ಸ್ಪಷ್ಟ ಮಾತುಗಳು ಸೊಗಸಾದ ಧ್ವನಿ ಸುಂದರವಾದ ಕನ್ನಡದ ಮಧುರವಾಣಿಯ ನಿರೂಪಕಿ.
ಕುಂದಾಪುರ JC ಸಮ್ಮೇಳನ ಕಾರ್ಯಕ್ರಮಕ್ಕೆ ಅಂದು ಬಂದ ಖ್ಯಾತ ಪತ್ರಕರ್ತ ರವಿ ಬೆಳೆಗೆರೆ ಮೆಚ್ಚುಗೆ ವ್ಯಕ್ತಪಡಿಸಿ ಚೆನ್ನಾಗಿ ಮಾತಾಡುತ್ತಿರಿ ನೀವು ..ಎಂದು ಮಾಲಿನಿ ನಿರೂಪಣೆಗೆ ಒಂದು ಗರಿ ಏರಿಸಿ ಶುಭ ಹಾರೈಸಿ ಹೋಗಿದ್ದರು.
yes… ನೋ ಡೌಟ್..ಆಕೆಯ ನಿರೂಪಣೆಯ ಶಕ್ತಿನೇ ಹಾಗೆ.
So wonderful👌ಕವಿತೆ ವಚನ ಕವನ ಸಾಹಿತ್ಯ ಘಝಲ ಗಳ ಪುಟ್ಟ ಮೆರವಣಿಗೆಯೊಂದು ಇವರ ನಿರೂಪಣೆಯಲ್ಲಿ ಒಮ್ಮೆ ಇಣುಕಿ ಕಚಗುಳಿ ಇಟ್ಟು ಕಣ್ಮರೆ ಆಗುತ್ತೆ
ಮಂಕು ತಿಮ್ಮನ ಕಗ್ಗ ದ ನೀತಿಯ ಸಾಲುಗಳ ಪರಿಚಯದೊಂದಿಗೆ ಆರಂಭಗೊಳ್ಳುವ ಇವರ ನಿರೂಪಣೆ ಶೈಲಿಯನ್ನು ಮುಂದೆ ಎಲ್ಲರೂ follow ಮಾಡಿದರು. ಒಂದು ಹೊಸತನ ಇವರ ನಿರೂಪಣೆಯಲ್ಲಿ ಇದ್ದೆ ಇರುತ್ತೆ. ಅದಕ್ಕೂ ಮುನ್ನ ಇವರ ಹೋಂ ವರ್ಕ್ ಅಷ್ಟೇ ಗಟ್ಟಿ ಆಗಿರುತ್ತದೆ. ನಿರೂಪಣೆಗೆ ಇದು ಅತೀ ಅಗತ್ಯ ಎನ್ನುತ್ತಾರೆ ಮಾಲಿನಿ.
ರಾಜ್ಯದ ಹಲವಾರು ಕಾರ್ಯ ಕ್ರಮಗಳಲ್ಲಿ ಮಾಲಿನಿ ನಿರೂಪಣೆ ಇವರ ಪ್ರತಿಭೆಗೆ ಜ್ವಲಂತ ಸಾಕ್ಷಿಯಾಗಿ ಮೂಡಿ ಬಂತು.
smile tv ಯಲ್ಲಿ ನ್ಯೂಸ್ ರೀಡರ್ ಆಗಿ ಗಮನ ಸೆಳೆದ ಇವರು ಆ ನ್ಯೂಸ್ ವಾಹಿನಿಯ ಹಿಂದಿನ ಶಕ್ತಿ ಆಗಿದ್ದರು. ಒಳ್ಳೆಯ ಬರಹಗಾರ್ತಿಯೂ ಹೌದು.
ಪ್ರತಿಭಾವಂತ ಪತಿ ಸತೀಶ್ ಕುಮಾರ್ ಖಾರ್ವಿ ಇವರಿಗೆ ಪ್ರತಿಭಾನ್ವಿತೆ ಪತ್ನಿ ಮಾಲಿನಿ.
ಕುಂದಾಪುರ jc ಯಲ್ಲಿ ಮಾಲಿನಿ ಸತೀಶ್ ನಿಜಕ್ಕೂ real asset. ತರಬೇತುದಾರ್ತಿಯಾಗಿ, ನಿರೂಪಕಿಯಾಗಿ,ಪ್ರೊಜೆಕ್ಟ್ ಯೋಜನಾದಿಕಾರಿ ಆಗಿ ಉತ್ತಮ ಸೇವೆ ನೀಡಿದ್ದಾರೆ.
ಕುಂದಾಪುರ jc ಸಪ್ತಾಹ ದಲ್ಲಿ ಇವರು ಗೆಳತಿಯರ ಜೊತೆ ಗೂಡಿ ನರ್ತಿಸಿದ “ಎಕ್ಕ ಸಕ್ಕಾ ಎಕ್ಕ ಸಕ್ಕಾ…ತುಳು ಹಾಡಿನ ನ್ರತ್ಯ ಎಂದು ಮರೆಯಲು ಅಸಾಧ್ಯ.👌
ಬಹುಮುಖ ಪ್ರತಿಭೆ ಮಾಲಿನಿ ಸತೀಶ್. ಪುತ್ತೂರಿನ ಮುತ್ತು ಮಾಲಿನಿ ಕುಂದಾಪುರ ಕರಾವಳಿ ಕಡಲ ಮುತ್ತು sanjose ಸತೀಶ್ ಗೆ ಜೋಡಿಯಾಗಿ ಖಾರ್ವಿ ಸಮುದಾಯದ ಪ್ರತಿಭಾವಂತ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರ ರಾದರು.
ನಿರೂಪಣೆಗೆ ಹೊಸ ಭಾಷ್ಯ ಬರೆದ ಮಾಲಿನಿ ಸತೀಶ್ ರವರ ನಿರೂಪಣೆ ವಿವಿಧತೆಯ ಪಂಚಾಮೃತ ಎಂದರೆ ಖಂಡಿತ ಅತಿಶಯೋಕ್ತಿ ಆಗಲ್ಲ.
ಇನ್ನೂ ಒಳ್ಳೆಯ ಅವಕಾಶಗಳು ಇವರಿಗೆ ಒದಗಿ ಬರಲಿ. ಅಪ್ಪ ಅಮ್ಮನಂತೆ ಇವರ ಮಕ್ಕಳು ಶಿಫಾಲಿ, ಭೂಮಿಕಾ ಕೂಡ ಪ್ರತಿಭಾವಂತರು. Blood ನಲ್ಲಿಯೇ talant ತುಂಬಿದೆ
All the Best Malini
ರವಿ ಕುಮಾರ್ ಗಂಗೊಳ್ಳಿ
ನಮ್ಮ ಹೆಮ್ಮೆ 😍
ಮಾಲಿನಿ ಸತೀಶ್ ರವರ ನಿರೂಪಣಾ ಶೈಲಿ ಅತ್ಯದ್ಭುತ. Wonderful voice
ಶ್ರೀಮತಿ ಮಾಲಿನಿ ಸತೀಶ್ ಕುಮಾರ್ ಖಾರ್ವಿ ಇವರ ಕಾರ್ಯಕ್ರಮ ನಿರೂಪಣೆಯ ಶೈಲಿ ಮತ್ತು ಪ್ರತಿಭೆಯ ಪರಿಚಯವಾಗಿದ್ದು ಬೆಂಗಳೂರಿನಲ್ಲಿ. ಕೊಂಕಣಿ ಖಾರ್ವಿ ವಿದ್ಯಾ ವೇದಿಕೆ, ಬೆಂಗಳೂರು ಇದರ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭಕ್ಕೆ ಕಾರ್ಯಕ್ರಮ ನಿರೂಪಕಿಯಾಗಿ ಸಭಿಕರ ಪ್ರಶಂಸೆಯೊಂದಿಗೆ ಸಮಾರಂಭದ ಅತಿಥಿಗಳ ಮೆಚ್ಚುಗೆ ಪಡೆದಿದ್ದರು.
ಇವರ ಕಾರ್ಯಕ್ರಮ ನಿರೂಪಣೆಯ ವೈಖರಿ ಕಾರ್ಯಕ್ರಮದ ಯಶಸ್ವಿಗೆ ಮುಖ್ಯ ಕಾರಣವಾಗಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ. ನಿಮ್ಮ ಮುಂದಿನ ವೃತಿಪರ ಜೀವನ ಯಶಸ್ವಿಯೊಂದಿಗೆ ಆತಿ ಶೀಘ್ರದಲ್ಲಿ ರಾಜ್ಯಾದ್ಯಂತ ಪ್ರಸಿದ್ದಿ ಪಡೆಯಲಿ ಎಂದು ಶುಭ ಹಾರೈಕೆ.