ಆತ್ಮೀಯ ಸಮಾಜ ಬಾಂಧವರೇ,
ಶ್ರೀಮತ್ಪರಮಹಂಸೇತ್ಯಾದಿ ಬಿರುದಾವಳೀ ವಿರಾಜಮಾನರಾದ ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿ ಹಾಗೂ ತತ್ಕರಕಮಲ ಸಂಜಾತರಾದ ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಪರಮ ಪವಿತ್ರ ಚರಣಾರವಿಂದಕ್ಕೆ ಸಾಸ್ಟಾಂಗ ನಮನಗಳು. ಇದೇ ಬರುವ ತಾರೀಕು 21 ಜುಲೈ 2024 ಗುರುಪೂರ್ಣಿಮೆಯಂದು ಪರಂಪರಾನುಗತವಾಗಿ ಶೃಂಗೇರಿ ಶಾರದಾಪೀಠದಲ್ಲಿ ನಮ್ಮ ಯತಿವರ್ಯರು ಚಾತುರ್ಮಾಸ್ಯ ವೃತಾಚರಣೆಯನ್ನು ಕೈಗೊಳ್ಳುವವರಿದ್ದಾರೆ. ಮಹಾ ಸ್ವಾಮೀಜಿ ದ್ವಯರ ಆದೇಶದಂತೆ ನಮ್ಮ ಕೊಂಕಣಿ ಖಾರ್ವಿ ಸಮುದಾಯಕ್ಕೆ ಚಾತುರ್ಮಾಸ್ಯದ ಪ್ರಥಮ ವಾರದ ಶನಿವಾರ ಮತ್ತು ಆದಿತ್ಯವಾರದಂದು ಗುರುವಂದನೆಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ನಮ್ಮ ಸುಯೋಗವೆಂದು ಭಾವಿಸುತ್ತೇವೆ.
ಇದೇ ಬರುವ ತಾ. 28 ಜುಲೈ 2024ರ ಆದಿತ್ಯವಾರ ಬೆಳಿಗ್ಗೆ ಗಂಟೆ 10.00ಕ್ಕೆ ಶೃಂಗೇರಿ ಗುರುಭವನದಲ್ಲಿ ವಿಶೇಷವಾಗಿ ನಮ್ಮ ಕುಂದಾಪುರ-ಉಡುಪಿ-ಮಂಗಳೂರು ಪ್ರಾಂತ್ಯದ (ಗಂಗೊಳ್ಳಿ, ಕಂಚುಗೋಡು, ತ್ರಾಸಿ, ಕುಂದಾಪುರ, ಮದ್ದುಗುಡ್ಡೆ, ಬಸ್ರೂರು, ಕುಂದಾಪುರ ಕೋಡಿ, ಕೋಡಿ ಕನ್ಯಾಣ, ಸಾಸ್ತಾನ ಕೋಡಿತಲೆ, ಕೋಡಿಬೆಂಗ್ರೆ, ಮಲ್ಪೆ ಪಡುಕರೆ, ಮಂಗಳೂರು ಬೆಂಗ್ರೆ) ಕೊಂಕಣಿ ಖಾರ್ವಿ ಸಮಾಜ ಬಾಂಧವರಿಗೆ ಗುರುವಂದನೆ ಕಾರ್ಯಕ್ರಮವು ಶೃಂಗೇರಿ ಪೀಠದ ಕುಂದಾಪುರ ಪ್ರಾಂತೀಯ ಧರ್ಮಾಧಿಕಾರಿ ವೆ|| ಮೂ|| ಬಿ. ಲೋಕೇಶ ಅಡಿಗ ಮತ್ತು ಉಡುಪಿ ಪ್ರಾಂತೀಯ ಧರ್ಮಾಧಿಕಾರಿ ವೆ||ಮೂ|| ವಾಗೀಶ ಶಾಸ್ತ್ರೀಯವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ನಮ್ಮ ಸಮಾಜದವರನ್ನು ಉದ್ದೇಶಿಸಿ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿದಾನಂಗಳವರು ಅನುಗ್ರಹ ಸಂದೇಶ ವನ್ನು ನೀಡಲಿದ್ದಾರೆ. ಈ ಪವಿತ್ರವಾದ ಯಾತ್ರೆಗೆ ಸಮಾಜ ಬಾಂಧವರಾದ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಜಗದ್ಗುರುಗಳ ದಿವ್ಯ ದರ್ಶನವನ್ನು ಹಾಗೂ ಅವರ ಅನುಗ್ರಹ ಆಶೀರ್ವಾದವನ್ನು ಪಡೆದು ಧನ್ಯರಾಗೋಣ.
ವಿಶೇಷ ಸೂಚನೆ:
1. ಗುರುವಂದನಾ ಕಾರ್ಯಕ್ರಮಕ್ಕೆ ಭಾಗಿಯಾಗುವ ಪುರುಷರು ಬಿಳಿ ಪಂಚೆ, ಬಿಳಿ ಅಂಗಿ ,
ಬಿಳಿ ಶಾಲು ಹಾಗೂ ಮಹಿಳೆಯರು ಸಮವಸ್ತ್ರದ ಸೀರೆಯನ್ನು ಧರಿಸಿದರೆ ಸೂಕ್ತ, ವಿಶೇಷವಾಗಿ
ತರುಣಿಯರು (ಕುಂಕುಮ ಬಳೆ, ಹೂ) ಧರಿಸಿ ಚೂಡಿದಾರ ತೊಡಬೇಕೆಂದು ಹಿರಿಯರಿಂದ
ಸೂಚಿಸಲ್ಪ್ಪಿಟ್ಟಿದೆ.
2. ಎಲ್ಲಾ ಸಮಾಜ ಬಂಧುಗಳು ೯.೩೦ಕ್ಕೆ ಸರಿಯಾಗಿ ಗುರುಭವನದಲ್ಲಿ ಹಾಜರಿರಬೇಕು. ಗುರುಗಳ
ಅನುಗ್ರಹ ಸಂದೇಶ ಸಮಯಕ್ಕೆ ಸರಿಯಾಗಿ ನಡೆಯುವುದು.
3. ಆಯಾ ಊರಿನಿಂದ ಬರುವಾಗ ವಾಹನಗಳಿಗೆ ಪ್ರತ್ಯೇಕವಾಗಿ ಊರಿನ ಹೆಸರನ್ನು ನಮೂದಿಸಿದ
ಗುರುದರ್ಶನದ ಬ್ಯಾನರನ್ನು ಅಳವಡಿಸಬೇಕು. ಭಗವಾದ್ವಜದಿಂದ ಅಲಂಕರಿಸಿರಬೇಕು.
4. ಶ್ರೀ ಗುರುಭವನದಲ್ಲಿ ಶಿಸ್ತುಪಾಲನೆ ನಮ್ಮೆಲ್ಲರ ವಿಶೇಷ ಕರ್ತವ್ಯವಾಗಿರುತ್ತದೆ. ಆಯಾಯ
ಪ್ರದೇಶ/ ಊರಿನ ಬಾಂಧವರು ಜೊತೆಯಲ್ಲಿದ್ದು ಊರಿನ ಮುಖಂಡರು ಸೂಚಿಸಿದ ಸಲಹೆಯನ್ನು
ಪಾಲಿಸಬೇಕಾಗಿ ವಿನಂತಿ.
5. ಪಾದಪೂಜೆ ಸೇವೆ ಸಲ್ಲಿಸುವ ಸಂದರ್ಭ ಪಂಚೆ, ದೋತಿ, ಸೀರೆ ಮೊದಲಾದ ಸಾಂಪ್ರದಾಯಿಕ
ಉಡುಗೆಯನ್ನೇ ತೊಡಬೇಕು, ಜೀನ್ಸ್ ಮತ್ತು ಪ್ಯಾಂಟ್ ಕಡ್ಡಾಯವಾಗಿ ನಿಷೇಧವಿರುತ್ತದೆ.
6. ಹೆಚ್ಚಿನ ವಿವರವನ್ನು ಆಯಾಯ ಊರಿನ ಗುರುವಂದನ ಸಮಿತಿಯ ಸದಸ್ಯರು ನೀಡಲಿದ್ದಾರೆ.
7. ಶ್ರೀ ಮಠಕ್ಕೆ ವಸ್ತುರೂಪದಲ್ಲಿ ಅರ್ಪಿಸುವವರುಹೊರೆಕಾಣಿಕೆಯನ್ನು ಸಮಾಜದ ವತಿಯಿಂದ
ಯಾ ವೈಯಕ್ತಿಕವಾಗಿ ಸಲ್ಲಿಸಲು ಅವಕಾಶವಿದೆ.