ಕೊಂಕಣಿ ಖಾರ್ವಿ ಸಮಾಜದ ಪ್ರಪ್ರಥಮ ಜನಗಣತಿ

ಕೊಂಕಣಿ ಖಾರ್ವಿ ಸಮಾಜದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಮಾಜದ ಜನಗಣತಿ ಕಾರ್ಯವನ್ನು ಖಾರ್ವಿ ಆನ್ಲೈನ್ ಸಾರಥ್ಯದಲ್ಲಿ ಕೈಗೊಳ್ಳಲಾಗಿದ್ದು,ಕರ್ನಾಟಕದ ಕರಾವಳಿ ಸೇರಿದಂತೆ ಗೋವಾ, ಮುಂಬೈ , ಬೆಂಗಳೂರು ಇತರ ರಾಜ್ಯ ಮತ್ತು ಜಗತ್ತಿನಾದ್ಯಂತ ಹರಡಿಕೊಂಡಿರುವ ಕೊಂಕಣಿ ಖಾರ್ವಿ ಸಮಾಜದ ಶೈಕ್ಷಣಿಕ,ಉದ್ಯೋಗ ಕ್ಷೇತ್ರ,ಸಾಂಸ್ಕೃತಿಕ,ಧಾರ್ಮಿಕ ಇನ್ನಿತರ ವಿಷಯಗಳನ್ನು ಕಲೆಹಾಕಿ ಜನಸಂಖ್ಯೆಯ ಅಂಕಿಅಂಶಗಳನ್ನು ಕರಾರುವಾಕ್ಕಾಗಿ ಕ್ರೋಡಿಕರಣಗೊಳಿಸಲಾಗುವುದು.ಇದು ಡಿಜಿಟಲ್ ತಂತ್ರಾಂಶದ ರೂಪದಲ್ಲಿ ಶಾಶ್ವತವಾಗಿ ದಾಖಲೀಕರಣಗೊಳ್ಳಲಿದೆ.ಇದರಿಂದ ನಮ್ಮ ಸಮಾಜದ ಆಸ್ಮಿತೆ ದೃಢಗೊಳ್ಳುವುದರೊಂದಿಗೆ ಉದ್ಯೋಗಾವಕಾಶ ಸೇರಿದಂತೆ ಇನ್ನಿತರ ಸೌಲಭ್ಯಗಳು ಸಮಾಜಕ್ಕೆ ಸಿಗುತ್ತದೆ.ಈ ಬಹುಮುಖ್ಯ ಕಾರಣಗಳಿಗಾಗಿ ಖಾರ್ವಿ ಆನ್ಲೈನ್ ಸಮಾಜದ ಜನಗಣತಿಯ ಅಭಿಯಾನ ಕೈಗೊಂಡಿದ್ದು,ತಮ್ಮ ಬಳಿ ಬಂದಾಗ ಮೌಖಿಕವಾಗಿ ಮತ್ತು ಲಿಖಿತವಾಗಿ ಸಮಗ್ರ ವಿವರಗಳನ್ನು ನೀಡಿ ಸಹಕರಿಸಬೇಕಾಗಿ ಸಮಾಜ ಭಾಂಧವರ ಬಳಿ ವಿನಮ್ರವಾಗಿ ವಿಜ್ಞಾಪಿಸಿಕೊಳ್ಳುತ್ತೇವೆ.

ದಯವಿಟ್ಟು ಈ ಮಾಹಿತಿಯನ್ನು ಸಮಾಜ ಭಾಂಧವರು ತಮ್ಮ ವಾಟ್ಸಾಪ್ ಗ್ರೂಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಿನಿಮಯ ಮಾಡಿ ಸಹಕರಿಸಬೇಕಾಗಿ ವಿನಂತಿ.

Team kharvionline.com

Leave a Reply

Your email address will not be published. Required fields are marked *