ಕೊಂಕಣಿ ಖಾರ್ವಿ ಸಮಾಜ ವೆಲ್ಫೇಲ್ ಅಸೋಸಿಯೇಷನ್ ಮುಂಬೈ ಇದರ 19 ನೇ ವರ್ಷದ ಕಾರ್ಯಕ್ರಮ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವೈಭವದಿಂದ ಆದಿತ್ಯವಾರ 9 ನೇ ತಾರೀಕನಂದು ಸಂಪನ್ನಗೊಂಡಿತ್ತು.
ಬೆಳಿಗ್ಗೆ ಮಹಾಗಣಪತಿ ಹವನ,ಶುದ್ಧ ಪುಣ್ಯಾಹ,ವಿಷ್ಣು ಸಹಸ್ರನಾಮ ,ಲಕ್ಷ ತುಳಸಿ ಆರಾಧನೆ ನಡೆಯಿತು.ಬಳಿಕ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮಗಳು ನೇರವೇರಿತು.
ಮದ್ಯಾಹ್ನ ಪ್ರಸಾದ ವಿತರಣೆ,ಸಂಜೆ ಹಳದಿ ಕುಂಕುಮ,ಗೌರವ ವೃತ,ಲಕ್ಕಿ ಡ್ರಾಗಳು ನಡೆದವು ಮತ್ತು ವೇದಿಕೆಯಲ್ಲಿ ಮನರಂಜನಾ ಕಾರ್ಯಕ್ರಮಗಳು ನಡೆಯಿತು.ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ವಿರಾರ್ ಈಸ್ಟ್ ಮಂಗಲ್ ಮೂರ್ತಿ ಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಪಧಾದಿಕಾರಿಗಳು,ಸದಸ್ಯರು ಮತ್ತು ಸಮಾಜ ಭಾಂಧವರು ಉಪಸ್ಥಿತರಿದ್ದರು.