ಬೆಂಗಳೂರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೀರೋ ಆದ ನಿಶಾಂತ್ ಖಾರ್ವಿ

ಸಮುದ್ರ ಇರೋದೋ ಹಾಗೆ ಎಂತರವನ್ನು ಕೂಡ ಕೈ ಬಿಸಿ ಕರೆಯುತ್ತೆ ಆಕರ್ಷಿಸುತ್ತದೆ ಆದರೆ ನಾವು ಮರಳಗಾದೇ ಎಚ್ಚರಿಕೆ ವಹಿಸಿದರೆ ಒಳಿತು.

ಸಮುದ್ರ ಪ್ರಕ್ಷುಬ್ಧ ಸ್ಥಿತಿಯಲ್ಲಿ ಇರುವಾಗ ಅಲೆಗಳ ಅಬ್ಬರ ಇರುವಾಗ ಯಾರು ಕೂಡ ನೀರಿಗೆ ಇಳಿಯಬೇಡಿ ಎಂದು ಎಚ್ಚರಿಕೆಯ ಫಲಕ ಹಾಕಿಟ್ಟರು, ಜಾಗ್ರತೆ ಹೇಳಿದರು ಮಾತನ್ನು ಅಸಡ್ಡೆ ಮಾಡಿ ಕೆಲವೊಮ್ಮೆ ಪ್ರವಾಸಿಗರು ಕೇಳದೇ ನಾನು ಈಜುಗಾರ ಸ್ವಿಮ್ಮಿಂಗ್ ಫೂಲ್ ಮಾಸ್ಟರ್ ಎಂದು ನೀರಿಗಿಳಿದು ಎಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ, ನದಿ ಕೆರೆ ಈಜುಕೋಳದಲ್ಲಿ ಈಜಿದಷ್ಟು ಸುಲಭವಲ್ಲ ಸಮುದ್ರ ದಿನದಿನ ಕ್ಷಣ ಕ್ಷಣ ಪ್ರತಿ ಘಳಿಗೊಮ್ಮೆ ನೀರಿನ ಗುಣ ಬದಲಾಗುತ್ತ ಇರುತ್ತೆ, ಸಮುದ್ರದ ಮೇಲ್ಮೈಯನ್ನು ನೋಡಿದಾಗ ಏನೂ ಗೊತ್ತಾಗಲ್ಲ ಶಾಂತವಾಗಿ ಕಾಣುತ್ತದೆ ಆದರೆ ನೀರಿನೊಳಗೆ ಆಗುವ ನೀರಿನ ಸೆಳೆತ ಸುರುಳಿ ಬದಲಾವಣೆ ನೀರಿಗೆ ಇಳಿದಾಗಲೇ ಅಪಾಯದ ಅನುಭವ ಆಗುವುದು.

ಬೆಂಗಳೂರು ಇಂಜಿನಿಯರಿಂಗ್ ವಿದ್ಯಾರ್ಥಿ ಈಜುಕೋಳ ಈಜುಗಾರ ಈಜು ಗೊತ್ತಿದೆ ಎಂದು ತ್ರಾಸಿ ಮರವಂತೆ ಸಮುದ್ರದ ನೀರಿಗೆ ಇಳಿದವನನ್ನು ನೀರಿನ ಸುಳಿ ಎಳೆದುಕೊಂಡು ಹೋಯಿತು ಸಮುದ್ರದ ಮಧ್ಯ ಬಹಳಷ್ಟು ಹೊತ್ತು ಜೀವನ್ಮರಣ ಹೋರಾಟ ನಡೆಸಿ ಇನ್ನೇನು ಮುಳುಗಿ ಪ್ರಾಣ ಹೋಗುವ ಸಮಯದಲ್ಲೆ ಹೀರೋ ಆಗಿ ಬಂದ ಕರಾವಳಿ ಪಡೆ ಸ್ಥಳೀಯ ಸಿಬಂದಿ ನಿಶಾಂತ್ ಖಾರ್ವಿ ತನ್ನ ಜೀವದ ಹಂಗನ್ನು ತೊರೆದು ನೀರಿಗೆ ಹಾರಿ ವಿದ್ಯಾರ್ಥಿಗಳ ಜೀವ ಉಳಿಸಿ ದಡಕ್ಕೆ ತಂದಿದ್ದಾರೆ. ಇವರಿಗೆ ಸ್ಥಳೀಯ ಮೀನುಗಾರ ವಿಷ್ಣು ಖಾರ್ವಿ ಸಹಕಾರ ನೀಡಿದ್ದಾರೆ. ಜೀವ ಉಳಿದ ಖುಷಿಯಲ್ಲಿ ಹಣ ಹಾಕ್ತೆ ಎಷ್ಟು ಬೇಕು ಎಂದು ಪ್ರವಾಸಿಗ ಹೇಳಿದರು ಏನು ಬೇಡ ಅಂದು ಬಿಟ್ಟ ನಿಶಾಂತ್ ಖಾರ್ವಿ ಹೊಸಪೇಟೆ, ಇದೆ ಅಲ್ಲವೇ ನಿಸ್ವಾರ್ಥ ಸೇವೆ ಪ್ರಾಣ ಉಳಿಸಿದ ಪುಣ್ಯ ಅವರನ್ನು ಒಳ್ಳೆದ್ ಮಾಡುತ್ತೆ ಒಳ್ಳೆಯದೇ ಆಗಲಿ ಇಷ್ಟು ಸಲದೂ ಕರಾವಳಿ ಪೋಲಿಸ್ ಪಡೆ ಅವರನ್ನು ಸನ್ಮಾನಿಸಿ ಗೌರವಿಸಲಿ ಎಂದು ಆಶಿಸುತ್ತೇನೆ ಅದು ಅವರಿಗೆ ಇನ್ನಷ್ಟು ಸೇವೆ ಮಾಡಲು ಜೀವ ಉಳಿಸಲು ಆತ್ಮ ಸ್ಥೈರ್ಯ ನೀಡುತ್ತೆ ಇದರಿಂದ ಮತ್ತಷ್ಟು ಸೇವಕರಿಗೆ ಇಂತಹ ಕೆಲಸಗಳನ್ನು ಮಾಡಲು ಪ್ರೋತ್ಸಾಹ ನೀಡಿದಂತೆ ಆಗುತ್ತೆ.

ಸಣ್ಣಪುಟ್ಟ ಕೆಲಸಕ್ಕೆಲ್ಲ ಶೌರ್ಯ ಪ್ರಶಸ್ತಿ ನೀಡುವ ಸರಕಾರ ನಿಜವಾಗಿಯೂ ತನ್ನ ಪ್ರಾಣದ ಹಂಗನ್ನು ತೊರೆದು ಇನ್ನೊಬ್ಬರ ಜೀವ ಉಳಿಸಿ ಜೀವನ ನೀಡುವ ಇಂತವರಿಗೆ ಸರಕಾರ ಗುರುತಿಸಿ ಶೌರ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಬೇಕು… ಇಂತವರು ಎಷ್ಟೋ ಜನ ಸಾಹಸಿ ಮೀನುಗಾರರು ನಮ್ಮಲ್ಲಿ ವರ್ಷಕ್ಕೆ ನೂರಾರು ಜನರ ಜೀವ ಉಳಿಸುತ್ತಾರೆ ಇದು ಸುದ್ದಿ ಆಗೋದೆ ಇಲ್ಲ ನಮ್ಮ ಸ್ಥಳೀಯ ಶಾಸಕರು ಇಂತಹ ಬಡ ಮೀನುಗಾರರಿಗೆ ಗುರುತಿಸಿ ಸರಕಾರದ ಗಮನಕ್ಕೆ ತಂದು ಗೌರವಿಸಿ ಎಂದು ಕೇಳಿಕೊಳುತ್ತೇನೆ.

ಹೆಬ್ಬುಲಿ ರಮ್ಮಿ

Leave a Reply

Your email address will not be published. Required fields are marked *