ಖಾರ್ವಿ ಸಮುದಾಯ ಪ್ರತಿಭೆಗಳ ಆಗರ, ನಾನೂ ಬರೆಯುತ್ತೇನೆ

ನಾನು ಬರೆಯುತ್ತೇನೆ ಎಂಬ ಪ್ರತಿಯೊಬ್ಬರ ಆಸೆ…

kharvionline.com ಡಿಜಿಟಲ್ ಪೋರ್ಟಲ್ ಆಗಿದ್ದು, ಇದರ ಮೂಲಕ  ನಮ್ಮ ಈ  ಸಮುದಾಯವನ್ನು ತಂತ್ರಜ್ಞಾನ ಸಂವಹನ ಮಾರ್ಗ ಬಳಸಿ, ಹತ್ತಿರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ, ಸವಾಲಿಗೇ ಸವಾಲು ಎಂದೆನಿಸಿದ್ದು ಸುಳ್ಳಲ್ಲ.. ಆದರೂ., ಈ ಸವಾಲನ್ನು ಕೈಗೊಳ್ಳದೆ ಇರಲೂ ಮನಸ್ಸಾಗಲಿಲ್ಲ ನನಗೆ.. ಆಗಿದ್ದು ಆಗಲಿ ಎಂದು ಶುರು ಮಾಡಿಯೇ ಬಿಟ್ಟೆ.

ಹೊಸ ಹೊಸ ಜನರನ್ನು ಸೇರಿಸಿ ಡಿಜಿಟಲ್ ಸುದ್ದಿ ಮಾಧ್ಯಮ ವನ್ನು ಬೆಳೆಸಿ ಹೆಮ್ಮರವಾಗಿಸಲು ಶ್ರಮಿಸುತ್ತಿರುವ ಹಲವಾರು ಕೈಗಳು ಖಾರ್ವಿ ಸಮುದಾಯದಯಕ್ಕೆ ಸಹಾಯವಾಗಬಲ್ಲ ವಿಷಯಗಳನ್ನು ಪ್ರಪಂಚಕ್ಕೆ ಪರಿಚಯಿಸಿ, ಬೆಂಬಲಿಸುತ್ತಿರುವ ಬರಹಗಾರರ ತಂಡ., ತಮ್ಮ ಮಾಂತ್ರಿಕ ಬರವಣಿಗೆಯ ಶೈಲಿಯಿಂದ ಓದುಗರ ಮನಕ್ಕೆ ಲಗ್ಗೆ ಹಾಕಬಲ್ಲ ಲೇಖನಗಳನ್ನು ಬರೆದು ವೇದಿಕೆಗೆ ಜೀವ ತುಂಬುತ್ತಿರುವ ಅನೇಕಾನೇಕ ಬರಹಗಾರರು.. ಹೀಗೆ ಪ್ರತಿಯೊಬ್ಬರ ಶ್ರಮದಿಂದ ದಿನಂಪ್ರತಿ ಪ್ರಗತಿಯನ್ನು ಕಾಣುತ್ತಿರುವುದು ತಮ್ಮೆಲ್ಲರ ಸಹಕಾರದಿಂದ.

ದೇಶದ ಮೂಲೆ ಮೂಲೆಯಲ್ಲಿ ಅಡಗಿರುವ ಸಮುದಾಯದ ಪ್ರತಿಭೆಗಳನ್ನು ಸೆಳೆದು, ಅವರ ಮನದ ಮೂಲೆಯಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಬಡಿದೆಬ್ಬಿಸಿ, ಅಂತ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ.

ಎಷ್ಟೋ ಬಾರಿ ಪ್ರತಿಭೆಗಳಿಗೆ ತಕ್ಕ ವೇದಿಕೆ ಮತ್ತು ಅವಕಾಶ ದೊರೆಯುವುದಿಲ್ಲ., ಇನ್ನು ಕೆಲವು ಬಾರಿ ಉತ್ತಮ ವೇದಿಕೆ, ಅವಕಾಶವಿದ್ದರೂ ಅದಕ್ಕೆ ತಕ್ಕನಾದ ಪ್ರತಿಭೆಗಳಿರುವುದಿಲ್ಲ.. ಆದರೆ kharvionline.com ಪ್ರತಿಭೆ, ಅವಕಾಶ ಮತ್ತು ವೇದಿಕೆಗಳ ಸಂಗಮ.. ಬರವಣಿಗೆ., ಕವನ., ನೃತ್ಯ., ಕರಕುಶಲ., ಕಸೂತಿ., ಚಿತ್ರ ರಚನೆ,  ಶಿಕ್ಷಣ, ತಂತ್ರಜ್ಞಾನ ಹೀಗೆ ಪ್ರತಿಯೊಬ್ಬರಲ್ಲೂ ಅಡಗಿರುವ ಒಂದಲ್ಲ ಒಂದು ಸುಪ್ತ ಕಲೆಯನ್ನು ಹೊರ ಪ್ರಪಂಚಕ್ಕೆ ಪ್ರದರ್ಶಿಸುವ ವೇದಿಕೆ.

ಈ ಡಿಜಿಟಲ್ ಉಪಕ್ರಮದ ಉದ್ದೇಶವೆಂದರೆ, ಖಾರ್ವಿ ಸಮುದಾಯದಯಕ್ಕೆ ಸಂಬಂಧಿಸದಂತೆ  ದೇಶ ವಿದೇಶದಲ್ಲಿ ನೆಲೆಸಿರುವ ಸದಸ್ಯರಿಗೆ ಸ್ಥಳೀಯ ಸಮಾಜಕ್ಕೆ ಸಂಬಂಧಿಸದ ಸುದ್ಧಿ ಸಮಾಚಾರಗಳು, ವ್ಯಕ್ತಿಕ ಸಾಧನೆಗಳು ಮತ್ತಿತರ  ದೈನಂದಿನ ವಿಷಯಗಳ ಬಗ್ಗೆ ಸುದ್ದಿಯನ್ನು ಹಂಚಿಕೊಳ್ಳುವುದು.

kharvionline.com ಮೂಲಕ ನಮ್ಮ ಹೊಸ ತಲೆಮಾರಿನವರಿಗೆ ನಮ್ಮ ಖಾರ್ವಿ ಸಮಾಜದ ವಿಭಿನ್ನ ಪ್ರಾಂತ್ಯದವರ ಸಂಸ್ಕೃತಿ, ಸಂಪ್ರದಾಯ, ಜೀವನಶೈಲಿ, ಪಾಕಪದ್ಧತಿಗಳ ಪರಿಚಯ ಹಾಗೆ ಇಂದಿನ ಜಗತ್ತಿನಲ್ಲಿ ಅಗತ್ಯವಿರುವ ವಿಷಯಗಳದ ಆರೋಗ್ಯ ರಕ್ಷಣೆ, ಶಿಕ್ಷಣ, ತಂತ್ರಜ್ಞಾನ ವಿಮರ್ಶೆ, ವಿಶ್ವ ಜ್ಞಾನ ಹೀಗೆ ಅನೇಕ ಉತ್ತಮ ವಿಷಯಗಳನ್ನು ಅನ್ವೇಷಿಸಲು ಮತ್ತು ತಿಳಿದುಕೊಳ್ಳುವ ಒಂದು ವೇದಿಕೆ.

ಹಾಗಾಗಿ ಈ ಮೂಲಕ, ಪ್ರತಿಯೊಬ್ಬ ಕೊಂಕಣಿ ಖಾರ್ವಿಸಮಾಜ ಭಾಂದವರನ್ನು ಈ ಪೋರ್ಟಲ್‌ನ ಬೆಳವಣಿಗೆಗಾಗಿ ಭಾಗವಹಿಸಲು ನಾನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ.

Kharvionline.com ಅನ್ನು ಯಶಸ್ವಿಗೊಳಿಸಲು ನಿಮ್ಮ ಸಲಹೆಗಳು, ನಿಮ್ಮ ಸುತ್ತ ಮುತ್ತ ಆಗುವ ಸ್ಥಳೀಯ ಸುದ್ದಿಗಳು ಹಾಗು ಸಂಭ್ರಮಾಚರಣೆಗಳು, ಮುಖ್ಯ ಘಟನೆಗಳು ಮತ್ತು ವಿಭಿನ್ನ ವಿಚಾರಗಳನ್ನು ಹಂಚಿಕೊಳ್ಳಲು ಸಹ ವಿನಂತಿಸುತೇನೆ.

Kharvionline.com ಇದರ ಮೂಲ ಉದ್ದೇಶ …  ನಮ್ಮ ಈ ಪುಟ್ಟ ಸಮುದಾಯವನ್ನು, ಒಂದೇ ಸೂರಿನಡಿ ಇರುವ ಒಂದು ಏಕೀಕೃತ ಕುಟುಂಬವನ್ನಾಗಿ ಮಾಡುವುದು.

ಯಾವುದೇ ರೀತಿಯ ವಿಷಯಗಳು, ಲೇಖನಗಳು ಮತ್ತು ದೈನಂದಿನ ಸುದ್ದಿಗಳನ್ನು ಹಂಚಿಕೊಳ್ಳಲು ದಯವಿಟ್ಟು ನಮ್ಮ ಸ್ಥಳೀಯ ಪ್ರತಿನಿಧಿಗಳನ್ನು ಭೇಟಿ ಮಾಡಿ ಅಥವಾ sudhamudra@gmail.com , newskharvionline@gmail.com ಗೆ ಮೇಲ್ ಮಾಡಿ..

ಧನ್ಯವಾದಗಳು

ಸುಧಾಕರ್ ಖಾರ್ವಿ
www.kharvionline.com
WhatsApp: 9071278342

8 thoughts on “ಖಾರ್ವಿ ಸಮುದಾಯ ಪ್ರತಿಭೆಗಳ ಆಗರ, ನಾನೂ ಬರೆಯುತ್ತೇನೆ

  1. ಹಿನ್ನೆಲೆಯಲ್ಲಿದ್ದ ನಮ್ಮ ಸಮುದಾಯವು ಮುನ್ನೆಲೆ ಬರಬೇಕು ಎಂಬ ನಿಮ್ಮ ಆಶಯಕ್ಕೆ ನನ್ನ ಕಡೆಯಿಂದ ಸಾವಿರ ನಮನಗಳು….ಒಳ್ಳೆಯದಾಗಲಿ ನಿಮಗೆ

  2. ಸಮಾಜದ ಮೇಲಿನ ಪ್ರೀತಿಯ ಕಳಕಳಿ ಗೇ ಧನ್ಯವಾದಗಳು ಅಣ್ಣ.. ಶ್ರೀ ತಾಯಿ ಮಹಾಕಾಳಿ ಅಮ್ಮನವರ ಆಶೀರ್ವಾದ ಸದಾ ನಿಮ್ಮಮೇಲಿರಲಿ.

  3. kharvionline.com Digital portal ಮೂಲಕ ಖಾರ್ವಿ ಸಮಾಜದ ಪ್ರತಿಭೆಯನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವುದರ ಜೊತೆಯಲ್ಲಿ ಅವರಿಗೆ ಪ್ರೋತ್ಸಾಹ ನೀಡುವ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ.
    ಖಾರ್ವಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ನಿಮಗೂ ಮತ್ತು ನಿಮ್ಮ ತಂಡದವರಿಗೆ ಇನ್ನೊಮ್ಮೆ ಅಭಿನಂದನೆಗಳು. ಪ್ರಪಂಚದ ಬೇರೆ ಬೇರೆ ಭಾಗದಲ್ಲಿ ನೆಲೆ ನಿಂತಿರುವ ಖಾರ್ವಿ ಸಮಾಜ ಬಾಂಧವರ ವಿಚಾರ ವಿನಿಮಯದ ಜೊತೆಯಲ್ಲಿ ಎಲ್ಲರನ್ನೂ ಒತ್ತಟ್ಟಿಗೆ ಸೇರಿಸುವ ನಿಮ್ಮ ಪ್ರಯತ್ನ ಶ್ಲಾಘನೀಯ. ಖಾರ್ವಿ ಸಮಾಜವನ್ನು ಒಂದು ಮಾದರಿ ಸಮಾಜವನ್ನಾಗಿ ಮುಂದುವರಿಸುವ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ನಿಮಗೆ ಖಾರ್ವಿ ಸಮಾಜದ ಪ್ರತಿಯೊಬ್ಬ ಸದಸ್ಯರ ಬೆಂಬಲ ಸಿಗುತ್ತದೆ ಎಂದು ನನ್ನ ದೃಢ ನಂಬಿಕೆ. ನಿಮ್ಮ ಮತ್ತು ನಿಮ್ಮ ತಂಡದ ಕಾರ್ಯ ವೈಖರಿ ಸರಿಯಾದ ಪಥದಲ್ಲಿದೆ.

    ವಂದನೆಗಳು.

    1. ಆತ್ಮೀಯ ಮಿತ್ರರಾದ S.K. Naik ರವರಿಗೆ ತುಂಬು ಹೃದಯದ ಧನ್ಯವಾದಗಳು, ಸಮಾಜದ ಬಗ್ಗೆ ಕಳಕಳಿ ಉಳ್ಳಂತಹ ಶ್ರೇಷ್ಠ ವ್ಯಕ್ತಿಗಳಾದ ತಾವು ನನ್ನ ಎಲ್ಲಾ ಕಾರ್ಯಗಳಿಗೆ ಮಾರ್ಗದರ್ಶನ, ಪ್ರೋತ್ಸಾಹ, ಬೆಂಬಲ ನೀಡಿ ಸಹಕರಿಸಿದಿರಿ.

      ಮುಂದೆಯೂ ತಮ್ಮ ತುಂಬು ಹೃದಯದ ಸಹಕಾರವನ್ನು ಬಯಸುತ್ತಾ

      ವಂದನೆಗಳೊಂದಿಗೆ,

      ಸುಧಾಕರ್ ಖಾರ್ವಿ
      http://www.kharvionline

Leave a Reply

Your email address will not be published. Required fields are marked *