ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಗಂಗೊಳ್ಳಿ ಬಂದರಿನ ಅಳಿವೆ ಪ್ರದೇಶದಲ್ಲಿ ನಡೆದ ಡ್ರೆಜ್ಜಿಂಗ್ ಕಾಮಗಾರಿ ಅವೈಜ್ಞಾನಿಕ ಮತ್ತುಅಸಮರ್ಪಕವಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಮೀನುಗಾರರ ಬಹುವರ್ಷಗಳ ಬೇಡಿಕೆಯಂತೆ ಕಳೆದ ನವೆಂಬರ್ ತಿಂಗಳಲ್ಲಿ 4.6 ಕೋಟಿ ರೂ ವೆಚ್ಚದಲ್ಲಿ ಅಳಿವೆಯ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಗಿತ್ತು ಈ ಕಾಮಗಾರಿಗೆ ಒಂದು ವರ್ಷಗಳ ಕಾಲಾವಕಾಶ ನೀಡಲಾಗಿದ್ದು, ಗುತ್ತಿಗೆದಾರರು ಕೇವಲ 2 ತಿಂಗಳಲ್ಲಿ ಡ್ರೆಜ್ಜಿಂಗ್ ಕಾಮಗಾರಿಯನ್ನು ಕಳಪೆಯಾಗಿ ಮತ್ತು ಅವೈಜ್ಞಾನಿಕವಾಗಿ ನಿರ್ವಹಿಸಿ ಪರಾರಿಯಾಗಿದ್ದಾರೆ ಎಂಬ ಆರೋಪ ಮೀನುಗಾರರಿಂದ ಕೇಳಿ ಬಂದಿದೆ. ಗಂಗೊಳ್ಳಿ ಕೋಡಿ ಅಳಿವೆ ಕಾಮಗಾರಿ ನಡೆಸಿ ತೆಗೆದ ಹೂಳನ್ನು ಅಳಿವೆಯ ಸ್ವಲ್ಪವೇ ದೂರದಲ್ಲಿ ಹಾಕಿರುವುದು ಮತ್ತು ಬೋಟ್ ಗಳು ಗಂಗೊಳ್ಳಿ ಪ್ರವೇಶಿಸುವ ದಾರಿಯಲ್ಲಿ ಹೂಳೆತ್ತುವ ಕಾಮಗಾರಿ ನಡೆಸದೇ ಇರುವುದು ಸಮಸ್ಯೆಗಳಿಗೆ ಕಾರಣವಾಗಿದೆ. ತೆಗೆದ ಹೂಳನ್ನು ಅಳಿವೆಯ ಸ್ವಲ್ಪವೇ ದೂರದಲ್ಲಿ ಹಾಕಿರುವುದರಿಂದ ಹೂಳು ಹರಿದು ಬಂದು ಅಳಿವೆಯ ಮುಖಭಾಗದಲ್ಲಿ ಮರಳು ದಿಬ್ಬಗಳು ಸೃಷ್ಟಿಯಾಗಿದೆ ಇದರಿಂದ ಸಮಸ್ಯೆ ಉಲ್ಭಣಗೊಂಡಿದ್ದು, ದೋಣಿಗಳು ಮತ್ತು ಬೋಟ್ ಗಳಿಗೆ ಗಂಗೊಳ್ಳಿ ಬಂದರಿಗೆ ಪ್ರವೇಶಿಸಲು ತೊಂದರೆಯಾಗಿದೆ.
ಡ್ರೆಜ್ಜಿಂಗ್ ಕಾಮಗಾರಿಯನ್ನು ಅವಶ್ಯವಿದ್ದಲ್ಲಿ ಮಾಡದೇ ಬೇಕಾಬಿಟ್ಟಿಯಾಗಿ ಅವೈಜ್ಞಾನಿಕವಾಗಿ ನಡೆಸಲಾಗಿದೆ ಎಂಬುದು ಮೀನುಗಾರರ ಮುಖ್ಯ ಆರೋಪವಾಗಿದೆ.
ಗಂಗೊಳ್ಳಿಯಲ್ಲಿ ಸುಮಾರು 100 ಫಿಶಿಂಗ್ ಬೋಟ್ ಸೇರಿದಂತೆ 400 ಬೋಟ್ ಗಳಿವೆ ಸುಮಾರು 25 ಕ್ಕೂ ಹೆಚ್ಚು ಆಳಸಮುದ್ರ ಬೋಟ್ ಮತ್ತು 30 ನಾಡದೋಣಿ 300 ಸಣ್ಣ ದೋಣಿಗಳಿವೆ
ಈ ಬಗ್ಗೆ ಸಂಬಂಧಪಟ್ಟವರು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದ ಸಾಧ್ಯತೆ ಇದೆ ಎಂದು ಮೀನುಗಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೀನುಗಾರಿಕೆ ಆರಂಭವಾಗಿದೆ ಈ ಅಳಿವೆ ಸಮಸ್ಯೆಯಿಂದ ಮೀನುಗಾರರು ಹೈರಾಣಾಗಿದ್ದಾರೆ.
ಅನಾಹುತವಾಗುವ ಮೊದಲೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಳಿವೆ ಸಮಸ್ಯೆಗಳ ಬಗ್ಗೆ ತಕ್ಷಣದ ಕ್ರಮ ಕೈಗೊಳ್ಳಬೇಕಾಗಿದೆ ಈ ಅಳಿವೆ ಸಮಸ್ಯೆಯ ಜೊತೆಗೆ ಜೆಟ್ಟಿ ಸಮಸ್ಯೆ ಕೂಡಾ ಇಲ್ಲಿದೆ ಬೋಟ್ ನಿಂದ ಮೀನುಗಳನ್ನು ಇಳಿಸಲು ಕೋಟ್ಯಂತರ ವೆಚ್ಚದಲ್ಲಿ ಇಲ್ಲಿ ಜೆಟ್ಟಿ ನಿರ್ಮಾಣ ಮಾಡಲಾಗಿತ್ತು ಜೆಟ್ಟಿ ನಿರ್ಮಾಣಗೊಂಡ ಕೆಲವೇ ದಿನಗಳಲ್ಲಿ ಕುಸಿದು ಕೋಟ್ಯಂತರ ರೂಪಾಯಿ ನೀರು ಪಾಲಾಯಿತು. ಜೆಟ್ಟಿ ಕುಸಿದು ಒಂದು ವರ್ಷಗಳಾದರೂ ಇದುವರೆಗೂ ದುರಸ್ಥಿಯಾಗಿಲ್ಲ ಅವ್ಯವಸ್ಥೆಯ ವ್ಯವಸ್ಥಾಪಕರ ಭ್ರಷ್ಟಾಚಾರಕ್ಕೆ ಇದು ಜ್ವಲಂತ ನಿದರ್ಶನವಾಗಿದೆ
ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಕೂಡಲೇ ಗಂಗೊಳ್ಳಿ ಅಳಿವೆ ಮತ್ತು ಜೆಟ್ಟಿ ಸಮಸ್ಯೆಗೆ ಸಮರ್ಪಕ ರೀತಿಯಲ್ಲಿ ಪರಿಹಾರ ಕಲ್ಪಿಸಿ ಮುಂದೆ ಆಗಬಹುದಾದ ಅನಾಹುತಗಳನ್ನು ನಿವಾರಿಸಬೇಕು ಎಂದು ಸಮಸ್ತ ಮೀನುಗಾರರ ಪರವಾಗಿ ಮೀನುಗಾರರ ಮುಖಂಡರಾದ
ಕಂಚುಗೋಡು ನಾಗೇಶ್ ಖಾರ್ವಿ ಹಾಗೂ
ಪ್ರಕಾಶ್ ಖಾರ್ವಿ
ತ್ರಾಸಿ, ಹೊಸಪೇಟೆ ರವರು ಆಗ್ರಹಿಸಿದ್ದಾರೆ.
ವರದಿ: ಸುಧಾಕರ್ ಖಾರ್ವಿ
www.kharvionline.com