ಯಶಸ್ವಿಯಾಗಿ ಸಂಪನ್ನಗೊಂಡ ಕೊಂಕಣಿ ಖಾರ್ವಿ ವಿದ್ಯಾವೇದಿಕೆಯ 22 ನೇ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಯಶಸ್ವಿಯಾಗಿ ಸಂಪನ್ನಗೊಂಡ ಕೊಂಕಣಿ ಖಾರ್ವಿ ವಿದ್ಯಾವೇದಿಕೆಯ 22 ನೇ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಕರಾವಳಿಯಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡು ತಮ್ಮ ಕ್ರೀಯಾಶೀಲತೆಯಿಂದ ಕೊಂಕಣಿ ಖಾರ್ವಿ ಸಮಾಜದ ಆಸ್ಮಿತೆ, ಸಾಂಸ್ಕೃತಿಕ ಪರಂಪರೆಯ ಕಂಪನ್ನು ಪಸರಿಸುತ್ತಿರುವ ಕೊಂಕಣಿ ಖಾರ್ವಿ ವಿದ್ಯಾವೇದಿಕೆಯ 22 ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ಬೆಂಗಳೂರಿನಲ್ಲಿ ತಾರೀಕು 24-12-2023 ರಂದು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತ್ತು.

ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಪ್ರಕಾಶ ನಾಗಪ್ಪ ಮೇಸ್ತಾ ಸಾಗರ ವಿಜ್ಞಾನಿಗಳು ಹಾಗೂ ಜೀವವೈವಿಧ್ಯ ಮಂಡಳಿ ನಿಕಟಪೂರ್ವ ಸದಸ್ಯರು ಇವರು ವಹಿಸಿದ್ದರು. ಸಮಾಜಕ್ಕೆ ಸಂಬಂಧಿಸಿದಂತೆ ಚಟುವಟಿಕೆಗಳಲ್ಲಿ ಕೊಂಕಣಿ ಖಾರ್ವಿ ವಿದ್ಯಾವೇದಿಕೆ, ಆರ್ಥಿಕವಾಗಿ ಮತ್ತು ನೈತಿಕವಾಗಿ ಸರ್ವರೀತಿಯಿಂದಲೂ ಸಹಕಾರ ನೀಡುತ್ತಾ ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ ಎಂದು ವಿದ್ಯಾವೇದಿಕೆಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಮಾರಂಭದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಶೀಲಾ ಪ್ರದೀಪ ಮೇಸ್ತಾ ರಾಜ್ಯ ಸಂಘಟನಾ ಕಾರ್ಯದರ್ಶಿ,ಗೋವಾ ಮತ್ತು ಕರ್ನಾಟಕ ರಾಜ್ಯ ಖ್ಯಾತ ಪ್ರಶಸ್ತಿ ಪುರಸ್ಕೃತೆ ಮತ್ತು ಶ್ರೀ ರವಿಶಂಕರ್ ಖಾರ್ವಿ ಪಾಲುದಾರರು ಜೈಗಣೇಶ್ ಫಿಶರೀಸ್, 888 ಗಂಗೊಳ್ಳಿ ಹಾಗೂ ಶ್ರೀ ರವಿ ಖಾರ್ವಿ ಮಾಲೀಕರು ಸಹನಾ ಇಂಜಿನಿಯರಿಂಗ್ ಬೆಂಗಳೂರು ಇವರು ಆಗಮಿಸಿದ್ದರು. ಇವರು ತಮ್ಮ ಹಿತನುಡಿಗಳನ್ನು ಆಡಿದರು.

ಈ ಕಾರ್ಯಕ್ರಮದಲ್ಲಿ ಸಮಾಜದ ಸಾಧಕರಾದ ಗಂಗೊಳ್ಳಿಯ ಮುಳುಗು ತಜ್ಞರಾದ ಶ್ರೀ ದಿನೇಶ್ ಖಾರ್ವಿ ಮತ್ತು ರಾಜಸ್ಥಾನ ವಿಶ್ವವಿದ್ಯಾಲಯದ ಪಿ.ಎಚ್.ಡಿ ಸಾಧಕರಾದ ಶ್ರೀಮತಿ ರೇಷ್ಮಾ ನಾಯಕ್ ಕುಂದಾಪುರ ಇವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಡು ಸಂಗೀತ, ನೃತ್ಯ ಪ್ರದರ್ಶನಗಳು ನಡೆಯಿತು ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಅಂಶಿಕ ಅಶೋಕ ಖಾರ್ವಿ ಮತ್ತು ಸನ್ಮಾನ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ನಿರೂಪಣೆಯನ್ನು ಶ್ರೀ ಗಣಾಯಿ ಚಂದ್ರ ಖಾರ್ವಿಯವರು ನಡೆಸಿಕೊಟ್ಟರು. ಶ್ರೀ ರವಿರಾಮ್ ಖಾರ್ವಿಯವರ ಅಧ್ಯಕ್ಷರು ಕೊಂಕಣಿ ಖಾರ್ವಿ ವಿದ್ಯಾವೇದಿಕೆ ಇವರು ಸ್ವಾಗತ ಭಾಷಣ ಮಾಡಿದರು, ಹರೀಶ್ ನಾಯ್ಕ್ ವರದಿ ವಾಚನ ಮಾಡಿದರು ವಿದ್ಯಾರ್ಥಿ ವೇತನವ ವಿತರಣಾ ಕಾರ್ಯಕ್ರಮ ಮತ್ತು ನಿರೂಪಣೆಯನ್ನು ಸತೀಶ್ ಖಾರ್ವಿ ಸುರೇಶ್ ಖಾರ್ವಿ ಮತ್ತು ಸುಭಾಷ್ ಖಾರ್ವಿ ನಡೆಸಿಕೊಟ್ಟರು. ಕಾರ್ಯಕ್ರಮ ನಿರೂಪಣೆಯನ್ನು ಜ್ಯೋತಿ ಖಾರ್ವಿಯವರು ಸಾಂಗವಾಗಿ ನಡೆಸಿಕೊಟ್ಟರು, ಕೊನೆಯಲ್ಲಿ ವಂದನಾರ್ಪಣೆಯನ್ನು ರವಿಕಾಂತ್ ಬಿ. ಕೋಡಿ ಅವರು ನೆರವೇರಿಸಿ ಕೊಟ್ಟರು, ಸಾರ್ಥ್ಯಕದ ಕಾರ್ಯಕ್ರಮ ಹೃದಯಂಗಮವಾಗಿ ಸಂಪನ್ನಗೊಂಡಿತ್ತು.

www.kharvionline.com

Leave a Reply

Your email address will not be published. Required fields are marked *