇಲ ಅವರು ಕಳೆದ ವರ್ಷ ಮಹಾರಾಷ್ಟ್ರ ರಾಜ್ಯದ ನಾಗಪುರದಲ್ಲಿ ಮೇಜರ್ ರ್ಯಾಂಕಿನ ತರಬೇತಿಯನ್ನು ಯಶಸ್ವಿಯಾಗಿ ಪಡೆದುಕೊಂಡಿದ್ದು. ಈಗ ಅವರು ಎನ್.ಸಿ.ಸಿ. ಟ್ರುಪಿಗೆ ಮೇಜರ್ ಆಗಿ ಬಡ್ತಿ ಹೊಂದಿರುತ್ತಾರೆ. ಜಿ.ಆರ್.ತಾಂಡೇಲ ಅವರು ಕಡಿಮೆ ಅವಧಿಯಲ್ಲಿ ಮೇಜರ್ ರ್ಯಾಂಕ್ ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಪಿ.ಎಮ್.ಹೈಸ್ಕೂಲಿನ ಕ್ರಿಯಾಶೀಲ ಶಿಕ್ಷಕರಾಗಿದ್ದು, ಎನ್.ಸಿ.ಸಿ ಘಟಕದ (ಆರ್ಮಿ ವಿಂಗ್ ) ಕಮಾಂಡರಾಗಿ ಎನ್.ಸಿ.ಸಿ.ಕೆಡೆಟ್‌ಗಳಿಗೆ ದೇಶಪ್ರೇಮ ಮೂಡಿಸುವ ಮಿಲಿಟರಿ ವಿಷಯದ ತರಬೇತಿ ನೀಡುತ್ತಿದ್ದಾರೆ.ಅವರಿಗೆ ಈಗಾಗಲೆ ಎನ್.ಸಿ.ಸಿ.ಯಲ್ಲಿ ಉತ್ತಮ ಸೇವೆಗೆ ಕರ್ನಾಟಕ ಮತ್ತು ಗೋವಾ ಸರಕಾರದ ಎನ್.ಸಿ.ಸಿ.ಡೈರೆಕ್ಟರೇಟ್ ಡೆಪ್ಯೂಟಿ ಡೈರೆಕ್ಟರೇಟ್ ಜನರಲ್ ಆವಾರ್ಡ್ ನೀಡಿ ಗೌರವಿಸಿದ್ದನ್ನು ಸ್ಮರಿಸಬಹುದು.
ಜಿ.ಆರ್.ತಾಂಡೇಲ ಅವರ ಸಾಧನೆಗೆ 29 ಕರ್ನಾಟಕ ಬಟಾಲಿಯನ್ ಎನ್.ಸಿ.ಸಿ ಕಾರವಾರ ಇದರ ಕಮಾಂಡಿಂಗ್ ಆಫೀಸರ್ ಕರ್ನಲ್ ಮಿಲಿಂದ ಕಟ್ಟಿ, ಸುಭೇದಾರ ಮೇಜರ್ ಶಹಾಪುರಕರ, ಎನ್.ಸಿ.ಸಿ.ಅಧಿಕಾರಿಗಳಾದ ರಾಜೇಶ ನೇತ್ರೇಕರ, ರಾಮಪ್ಪ ಜೋಗೇರ ಹಾಗೂ 29 ಕರ್ನಾಟಕ ಬಟಾಲಿಯನ್ ಕಾರವಾರ ಇದರ ಪಿ.ಆಯ್.ಸ್ಟಾಪ್ ,ಸಿಬ್ಬಂದಿಗಳು ಶುಭ ಹಾರೈಸಿರುತ್ತಾರೆ.