ಕರಾವಳಿಯ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಕಾಸರಕೋಡ ಟೊಂಕದ ವಾಣಿಜ್ಯ ಬಂದರು ವಿರೋದಿ ಹೋರಾಟವನ್ನು ತೀವ್ರ ಗೊಳಿಸಲು .ಎಪ್ರಿಲ್ 14ರವಿವಾರ ರಂದು ಮದ್ಯಾಹ್ನ 3ಕ್ಕೆ ದಕ್ಷಿಣೋತ್ತರ ಜಿಲ್ಲೆಗಳ ಮೀನುಗಾರ ಪ್ರಮುಖರ ಮತ್ತು ಮೀನುಗಾರರ ತುರ್ತು ಸಭೆ ಕಾಸರಕೋಡ ಹಿರೇಮಠ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಕರಾವಳಿಯ ವಿವಿಧೆಡೆ ಮೀನುಗಾರಿಕೆಗೆ ಪ್ರಶಸ್ತವಾಗಿರುವ ಕಡಲತೀರಗಳನ್ನು ಅಭಿವೃದ್ದಿಯ ನೆಪದಲ್ಲಿ ಕರಾವಳಿಯ ಧಾರಣಾಶಕ್ತಿಗೆ ಮೀರಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳನ್ನು ನಿರ್ಮಿಸಲು ಸುಂದರ ಪರಿಸರದ ಕಡಲತೀರಗಳನ್ನು ಖಾಸಗಿಭಂಡವಾಳಶಾಹಿಗಳಿಗೆ ಪರಭಾರೆ ಮಾಡಲಾಗುತ್ತಿದೆ. ಈ ಉದ್ದೇಶಕ್ಕೆ ಕಡಲತೀರದ ಉಬ್ಬರದ ರೇಖೆಯಿಂದ 50 ಮೀಟರ ಕಡಲತೀರವು ಬಂದ ರು ಇಲಾಖೆ ತನ್ನದೆಂದು ಹೇಳಿ ಕಡಲ ತೀರದ 150 ಮೀಟರ್ ಅಗಲದ ಭೂಭಾಗದಿಂದ ಹಲವೆಡೆ ಮೀನುಗಾರರನ್ನು ಹಂತ ಹಂತವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿದೆ. ಇದರಿಂದ ಕರಾವಳಿಯ ಸಾವಿರಾರು. ಮೀನುಗಾರ ಕುಟುಂಬಗಳ ಬದುಕು ಬೀದಿಗೆ ಬರುವ ಅಪಾಯ ಎದುರಾಗಿದೆ . ಈ ಉದ್ದೇಶಿಸಿತ ಯೋಜನೆಯ ಅನುಷ್ಠಾನವಾದರೆ ಮೀನುಗಾರಿಕೆಗೆ ಹಿನ್ನಡೆ ಆಗುವ ಜೊತೆಯಲ್ಲಿ ಕಡಲತೀರದ ಉತ್ತಮ ಪರಿಸರವನ್ನು ಸಹ ಕಳೆದುಕೊಳ್ಳಲಿದ್ದೇವೆ ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನಡೆ ಆಗಲಿದೆ.
ಪ್ರಸ್ತುತ ಮೀನುಗಾರರ ತೀವ್ರ ವಿರೋಧದ ನಡುವೆಯೂ ಮೀನುಗಾರಿಕೆಗೆ ಪ್ರಶಸ್ತವಾಗಿರುವ ಸುಂದರ ಪರಿಸರದ ಕರಾವಳಿ ತೀರಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಖಾಸಗಿ ವಾಣಿಜ್ಯ ಬಂದರುಗಳನ್ನು ನಿರ್ಮಿಸುವ ಬಲವಂತದ ಯತ್ನಗಳು ಕರಾವಳಿಯ ಮೂರು ಜಿಲ್ಲೆಗಳಲ್ಲಿ ವ್ಯವಸ್ತಿತವಾಗಿ ಹಂತ ಹಂತವಾಗಿ ನಡೆಯುತ್ತಿದೆ. ಇದಕ್ಕೆ ಕಾಸರಕೋಡಿನ ಟೊಂಕದಲ್ಲಿ ಉದ್ದೇಶಿಸಿತ ಖಾಸಗಿ ಮೂಲದ ವಾಣಿಜ್ಯ ಬಂದರು ವಿರುದ್ಧ ನಡೆಯುತ್ತಿರುವ ಮೀನುಗಾರರ ಹೋರಾಟವೇ ನಿದರ್ಶನ. ಈ ಹೋರಾಟಈಗ ಹೊಸ ತಿರುವು ಪಡೆದಿ ದೆ . ಯೋಜನೆಯನ್ನು ವಿರೋದಿಸಿದ ಇಲ್ಲಿನ ಮೀನುಗಾರರನ್ನು ಅಕ್ರಮವಾಗಿ ಬಂಧಿಸಿ ಜೈಲಿಗೆ ಕಳಿಸಿದ್ದು ಹಾಗೂ ಕಾಸರಕೋಡಿನಲ್ಲಿ ನಿಷೇದಾಜ್ನೆ ವಿದಿಸಿ ಮೀನುಗಾರರ ಧ್ವನಿಯನ್ನು ಹತ್ತಿಕ್ಕುವ ಕೆಲಸಗಳು ನಡೆದಿರುವದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ ವಾಗಿದೆ. ಅನಗತ್ಯವಾಗಿ ಸುಳ್ಳು ದೂರುಗಳನ್ನು ದಾಖಲಿಸಿ ಮೀನುಗಾರರಿಗೆ ಮಾನಸಿಕ ಹಿಂಸೆ ನೀಡಿರುವದು. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅಕ್ರಮ ಭಂದನ ಹೀಗೆ ಮೀನುಗಾರರ ಹಕ್ಕು ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರಲಾಗಿದೆ.
ಮೀನುಗಾರರ ಸ್ವಾಭಿಮಾನವನ್ನು ಕೆಣಕುವ ಸಾಹಸ ಮಾಡಿದವರಿಗೆ ಮೀನುಗಾರರು ಒಗ್ಗಟ್ಟಿನ ಬಲಪ್ರದರ್ಶನದ ಮೂಲಕ ಉತ್ತರಿಸಬೇಕಿದೆ. ಜಿಲ್ಲೆಯಲ್ಲಿ ಪಕ್ಷಭೇದ ಮರೆತು ಮೀನುಗಾರರ ಒಗ್ಗಟ್ಟನ್ನು ಬಲಪಡಿಸುವ ಉದ್ದೇಶದಿಂದ ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೀನುಗಾರ ಪ್ರಮುಖರ ಮತ್ತು ಆಸಕ್ತ ಮೀನುಗಾರರ ತುರ್ತು ಸಮಾವೇಶವನ್ನು ಇದೇ ಬರುವ ಎಪ್ರಿಲ 14 ರ ಮಧ್ಯಾಹ್ನ 3 ಘಂಟಗೆ, ಕಾಸರಕೋಡ ಇಕೋ ಬೀಚ್ ಹತ್ತಿರದ ,ಹಿರೇಮಠ ಸೆಂಟ್ ಜೋಶೆಪ್ ಸಭಾಂಗಣದಲ್ಲಿ ಮೀನುಗಾರರ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಲಾಗಿದೆ ಮತ್ತು ಈ ಸಭೆಗೆ ಆಸಕ್ತ ಮೀನುಗಾರರು ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಬಹುದೆಂದು ಕಾಸರಕೋಡ ಟೊಂಕದ ಮೀನುಗಾರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೇಶ ತಾಂಡೇಲ. ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಮತ್ತು ಮೀನುಗಾರ ಸಂಘಟನೆಗಳ ಜಂಟಿ ಹೋರಾಟ ಸಮಿತಿಯ ಹಮಜಾ ಪಟೇಲ, ಗಣಪತಿ ತಾಂಡೇಲ, ಜಗದೀಶ ತಾಂಡೇಲ, ರಾಜು ತಾಂಡೇಲ ಮಾಮು ಸಾಬ, ಹನುಮಂತ ತಾಂಡೇಲ ರಮೇಶ ತಾಂಡೇಲ ಭಾಸ್ಕರ ತಾಂಡೇಲ್ ಗಜಾನನ ರಾಮನಗರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.