ಹೊನ್ನಾವರ ಕಾಸರಕೋಡು ಟೊಂಕಾದಲ್ಲಿ ನಮ್ಮ ಸಮಾಜ ಭಾಂದವರ ಪರಿಸ್ಥಿತಿ ಅತ್ಯಂತ ದಾರುಣವಾಗಿದ್ದು, ಅವರನ್ನು ಒಕ್ಕಲೆಬ್ಬಿಸಲು ಜಿಲ್ಲಾಡಳಿತ ಅಮಾನವೀಯವಾಗಿ ದೌರ್ಜನ್ಯ ನಡೆಸುತ್ತಿದೆ. ಹಲವು ವರ್ಷಗಳಿಂದ ಮುಖ್ಯವಾಗಿ ಕೊಂಕಣಿ ಖಾರ್ವಿ ಸಮಾಜವನ್ನು ಗುರಿಯಾಗಿಸಿಕೊಂಡು ಪೋಲೀಸ್ ದೌರ್ಜನ್ಯ ನಡೆಯುತ್ತಿದ್ದು. ರಾಜಕಾರಣಿಗಳು ಮತ್ತು ಬಂಡವಾಳಶಾಹಿಗಳ ಅಪವಿತ್ರ ಮೈತ್ರಿಯ ಪರಿಣಾಮವಾಗಿ ವಾಣಿಜ್ಯ ಬಂದರು ನಿರ್ಮಾಣ ಕಾರ್ಯವನ್ನು ಪ್ರತಿಭಟಿಸಿದ ಮೀನುಗಾರರ ಮೇಲೆ ಉತ್ತರ ಕನ್ನಡ ಜಿಲ್ಲಾಡಳಿತ ಅಮಾನವೀಯ ದೌರ್ಜನ್ಯ ನಡೆಸಿದ್ದು, ಶಾಂತಿಯುತ ಪ್ರತಿಭಟನೆ ನಡೆಸಿದ ಅಮಾಯಕ ಮೀನುಗಾರರ ಮೇಲೆ ಪ್ರಬಲವಾದ ಕೇಸು ದಾಖಲಿಸಿದೆ. ಈಗಾಗಲೇ ಐವತ್ತಕ್ಕೂ ಹೆಚ್ಚು ಮೀನುಗಾರರನ್ನು ಬಂಧಿಸಿ ಜೈಲಿಗಟ್ಟಿದ್ದು, ಮತ್ತೆ ನೂರಾರು ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಕಾಸರಕೋಡು ಕೊಂಕಣಿ ಖಾರ್ವಿ ಸಮಾಜ ತಮ್ಮ ಮನೆ ಬದುಕು ಕಳೆದುಕೊಂಡು ಬೀದಿ ಪಾಲಾಗುವ ಈ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಅವರಿಗೆ ಬೆಂಬಲ ನೀಡಿ ನೈತಿಕ ಸ್ಥೈರ್ಯ ತುಂಬಬೇಕಾಗಿದೆ. ಇಡೀ ದೇಶಕ್ಕೆ ಮೀನಿನ ಪೌಷ್ಟಿಕ ಆಹಾರವನ್ನು ಪೂರೈಸುವ ಮೀನುಗಾರರ ಮೇಲೆ ಉತ್ತರ ಕನ್ನಡ ಜಿಲ್ಲಾಡಳಿತ ನಡೆಸುತ್ತಿರುವ ದೌರ್ಜನ್ಯ ಖಂಡನೀಯವಾಗಿದ್ದು, ಕೊಂಕಣಿ ಖಾರ್ವಿ ಸಮಾಜದ ಪರವಾಗಿ ಖಾರ್ವಿ ಆನ್ಲೈನ್ ಈ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತದೆ.
www.kharvionline.com