ಕಂಚುಗೋಡುನಲ್ಲಿ ತೀವ್ರ ಕಡಲಕೊರೆತ ಸ್ಥಳಕ್ಕೆ ಬೈಂದೂರು ಶಾಸಕರು ಭೇಟಿ. ಶಾಶ್ವತ ಪರಿಹಾರ ಕಲ್ಪಿಸಿಕೊಡಲು ಮೀನುಗಾರರ ಆಗ್ರಹ
ಕುಂದಾಪುರ ತಾಲೂಕು ಕಂಚುಗೋಡು ಪ್ರದೇಶದಲ್ಲಿ ಕಡಲಕೊರೆತ ತೀವ್ರವಾಗಿದ್ದು, ಅವೈಜ್ಞಾನಿಕ ತಡೆಗೋಡೆ ಕಾಮಗಾರಿಯಿಂದ ಸಮುದ್ರದ ನೀರು ಉಕ್ಕೇರಿ ಬಂದು ಸ್ಥಳೀಯ ಮೀನುಗಾರರ ಮನೆ ಮತ್ತು ದೋಣಿಗಳಿಗೆ ಹಾನಿಯಾಗಿದ್ದು,ತೆಂಗಿನಮರಗಳು ಸಮುದ್ರ ಪಾಲಾಗಿದೆ.ಇಂದು ಈ ಪ್ರದೇಶಕ್ಕೆ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಯವರು ಕಡಲಕೊರೆತ ಪ್ರದೇಶಕ್ಕೆ ಭೇಟಿ ನೀಡಿದರು ,ತ್ರಾಸಿ ಪಂಚಾಯತ್ ಅಧ್ಯಕ್ಷರಾದ ಮಿಥುನ್ ದೇವಾಡಿಗ,ರಾಮದಾಸ್ ಖಾರ್ವಿ, ನಾಗರಾಜ್ ಶೀನಾ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ಸಮಾಜ ಸೇವಕರು ಮತ್ತು ಮೀನುಗಾರ ಮುಖಂಡರಾದ ನಾಗೇಶ್ ಖಾರ್ವಿಯವರು ಮಾತನಾಡಿ, ಪ್ರತಿವರ್ಷ ಮಳೆಗಾಲದಲ್ಲಿ ಕಡಲಕೊರೆತ ಸಮಸ್ಯೆ ತಲೆದೋರುತ್ತಿದ್ದು, ಇದುವರೆಗೂ ಮೀನುಗಾರರಿಗೆ ಈ ಸಮಸ್ಯೆಯಿಂದ ಮುಕ್ತಿ ದೊರಕಿಲ್ಲ ಮತ್ತು ಹಾನಿಗೊಳಗಾದ ಮನೆಗಳಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ.ಇನ್ನಾದರೂ ಸರ್ಕಾರ ಕಡಲಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ