ನಿಮ್ಮ ಒಂದು ಅಭಿನಂದನೆ….!!!

ಕೊಂಕಣಿ ಖಾರ್ವಿ ಸಮಾಜ ಕಂಡ ಧೀಮಂತ ವ್ಯಕ್ತಿತ್ವ ಕಡಲ ವಿಜ್ಞಾನಿ ಶ್ರೀ ಪ್ರಕಾಶ ಮೇಸ್ತಾ ಕಾಸರಕೋಡು ಟೊಂಕಾದ ಅಪೂರ್ವ ಜೀವವೈವಿಧ್ಯಗಳ ಸಮಗ್ರ ವೈಜ್ಞಾನಿಕ ಅಧ್ಯಯನಗಳನ್ನು ಸಂಬಂಧಪಟ್ಟ ಇಲಾಖೆ ಮತ್ತು ನ್ಯಾಯಾಲಯಗಳ ಮುಂದೆ ಇಟ್ಟು ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಸಮಾಜದ ಸಂಘ ಸಂಸ್ಥೆಗಳು ಮಾಡಬೇಕಾದ ಕೆಲಸವನ್ನು ಪ್ರಕಾಶ ಮೇಸ್ತರವರು ಮೂಂಚೂಣಿಯಲ್ಲಿ ನಿಂತು ಮಾಡುತ್ತಿದ್ದಾರೆ. ಕಾಸರಕೋಡು ಟೊಂಕಾದ ಸುಮಾರು 2000 ಮೀನುಗಾರರ ಕುಟುಂಬಗಳ ಬದುಕಿನ ಪ್ರಶ್ನೆ ಇಟ್ಟುಕೊಂಡು ಪ್ರಕಾಶ ಮೇಸ್ತರವರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಕಡಲ ವಿಜ್ಞಾನಿಯಾಗಿ ಅವರು ಜಲಚರಗಳ ಹೆಜ್ಜೆಗುರುತುಗಳನ್ನು,ಅವುಗಳ ಬದುಕಿನ ಅಪೂರ್ವ ಸಂಗತಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಸಮಗ್ರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.ಕಾಂಡ್ಲಾವನಗಳು ಮತ್ತು ಅಲ್ಲಿ ವಾಸಿಸುವ ಜೀವ ವೈವಿಧ್ಯಗಳ ಬಗ್ಗೆಯೂ ಅವರ ಅಧ್ಯಯನ ಅಭೂತಪೂರ್ವ ಈ ಎಲ್ಲಾ ಅದ್ಭುತ ಕಾರ್ಯಕ್ಕಾಗಿ ಅವರಿಗೆ ವೃಕ್ಷಲಕ್ಷ ಪ್ರಶಸ್ತಿ ಲಭಿಸಿದೆ. ಇಂತಹ ಅಪೂರ್ವ ಚೇತನವಾದ ಪ್ರಕಾಶ ಮೇಸ್ತರಿಗೆ ಈ ಸಂದರ್ಭದಲ್ಲಿ ಸಮಾಜದ ಅಭಿನಂದನೆ ಮಹಾಪೂರದಂತೆ ಹರಿದು ಬರಬೇಕು. ಅದು ಅವರ ಅಪೂರ್ವ ಸೇವೆಗೆ ಸಮಾಜದ ಸ್ಪೂರ್ತಿಯಾಗುತ್ತದೆ.ಕಡಲ ಜಲಚರಗಳ ಅಧ್ಯಯನದ ನೆರಳಿನಲ್ಲಿ ಮೀನುಗಾರರು ಮತ್ಸ್ಯ ಸಂಪತ್ತಿನ ವೃದ್ಧಿಗಾಗಿ ಪ್ರಕಾಶ ಮೇಸ್ತರವರ ಚಿಂತನಾಪೂರ್ವಕ ಸಲಹೆಗಳನ್ನು ಅನುಸರಿಸಬೇಕಾಗಿದೆ, ಕಾಸರಕೋಡು ಟೊಂಕಾದಲ್ಲಿ ಆಲೀವ್ ರಿಡ್ಲೇ ಪ್ರಭೇದದ ಕಡಲಾಮೆಗಳ ರಕ್ಷಣಾ ಕಾರ್ಯದಲ್ಲಿ ಪ್ರಕಾಶ ಮೇಸ್ತಾರವರ ಕೊಡುಗೆ ಅಪಾರವಾಗಿರುತ್ತದೆ.

ಕೊಂಕಣಿ ಖಾರ್ವಿ ಸಮಾಜ ಇಂದು ಎಲ್ಲಾ ಕ್ಷೇತ್ರದಲ್ಲೂ ತನ್ನ ಕ್ಷಿತಿಜವನ್ನು ವಿಸ್ತಾರವಾಗಿ ಹರಡಿಕೊಂಡಿದೆ. ನಮ್ಮ ಪ್ರತಿಭೆಗಳು ಸಾಧನೆಗೈದ ಸಂದರ್ಭದಲ್ಲಿ ಒಂದು ಅಭಿನಂದನೆ ಸಲ್ಲಿಸುವ ಕೆಲಸ ಕೂಡಾ ಆಗುತ್ತಿಲ್ಲ ಎಂಬ ವಿಷಾದಭಾವವಿದೆ. ನಮ್ಮ ಸಮಾಜದ ಧೀಮಂತ ವ್ಯಕ್ತಿ ಕಡಲ ವಿಜ್ಞಾನಿ ಶ್ರೀ ಪ್ರಕಾಶ ಮೇಸ್ತಾ ಅವರ ಸಾಧನೆಗಳನ್ನು ಪ್ರೋತ್ಸಾಹಿಸಿ, ಬೆಂಬಲಿಸಿದರೆ ಅವರು ಪಟ್ಟ ಪರಿಶ್ರಮ ಸಾರ್ಥಕತೆ ಕಾಣುತ್ತದೆ. ಉಳಿದವರಿಗೂ ಇದರಿಂದ ಉತ್ತೇಜನವೂ ದೊರಕುತ್ತದೆ. ಪ್ರಸ್ತುತ ಆ ಕೆಲಸ ಆಗುತ್ತಿಲ್ಲವೆಂದು ಬೇಸರವಾಗುತ್ತದೆ. ದಯವಿಟ್ಟು ಸಮಾಜ ಭಾಂಧವರಲ್ಲಿ ವಿಜ್ಞಾಪಿಸಿಕೊಳ್ಳುವುದೇನೆಂದರೆ ನಮ್ಮ ಸಮಾಜದ ಹೆಮ್ಮೆಯ ಕಡಲ ವಿಜ್ಞಾನಿ ಶ್ರೀ ಪ್ರಕಾಶ ಮೇಸ್ತಾ ಅವರಿಗೆ ಪ್ರೋತ್ಸಾಹ ಬೆಂಬಲದ ನಿಮ್ಮ ಮಾತುಗಳು ಹೆಚ್ಚಾಗಿ ಕೇಳಿ ಬರಲಿ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ವಿವಿಧ ಗ್ರೂಪ್ ಗಳನ್ನು ರಚಿಸಿಕೊಂಡಿರುವವರು ಸಾಧನೆ ಮತ್ತು ಅಭಿನಂದನೆಗಳನ್ನು ಬಿತ್ತರಿಸುವ ಕೆಲಸ ಮಾಡಿದರೆ ದೊಡ್ಡ ಉಪಕಾರವಾಗುತ್ತದೆ. ಇದು ಸಮಾಜದ ಪ್ರತಿಭಾವಂತರಿಗೆ ಅಭೂತಪೂರ್ವ ಚೈತನ್ಯ ನೀಡಿ ಮತ್ತಷ್ಟೂ ಸಾಧನೆಗೆ ಪ್ರೇರಣೆ ನೀಡಿದಂತಾಗುತ್ತದೆ. ದಯವಿಟ್ಟು ಸಮಾಜ ಭಾಂಧವರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ಸಮಾಜ ಕಟ್ಟುವಲ್ಲಿ ಸಹಕರಿಸಬೇಕೆಂದು ಕಳಕಳಿಯಿಂದ ನಿವೇದಿಸಿಕೊಳ್ಳುತ್ತೇನೆ.

ವಂದನೆಗಳೊಂದಿಗೆ,

Team kharvionline.com

Leave a Reply

Your email address will not be published. Required fields are marked *