ಬೆಳೆಯ ಸಿರಿ ಮೊಳಕೆಯಲ್ಲಿ ಅಂದರೆ ಅರ್ಥಾತ್ ಮಕ್ಕಳಿಗೆ ಕಿರಿ ವಯಸ್ಸಿನಲ್ಲೇ ಯಾವುದರ ಮೇಲೆ ಆಸಕ್ತಿ ಜಾಸ್ತಿ ಇರುತ್ತೊ ಆ ಕಲೆಯನ್ನು ಬೆಳೆಸಲು ತಂದೆ ತಾಯಿಯಾದವರು ಮಕ್ಕಳ ಪ್ರತಿ ಹೆಜ್ಜೆಗಳಲ್ಲೂ ಜೊತೆಯಾಗಿ ನಿಂತು ಕಲೆಯನ್ನು ಬೆಳೆಸಿ ಪ್ರೋತ್ಸಾಹ ನೀಡಿದರೆ ಮಕ್ಕಳು ಪ್ರತಿಭಾವಂತರಾಗುತ್ತಾರೆ ಎಂಬುದಕ್ಕೆ ಉದಾಹರಣೆ ಕಂಚುಗೋಡಿನ ನಾಗರಾಜ ಮತ್ತು ಭಾರತಿ ದಂಪತಿಗಳ ಮಗಳಾದ ಖುಷಿಯೇ ಸಾಕ್ಷಿ…
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ನಾಣ್ಣುಡಿಯಂತೆ ಈಗಾಗಲೇ ಸತತ ಕೇವಲ ಎರಡು ವರ್ಷಗಳಲ್ಲಿ ಅನೇಕ ಜಿಲ್ಲಾ ಮತ್ತು ತಾಲೂಕು ವಲಯ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಪೈಪೋಟಿ ನೀಡಿದಲ್ಲದೇ ಹಾಗೂ ಜಿಲ್ಲಾ ಮಟ್ಟದ ನೇರ ಸಂಗೀತ ಸ್ಪರ್ಧೆಯಲ್ಲಿ ದ್ವೀತಿಯ ಮತ್ತು ರಾಜ್ಯಮಟ್ಟದ ಆನ್ ಲೈನ್ ಸಿಂಗಿಂಗ್ ಸ್ಪರ್ಧೆಯಲ್ಲಿ ದ್ವೀತಿಯ ಪ್ರಶಸ್ತಿಯನ್ನು ಪಡೆದು ಊರಿಗೆ ಕೀರ್ತಿಯನ್ನು ತಂದಿದ್ದಾಳೆ.
ಕೇವಲ ಸಂಗೀತದಲ್ಲಿ ಮಾತ್ರವಲ್ಲ ಭಾಗವಹಿಸಿಲ್ಲ, ಉತ್ತಮ ಭಾಷಣಗಾರ್ತಿ, ಅತ್ಯುತ್ತಮ ನೃತ್ಯಗಾರ್ತಿ ಹಾಗೂ ಗಂಡುಕಲೆ ಯಕ್ಷಗಾನದಲ್ಲೂ ಅದ್ಬುತ ಹವ್ಯಾಸಿ ಯಕ್ಷಗಾನ ಕಲಾವಿದೆ ಮತ್ತು ನಟನೆಯ ಹಾವಭಾವಗಳನ್ನು ನೋಡಿದರೆ ಅದ್ಬುತ ಕಲಾವಿದೆ ಎಂದು ಈಗಲೇ ನೀವು ಕರೆದು ಬಹುಮಾನ ಕೋಡ್ತೀರಾ.!!
ಹೀಗೆ ಈ ಚಿನ್ಮಣಿ ಪ್ರತಿಭೆಯು ಒಂದಲ್ಲ ಎರಡಲ್ಲ ಬಹುಮುಖ ಪ್ರತಿಭೆಯ ಸರದಾರ.
ಇವೆಲ್ಲವೂ ಹೆಚ್ಚಿನ ಕಡೆ ವೇದಿಕೆಯ ಮೇಲೆ ಪ್ರದರ್ಶನ ನೀಡಿ ಜನಮನ್ನಣೆಗೆ ಪಾತ್ರರಾಗಿದ್ದಾಳೆ.
ಈ ಪುಟಾಣಿ ಮಾಡಿರುವ ಅನೇಕ ವಿಡಿಯೋಗಳು ಮತ್ತು ಈಗಾಗಲೇ ಕರೋನಾ ಜಾಗೃತಿಗಾಗಿ ಮಾಡಿದ ವಿಡಿಯೋ ಸಂದೇಶ ಕೂಡ ವೈರಲ್ ಆಗಿದೆ.
ಸರಕಾರಿ ಹಿರಿಯ ಪ್ರಾಥಮಿಕ ಕಂಚುಗೋಡು ಶಾಲೆಯ ಎರಡನೇಯ ತರಗತಿಯಲ್ಲಿ ಓದುತ್ತಿದ್ದಾಳೆ. ಕಲಿಕೆಯಲ್ಲಿ ಕೂಡ ಬಹಳ ಚತುರೆ ಪ್ರತಿಭಾನ್ವಿತ ಬಾಲಕಿ. ಈಕೆಯ ಚತುರತೆ ಕ್ರೀಯಶೀಲತೆ ನೋಡಿ ನಮ್ಮ ಹೊಸಾಡು ಗ್ರಾಮ ಪಂಚಾಯತಿಯ ಅಧಿಕಾರಿಗಳು ಗ್ರಾಮ ಪಂಚಾಯತಿಯ ವಿನೂತನ ಮಕ್ಕಳ ಲೈಬ್ರರಿಯನ್ನು ಇವಳ ಕೈಯಿಂದಲೇ ಉದ್ಘಾಟಿಸಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಗಾದೆಯಂತೆ ಬೆಳೆಯುತ್ತ ಬೆಳೆಯುತ್ತ ಮುಂದಿನ ವರ್ಷಗಳಲ್ಲಿ ಬಹುದೊಡ್ಡ ಪ್ರತಿಭೆಯಾಗಿ ನಮ್ಮ ತಾಲೂಕು ಮತ್ತು ಊರಿನ ಕೀರ್ತಿ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸುತ್ತಾಳೆ ಎಂಬ ಭರವಸೆಯೊಂದಿಗೆ ಇಂದು ನಾವು ನೀವುಗಳು ಸೇರಿ ಈ ಪ್ರತಿಭೆಯನ್ನು
ಪ್ರೋತ್ಸಾಹಿಸಿ, ಬೆಳೆಸಿ, ಹರಸಿ ,ಹಾರೈಸೋಣ
ಹೆಬ್ಬುಲಿ ರಮ್ಮಿ ಕಂಚುಗೋಡು
Fantastic putti, keep it up
🙏🙏🙏