ಕೊನೆಯ ಕ್ಷಣದಲ್ಲಿ ಸಚಿವರ ಭೇಟಿ ರದ್ದು ಮೀನುಗಾರರಿಂದ ಖಂಡನೆ.

ಇಂದು ವಿಶ್ವ ಸಾಗರ ದಿನ 2021, ಹೊನ್ನಾವರದ ಕಾಸರಕೋಡ ಮೀನುಗಾರಿಕಾ ಬಂದರಿನಲ್ಲಿ ಪೂಜೆಸಲ್ಲಿಸಿ ಬಾಗಿನ ಅಪ೯ಣೆ ಮಾಡಿದರು. ಕಳೆದ ಎರಡು ದಿನಗಳಿಂದ ಮೀನುಗಾರಿಕಾ ಮತ್ತು ಬಂದರು ಇಲಾಖೆಯ ಸಚಿವರು ಜಿಲ್ಲೆಯ ಪ್ರವಾಸದಲ್ಲಿದ್ದು ಪ್ರಮುಖ ಬಂದರುಗಳಿಗೆ ಭೇಟಿನೀಡಿ ಮೀನುಗಾರರ ಸಮಸ್ಯೆಗಳನ್ನು ಆಲಿಸುವ ಭರವಸೆ ನೀಡಿದ್ದರು. ಆದರೆ ಮೀನುಗಾರರಿಗೆ ಸಮಸ್ಯೆ ಇರುವಕಡೆ ಸಚಿವರು ಭೇಟಿ ನೀಡದೇ ಇರುವುದು ಬಹಳ ಬೇಸರ ತಂದಿದೆ.

ಹೊನ್ನಾವರದಲ್ಲಿ ಸರ್ವಋತು ಬಂದರು ಕಾಮಗಾರಿಯಿಂದ ಸಾವಿರಾರು ಕುಟುಂಬಗಳು ನಿರ್ಗತಿಕರಾಗಲಿದ್ದಾರೆ.

ಮೀನುಗಾರರು ಸಚಿವರೆದುರು ತಮ್ಮ ಸಮಸ್ಯೆಯನ್ನು ತಿಳಿಸಿ ಏನಾದರೂ ಪರಿಹಾರೋಪಾಯ ಸಿಗಬಹುದು ಎನ್ನುವ ಆಶಾಭಾವನೆ ಹೊಂದಿದ್ದೆವು. ಆದರೆ ಕೊನೆಯ ಕ್ಷಣದಲ್ಲಿ ಸಚಿವರ ಭೇಟಿ ರದ್ದಾಗಿದ್ದು ಅತೀವ ಬೇಸರ ತಂದಿದೆ. ಇಲ್ಲಿನ ಜನಪ್ರತಿನಿಧಿಗಳು ಉದ್ದೇಶ ಪೂರ್ವಕವಾಗಿ ಸಚಿವರಿಗೆ ಸರಿಯಾದ ಮಾಹಿತಿ ನೀಡದೇ ಹೀಗೆಲ್ಲಾ ಆಗಿದೆ.

ಇವರುಗಳಿಗೆ ಮೀನುಗಾರರ ಸಮಸ್ಯೆಗಳನ್ನು ಆಲಿಸುವ ಬಗೆಹರಿಸುವ ಯೋಚನೆಯಿಲ್ಲ. ಕೇವಲ ಮೀನುಗಾರರ ಮತಪಡೆದು ಕಿವಿಗೆ ಹೂ ಇಡುವ ತಂತ್ರ ಮಾಡುತ್ತಿದ್ದಾರೆ. ಸತ್ತ ಮೇಲೆ ಮೀನುಗಾರ ಮತ ಬೇಡಲು ಬರುವ ರಾಜಕಾರಣಿಗಳು ಬದುಕಿದ್ದಾಗ ಸಮಸ್ಯೆ ಕೇಳಲು ಯಾಕೆ ಬರುವುದಿಲ್ಲ?

ಸದರಿ ಸಂಧರ್ಭಕ್ಕೆ ತಾಲೂಕಿನ ವಿವಿಧ ಮೀನುಗಾರ ಸಂಘಗಳು, ಮೀನುಗಾರರು ಉಪಸ್ತಿತಿಯಲ್ಲಿದ್ದರು, ಬೆಲಕೊಂಡ ಮೀನುಗಾರ ಸಂಘದ ಅಧ್ಯಕ್ಷರರಾದ ದಾಮೋದರ ಮೇಸ್ತ, ತಾಲೂಕು ಹಸಿಮೀನು ವ್ಯಾಪಾರ ಸಂಘದ ಆಧಕ್ಷರಾದ ಗಣಪತಿ ಈಶ್ವರ ತಾಂಡೇಲ್, ಪರ್ಶಿನ ದೋಣಿ ಸಂಘದ Humja Patel, Vivano Fernandez, ಮೀನುಗಾರಿಕಾ ಕಾರ್ಮಿಕ ಸಂಘದ ಅಧ್ಯಕ್ಷರಾದ ರಾಜು ತಾಂಡೆಲ್. ಮೀನುಗಾರ ಮಹಿಳೆಯರ ಸಂಘಗಳು ಭಾಗವಹಿಸಿದ್ದವು.

ವಿಶ್ವ ಸಾಗರ ದಿನದಂದು ಹೊನ್ನಾವರ ಮೀನುಗಾರಿಕಾ ಬಂದರಿಗೆ ಕರ್ನಾಟಕ ರಾಜ್ಯ ಮೀನುಗಾರ ಸಚಿವರು ಬರುವ ಕಾರ್ಯಕ್ರಮ ಮೊಟುಕು ಗೊಳಿಸಿದ ಕಾರಣ . ಸಚಿವರ ಬರುವಿಕೆಯ ಸ್ವಾಗತಕ್ಕೆ ತಯಾರಿಯಲ್ಲಿದ್ದ ವಿವಿಧ ಮೀನುಗಾರಿಕಾ ಸಂಘಗಳು, ತಮ್ಮ ಅವಹಾಲುಗಳನ್ನು ಸಚಿವರಿಗೆ ತಿಳಿಸಲು ಕಾದಿದ್ದ ಮೀನುಗಾರ ಮಹಿಳೆಯರು ನಿರಾಶೆಯಿಂದ ಸಚಿವರಿಗಾಗಿ ತಂದ ಎಲ್ಲಾ ವಸ್ತು, ಅರ್ಜಿಗಳನ್ನು ಸಮುದ್ರಕ್ಕೆ ಪೂಜೆ ಮಾಡಿ ಸಲ್ಲಿಸಿದರು. ಇಂದು ವಿಶ್ವ ಸ್ವಂಸ್ಥೇಯ ಸಾಗರ (ಸಮುದ್ರ)ದಿಂದ ಜೀವನ ಮತ್ತು ಜೀವನಾಂಶಗಳು ಎಂಬ ಧ್ಯೆಯ ವಾಕ್ಯ ದೊಂದಿಗೆ ಈ ವರ್ಷದ ವಿಶ್ವ ಸಾಗರ ದಿನ 2021ರನ್ನು ಜಗತ್ತು ಆಚರಿಸುತ್ತಿದೆ ಈ ಶುಭ ಸಂದರ್ಭದಲ್ಲಿ ಸಾಗರವನ್ನೆ ನಂಬಿ ಬಾಳನ್ನು ಕಟ್ಟಿಕೊಂಡಿರುವ ಮೀನುಗಾರರಾದ ನಾವು ಸಮುದ್ರ – ಸಾಗರ ಗಳಿಗೆ ಅನಂತಕೋಟಿ ವಂದನೆ ಗಳೆಂದು ಗಣಪತಿ ಈಶ್ವರ ತಾಂಡೆಲ್ ತಿಳಿಸಿದರು

ಯಾರು ಏನೇ ಷಡ್ಯಂತ್ರ ಮಾಡಿದರೂ ನಾವು ಮಾತ್ರ ಹೋರಾಟದಿಂದ ಹಿಂದೆ ಸರಿಯುವುದಿಲ್ಲ.

Report : Dr. Prakash Mesta, Honnavara

Leave a Reply

Your email address will not be published. Required fields are marked *