ಗಂಗೊಳ್ಳಿ: ಲಸಿಕಾ ಅಭಿಯಾನದಲ್ಲಿ ಸೇವಾಭಾರತಿ ಸ್ವಯಂ ಸೇವಕರ ಸೇವಾಕಾರ್ಯ

ಗಂಗೊಳ್ಳಿ ಪ್ರಾಥಮಿಕ ಆರೋಗ್ಯಕೇಂಧ್ರ ವತಿಯಿಂದ ನಡೆಯುತ್ತಿರುವ ಕೊವೀಡ್ 19 ಲಸಿಕಾ ಅಭಿಯಾನದಲ್ಲಿ ಸೇವಾಭಾರತಿಯ ಸ್ವಯಂ ಸೇವಕರ ತಂಡ ಅತ್ಯತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಡೇಟಾ ದಾಖಲಾತಿ ಹಾಗೂ ಇನ್ನಿತರ ಸೇವಾ ಚಟುವಟಿಗೆಗಳಲ್ಲಿ ನಿರತರಾದ ಸೇವಾಭಾರತಿ ತಂಡಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಸೇವಾಭಾರತಿ ತಂಡವು ಲಸಿಕೆಯ ವಿಚಾರದಲ್ಲಿ ಯಾವುದೇ ಮಾಹಿತಿಗಾಗಿ ಸಾರ್ವಜನಿಕರಿಗೆ ಸಹಾಯವಾಣಿಯನ್ನು ಕೂಡ ಪ್ರಾರಂಭಿಸಿದೆ. ಲಸಿಕೆಯ ಇರುವಿಕೆಯನ್ನು ಕರೆಯ ಮುಖಾಂತರ ತಿಳಿದುಕೊಂಡು ಲಸಿಕಾ ಕೇಂದ್ರಕ್ಕೆ ಸಾರ್ವಜನಿಕರು ಬರಬಹುದಾಗಿ ಈ ತಂಡ ತಿಳಿಸಿದೆ.

ಗಂಗೊಳ್ಳೀ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸೇವಾಭಾರತಿಯ ಸಹಕಾರದಿಂದ ಲಸಿಕಾ ಅಭಿಯಾನ ನಡೆಯುತ್ತಿದ್ದು ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರಸ್ವತಿ ವಿದ್ಯಾಲಯ ಶಾಲೆ(ಲಸಿಕೆಯ ಇರುವಿಕೆಯ ಮೇರೆಗೆ) ನಡೆಯುತ್ತಿದೆ. ಗಂಗೊಳ್ಳಿಯ ಸಾರ್ವಜನಿಕರು ಲಸಿಕೆ ವಿಚಾರದಲ್ಲಿ ಸ್ವಯಂ ಸೇವಕರನ್ನು ಯಾವುದೇ ಸಮಯದಲ್ಲಿ ಸಂಪರ್ಕಿಸಬಹುದು.

ಲಸಿಕಾ ಕೇಂದ್ರಕ್ಕೆ ಬರುವ ಮುನ್ನ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸೇವಾಭಾರತಿ ಹೆಲ್ಪಲೈನ್ ಗೆ ಕರೆ ಮಾಡಿ ಬರುವುದು ಉತ್ತಮ…

9740812506, 8152087641
ಸೇವೆಯೇ ಧ್ಯೇಯ ಸೇವಾಭಾರತಿ

Leave a Reply

Your email address will not be published. Required fields are marked *