ಕುಂದಾಪುರ: ಜಿಲ್ಲೆಯಲ್ಲಿ ಕೋರೊನಾ ಸೋಂಕು ಕಡಿಮೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗಿಲ್ಲ. 38% ದಿಂದ 19% ಇಳಿದಿದೆ. ಇದೀಗ ಜೂನ್ 7 ರವರೆಗೆ 10% ಕ್ಕಿಂತ ಕಡಿಮೆ ಸಂಖ್ಯೆಗೆ ಇಳಿಯಬೇಕೆಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಪಾಸಿಟಿವಿಟಿಯ ಸಂಖ್ಯೆ ಕಡಿಮೆಯಾಗದಿದ್ದರೆ ಮತ್ತೆ ಜಿಲ್ಲೆಯಲ್ಲಿ ಲಾಕ್’ಡೌನ್ ಮುಂದುವರಿಸ ಬೇಕಾಗುತ್ತದೆಂದು ಹೇಳಿದ್ದಾರೆ. ಜನ ಇನ್ನು ಕೂಡ ಕೆಲವು ಜನ ತಿರುಗಾಡುತ್ತಿದ್ಧಾರೆ.
ಪಂಚಾಯತ್ ನಲ್ಲಿ ಈಗಾಗಲೇ 50+ ಪಾಸಿಟಿವ್ ಇರುವ ಗ್ರಾಮಗಳನ್ನು ಸಿಲ್’ಡೌನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅದರೊಂದಿಗೆ ಜನರ ಸಹಕಾರ ಮುಖ್ಯ ಇಲ್ಲದಿದ್ದರೆ ಮತ್ತಷ್ಟು ದಿನ ಲಾಕ್’ಡೌನ್ ವಿಸ್ತರಣೆ ಮಾಡಬೇಕಾಗುತ್ತದೆಂದು ಹೇಳಿದ್ದಾರೆ.