ನಾವು ಮಾಂಸಹಾರಿ ಹೋಟೆಲ್ ಹೋಗಿದ್ರೇ, ನಂಗೆ ಇವತ್ತು ವಾರ ವೇಜ್ ಪದಾರ್ಥಗಳು ಬೇಕು ಅಂತ ಪನ್ನೀರ್ ಖಾದ್ಯಗಳನ್ನೇ ಆದೇಶ ಮಾಡ್ತೀವಿ…
ಆದರೆ ಮಾಂಸಾಹಾರಿ ಹೋಟೆಲ್‌ಗಳಲ್ಲಿ ಮೀನು ಮಾಂಸ ಉಪಯೋಗಿಸುವ ಎಣ್ಣೆ ಬಾಣಲಿಗಳಲ್ಲೇ ವೇಜ್ ಪದಾರ್ಥಗಳನ್ನು ಪ್ರೈ ಮಾಡ್ತೀವಿ ಅನ್ನೋ ಸಾಮಾನ್ಯ ಜ್ಞಾನವು ನಮಗೆ ಇರಲ್ಲ ಅಂದರೆ ಮತ್ತೆ ಕಲಬೆರಕೆ ಪನೀರ್ ಬಗ್ಗೆ ಹೇಗೆ ತಾನೆ ಗೊತ್ತಾಗುತ್ತೆ ಅಲ್ವ ?
ಆ ವಿಷಯ ಇವಾಗ ಬೇಡ ನಮಗೆ,
ಪನ್ನೀರ್ ವಿಷಯಕ್ಕೆ ಬರೋಣ.
ಹೆಚ್ಚಿನ ಜನರಿಗೆ ಪನ್ನೀರ್ ಚಿಲ್ಲಿ, ಪನೀರ್ ಮಾಸಲ ಮತ್ತು ಪನೀರ್ ಟಿಕ್ಕ ಪನ್ನೀರ್ ನಿಂದ ಮಾಡಿದ ವಿವಿಧ ಖಾದ್ಯ ಅಂದರೆ ತುಂಬಾ ಇಷ್ಟ..!!
ಯಾಕೆ ಪನ್ನೀರ್ ಇಷ್ಟ ಅಂದರೆ ಎಲ್ಲರೂ ಪನ್ನೀರ್ ಅಂದರೆ ಹಾಲಿನಿಂದ ತಯಾರಿಸಲಾಗುವ ಪದಾರ್ಥ ನಮ್ಮ ದೇಹಕ್ಕೆ ಆರೋಗ್ಯಕರ ಅಂತ ತಿಳಿಕೊಂಡಿದ್ದಾರೆ.
ನನಗೆ ಈಗ್ಲೂ ನೆನಪಿದೆ ನಾನು ಹಿಂದೆ ಹೋಟೆಲ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ನೆಚ್ಚಿನ ಅಡುಗೆ ಭಟ್ರು ಹೇಳ್ತಾ ಇದ್ರೂ ಒಂದು ಕೆಜಿ ಪನ್ನೀರ್ ತಯಾರಿಸಲು 12 ಲೀಟರ್ ಹಾಲು ಬೇಕು ಮಾರಯಾ ಅಂತ.
ಹೌದು ಒಂದು ಕೆಜಿ ಪನ್ನೀರ್ ತಯಾರಿಕೆಗೆ 12 ಲೀಟರ್ ಹಾಲು ಬೇಕು ಅಂದರೆ ಇವಾಗಿನ ದಿನದ ಹಾಲಿನ ಬೆಲೆ ಪ್ರಕಾರ 1ಲೀಟರ್ ಹಾಲಿಗೆ 44 ರೂ×12 ಲೀ = 528 ರೂ. ಹಾಲು ಬೇಕು.
528 ರೂ ಹಾಲಿಂದ ತಯಾರಿಸಿದ ಒಂದು ಕೆಜಿ ಪನ್ನೀರ್ ಮಾರ್ಕೆಟಿಂಗೆ ಬರಬೇಕಾದರೆ ಅದರ ಕೂಲಿನಾಲಿ ಪ್ಯಾಕೇಜ್ ಅದು ಇದು ಖರ್ಚು ಅಂತ ಕನಿಷ್ಠ ಅಂದಾಜು 700-800 ಆದ್ರೂ ಮಾರಾಟ ಬೆಲೆ ಇರಲೇಬೇಕು ಆದರೆ ಇತ್ತೀಚಿನ ಮಾರ್ಕೆಟಿಂಗ್ ಪನ್ನೀರ್ ಬೆಲೆ ನೋಡಿದರೆ ಆಶ್ಚರ್ಯವಾಗುತ್ತೇ ಅತೀ ಕಡಿಮೆ ಬೆಲೆಯಲ್ಲಿ 1 ಕೆಜಿ ಪನೀರ್ ಗೆ ಕೇವಲ 200-300 ರೂ ಬೆಲೆಯಲ್ಲಿ ಪನ್ನೀರ್ ಮಾರಾಟ ಮಾಡುತ್ತಾರೆ ಅಂದರೆ ಅವಾಗ್ಲೇ ಸ್ವಲ್ಪ ಆಲೋಚನೆ ಮಾಡಿ ಅದು ಪನ್ನೀರ್ ಅಲ್ಲ ಪನ್ನೀರ್ ಎಂದು ನೀವು ತಿಂತಾ ಇರೋದು ಅಲ್ಪ ಹಾಲಿನಲ್ಲಿ ಮಿಶ್ರಣ ಮಾಡಿ ತಯಾರಿಸಿದ ಕಚ್ಚಾ ಪದಾರ್ಥಗಳನ್ನು ಪನ್ನೀರ್ ಎಂದು ತಿಂದು ಬಕ್ರ ಆಗುತ್ತಿದ್ದೇವೆ ನಾವು ಅಷ್ಟೇ 😀..!!
ಇನ್ನೂ ಮುಂದೆಯಾದ್ರೂ ಇಂತಹ ಪದಾರ್ಥಗಳನ್ನು ತಿನ್ನುವಾಗ ಸ್ವಲ್ಪ ತಲೆ ಓಡಿಸೋಣ
ಹೆಬ್ಬುಲಿ ರಮ್ಮಿ, ಕಂಚುಗೋಡು