ನೋಡ ನೋಡುತ್ತಲೇ ಆ ಹುಡುಗ ಅದ್ಭುತ ಸ್ರಷ್ಟಿಸಿದ. ಬಾಲ್ಯದಿಂದಲೂ ಚಿತ್ರ ಬಿಡಿಸಿ ಸಂತೋಷ ಪಡುತ್ತಿದ್ದ ಆ ಬಾಲಕನಿಗೆ ಇದೇ ಹವ್ಯಾಸ ಆಗುತ್ತದೆ. ಏನೇ ನೋಡಲಿ ಅದನ್ನು ಕಾಗದಲ್ಲಿ ಆ ಕೂಡಲೇ ಬಿಡಿಸಿ ತೃಪ್ತಿ ಪಡುತ್ತಿದ್ದ.
ಪ್ರೈಮರಿ ಸ್ಕೂಲ್ ನಲ್ಲಿ ದ್ದಾಗಲೆ ಈ ಚಿತ್ರಗಾರಿಕೆ ಗರಿ ಗೆದರಿತ್ತು. ಒಂದೊಂದು ಚಿತ್ರಗಳು ಈತನ ಪ್ರತಿಭೆಗೆ ಸಾಕ್ಷಿಯಾಗುತ್ತ ಈತನ ಬಹುಮುಖ ಪ್ರತಿಭೆಯನ್ನು ಅನಾವರಣ ಗೊಳಿಸುತ್ತ ಬಂತು. ಹದ್ದಿನ ಕಣ್ಣು ಈತನದು.ಒಮ್ಮೆ ನೋಡಿದರೆ ಸಾಕು……ಅದು ಚಿತ್ರವಾಗಿ ಮೂಡಿ ಬರುತಿತ್ತು.ತನ್ನ ಸ್ಕೂಲ್ ಟೀಚೆರ್ಸ್ ಚಿತ್ರ ಬಿಡಿಸಿ ಶಹಬ್ಬಾಸ್ ಗಿಟ್ಟಿಸಿ ಕೊಂಡ ಈತನ ಮಾಂತ್ರಿಕ ಶಕ್ತಿಯ ಕೈ ಗಳಲ್ಲಿ ಮೂಡಿಬಂದ ವಾಟರ್ ಕಲರ್ ನ ಪ್ರಕ್ರತಿ ಚಿತ್ರಗಳು so beautiful
ಇಲ್ಲಿರುವ ಈತ ಬಿಡಿಸಿದ ಚಿತ್ರಗಳು ನೋಡಿದರೆ ನಿಜಕ್ಕೂ ವಾವ್…ಎಂದು ಹುಬ್ಬೆರುತ್ತದೆ. ಈತನ ಶ್ರದ್ಧೆಗೆ ಸಲ್ಯೂಟ್. ಸ್ವ ಪ್ರತಿಭೆ ಯಿಂದ ಸ್ವ ಶ್ರಮದಿಂದ ಕಲೆಗಾರಿಕೆಯನ್ನು ಮೈ ಗೂಡಿಸಿಕೊಂದ ಈ ಬಾಲಕ ಅಪರೂಪದ ಪ್ರತಿಭೆ ಎನ್ನ ಬಹುದು. ಯಾವ ತರಬೇತಿ ತರಗತಿ ಗೂ ಹೋಗದೆ ಕೇವಲ ಆಸಕ್ತಿ ಮತ್ತು ಶ್ರಮ ಶ್ರದ್ದೆ ಛಲ ದಿಂದ ದಿಟ್ಟ ಹೆಜ್ಜೆ ಇಟ್ಟ ಈ ಬಾಲಕ ಮುಂದೊಂದು ದಿನ ಖಂಡಿತ ವಿನೂತನ ಸಾಧನೆ ಮಾಡುತ್ತಾನೆ.ಈತನ ಚಿತ್ರದ
Finishing ನಿಜಕ್ಕೂ ಸೂಪೆರ್ಬ್.ವೃತ್ತಿಪರ ಕಲಾಕಾರ್ ಬಿಡಿಸಿದಂತೆ ಇದೆ ಇವನ ಚಿತ್ರದ ನಿಪುಣತೆ. Paintings ಅಂತೂ ಸೊಗಸಾಗಿ ಮೂಡಿದೆ. ಬಣ್ಣದ ರಚನೆಯಲ್ಲಿ ಟ್ಯಾಟೂ ಆರ್ಟಿಸ್ಟ್ ಗುಜ್ಜಾಡಿ ಯಶವಂತ್ ಕೆಲವೊಂದು ಕಿವಿಮಾತು ಹೇಳಿದರು. ಹೀಗೆ ಶಾಲಾ ಕಾಲೇಜು ಗಳಲ್ಲಿ ತನ್ನ ಆರ್ಟ್ಸ್ ಗಳಿಂದಲೆ craze ಹುಟ್ಟಿಸಿದ ಆರ್ಟಿಸ್ಟ್.
ಮದ್ಯಮವರ್ಗದಿಂದ ಬಂದ ಈತನಿಗೆ ತನ್ನ ಬಡತನ ಈತನ ಪ್ರತಿಭೆಗೆ ತೊಡಕು ಮಾಡಿಲ್ಲ ಎಲ್ಲವನ್ನು ಮೆಟ್ಟಿ ನಿಂತು ಸಾಧಿಸಿದ. ಜೀವನದಲ್ಲಿ ಸಾಧಿಸುವೆ ಖಂಡಿತ ಎನ್ನುತ್ತಾನೆ ಈತ.
ಪ್ರಸ್ತುತ ಮಂಗಳೂರಿನ ಶ್ರೀ ದೇವಿ ಕಾಲೇಜ್ ಆಫ್ ಫಾರ್ಮಸಿ ಯಲ್ಲಿ. ಮೊದಲ ವರ್ಷದ B pharm ವಿದ್ಯಾರ್ಥಿ
ಗಂಗೊಳ್ಳಿಯ ಜಿ.ಲಕ್ಷ್ಮಣ್ ಖಾರ್ವಿ ಮತ್ತು ಸರಸ್ವತಿ ಖಾರ್ವಿ ಯವರ ಪುತ್ರ very talanted guy ಶಶಾಂಕ್ ಲಕ್ಷ್ಮಣ್ ಖಾರ್ವಿ
ಚಿತ್ರಗಾರಿಕೆಯಲ್ಲಿ ಸಾಧನೆಯ ಹೊಂಗನಸು ಹೊತ್ತಿದ್ದಾನೆ.ಅಂದ ಹಾಗೆ ಈತ ಅವೇ ಮಣ್ಣಿನಲ್ಲಿ ಸುಂದರವಾಗಿ ಮೂರ್ತಿ ಸ್ರಷ್ಟಿಸುತ್ತಾನೆ.B Really he is wonderful artist
All the best Shashank.
ರವಿ ಕುಮಾರ್ ಗಂಗೊಳ್ಳಿ
Beautiful art Shashank, keep it up