ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕಂಚುಗೋಡಿನ ಶ್ರೀ ಸೀತಾರಾಮ ಕಲ್ಯಾಣೋತ್ಸವ

ಶ್ರೀ ರಾಮ ದೇವಸ್ಥಾನ ಕಂಚುಗೋಡು ಇದರ ಸುವರ್ಣ ಮಹೋತ್ಸವದ ಅಂಗವಾಗಿ ಇಂದು ನಡೆದ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮ ಅತ್ಯದ್ಭುತವಾಗಿ ಸಂಪನ್ನಗೊಂಡಿತ್ತು ಕೊಂಕಣಿ ಖಾರ್ವಿ ಸಮಾಜದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಶ್ರೀರಾಮ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರು ಕಂಚುಗೋಡು ನಾಗೇಶ್ ಖಾರ್ವಿ ಮತ್ತು ಸುವರ್ಣ ಮಹೋತ್ಸವ ಅಧ್ಯಕ್ಷರು ಚೌಕಿ ಸಂತೋಷ್ ಖಾರ್ವಿ, ಮತ್ತು ಊರಿನ ಉತ್ಸಾಹಿ ಯುವಕರು, ನಾಗರಿಕರು, ಮಹಿಳೆಯರ ಅಭೂತಪೂರ್ವ ಸೇವೆ, ಸಹಕಾರಗಳಿಂದ ನಡೆದ ಈ ಕಾರ್ಯಕ್ರಮ ಅಜರಾಮರ ಇತಿಹಾಸವನ್ನು ಸೃಷ್ಟಿಸಿದೆ. ಮಂಗಳೂರಿನಿಂದ ಗೋವ ತನಕ ಹಾಗೂ ಮುಂಬೈ, ಬೆಂಗಳೂರಿಂದ ಈ ಒಂದು ಕಾರ್ಯಕ್ರಮದಲ್ಲಿ ಕೊಂಕಣಿ ಖಾರ್ವಿ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.

ಆನಗಳ್ಳಿಯ ವೇದಮೂರ್ತಿ ಶ್ರೀ ಚನ್ನಕೇಶವ ಗಾಯಿತ್ರಿ ಭಟ್ ರವರ ಮಾರ್ಗದರ್ಶನದಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವ ಪವಿತ್ರ ಧಾರ್ಮಿಕ ಸಂಭ್ರಮದ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಈ ಪರಮ ಪವಿತ್ರ ದೈವಿಕ ಪ್ರಸ್ತುತಿಯ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀಗಳಾದ ವಿಶ್ವಪ್ರಸನ್ನ ಸ್ವಾಮಿಗಳು ಚಿತೈಸಿ ಸಮಸ್ತ ಭಜಕರಿಗೆ ಆಶೀರ್ವಚನ ನೀಡಿದರು.

ಕಂಚುಗೋಡಿನಲ್ಲಿ ನಡೆದ ಈ ಐತಿಹಾಸಿಕ ಕಾರ್ಯಕ್ರಮ ಹಲವು ಮನ್ವಂತರಗಳಿಗೆ ನಾಂದಿ ಹಾಡಿದೆ ಎಳೆಯರಿಂದ ಹಿರಿಯರವರೆಗೂ ಪ್ರತಿಯೊಬ್ಬರಲ್ಲಿ ಶ್ರೀ ರಾಮಚಂದ್ರ ಪ್ರಭುವಿನ ಆರಾಧನೆಯ ದಿವ್ಯ ಅನುಭೂತಿ ಭಕ್ತಿಪ್ರದವಾಗಿ ಮಿಳಿತಗೊಂಡಿತು. ಇಡೀ ಕಂಚುಗೋಡು ಊರು ಶ್ರೀ ಸೀತಾರಾಮ ಕಲ್ಯಾಣೋತ್ಸವದ ದಿವ್ಯ ಸ್ಮೃತಿಯಲ್ಲಿ ಪರಮ ಪಾವನವಾಯಿತು ತನ್ಮೂಲಕ ಖಾರ್ವಿ ಸಮಾಜದ ಆಸ್ಮಿತೆಗೆ ಮತ್ತು ಹಿರಿಮೆಗೆ ಹೊಸ ಗರಿಯನ್ನು ಮೂಡಿಸಿದೆ. ಸಾರ್ಥಕತೆಯ ಧನ್ಯತಾ ಭಾವ ಪ್ರತಿಯೊಬ್ಬರಲ್ಲೂ ಮೂಡಿದೆ ಎಲ್ಲಿಯೂ ಗೊಂದಲಗಳಿಗೆ ಆಸ್ಪದ ಕೊಡದೇ ಇಡೀ ಕಾರ್ಯಕ್ರಮವನ್ನು ಸಂಘಟಿಸಲಾಗಿದ್ದು, ಸಮರ್ಪಣ ಮನೋಭಾವದ ಸ್ವಯಂಸೇವಕರ ಪ್ರಾಮಾಣಿಕ ಕರ್ತವ್ಯ ನಿರ್ವಹಣೆ ಇದಕ್ಕೆ ಮುಖ್ಯ ಕಾರಣವಾಗಿದೆ. ಇಂದು ಸುಮಾರು 15000 ಜನರು ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿ ಪ್ರಸಾದ ಭೋಜನ ಸವಿದಿದ್ದಾರೆ. ಅನ್ನ ಸಂತರ್ಪಣೆ ವ್ಯವಸ್ಥೆ ಅತ್ಯಂತ ಅಚ್ಚುಕಟ್ಟಾಗಿ ಮತ್ತು ಶಿಸ್ತಿನಿಂದ ಕೂಡಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಈ ಸಂದರ್ಭದಲ್ಲಿ ಶ್ರೀರಾಮ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರು ಕಂಚುಗೋಡು ನಾಗೇಶ್ ಖಾರ್ವಿ ಮತ್ತು ಯುವ ಮುಂದಾಳು, ಸುವರ್ಣ ಮಹೋತ್ಸವ ಅಧ್ಯಕ್ಷರು ಚೌಕಿ ಸಂತೋಷ್ ಖಾರ್ವಿ, ಶ್ರೀರಾಮ ದೇವಸ್ಥಾನ ಮಹಿಳಾ ಸಮಿತಿಯ ಅಧ್ಯಕ್ಷೆ ಯಾಶೋಧನಾರಾಯಣ ಖಾರ್ವಿ ನೇತೃತ್ವದಲ್ಲಿ ಹಾಗೂ ಪದಾಧಿಕಾರಿ, ಸರ್ವ ಸದಸ್ಯರು, ಊರಿನ ಸಮಾಜ ಭಾಂಧವರು, ಗ್ರಾಮಸ್ಥರಿಗೆ ಕೊಂಕಣಿ ಖಾರ್ವಿ ಸಮಾಜದ ಪರವಾಗಿ ಖಾರ್ವಿ ಆನ್ಲೈನ್ ಅಭಿನಂದನೆಯನ್ನು ಸಲ್ಲಿಸುತ್ತದೆ.

ಸುಧಾಕರ ಖಾರ್ವಿ
www.kharvionline.com

Leave a Reply

Your email address will not be published. Required fields are marked *