ಮೃತ ಮಿಡತೆಯ ಅಂತ್ಯಸಂಸ್ಕಾರ ಮಾಡಿದ ಕೀಟ

ಇದೊಂದು ವಿಸ್ಮಯಕಾರಿ ಮತ್ತು ಅಚ್ಚರಿಯ ಸಂಗತಿ ನನ್ನ ಯುಟ್ಯೂಬ್ ಚಾನೆಲ್ ಕಾಮನಬಿಲ್ಲಿನ ಜಗತ್ತು ಆಂಧ್ರಪ್ರದೇಶದ ಯುಟ್ಯೂಬ್ ಚಾನೆಲ್ ಲಲಿತ ಆಲ್-ಇನ್-ಒನ್ ಕ್ರಿಯೇಷನ್ ನಿಂದ ಬಂದಿರುವ ವಿಡಿಯೋ ತುಣುಕಿನಲ್ಲಿ ಕೀಟವನ್ನು ಮಿಡತೆಯ ಮೃತದೇಹವನ್ನು ತನ್ನ ಪ್ರಬಲ ದವಡೆ ಮತ್ತು ಕಾಲುಗಳ ಸಹಾಯದಿಂದ ದೂರದಿಂದ ಎಳೆದುಕೊಂಡು ಬಂದು ಸೂಕ್ತ ಸ್ಥಳದಲ್ಲಿ ಹೊಂಡ ತೋಡಿ ಹೂತು ಹಾಕುವ ಅಪೂರ್ವ ದೃಶ್ಯ ಸೆರೆಯಾಗಿದೆ

ಕೀಟ ತನಗಿಂತ ಗಾತ್ರದಲ್ಲಿ ಮೂರು ಪಟ್ಟು ದೊಡ್ಡದಾಗಿರುವ ಕಂದುಬಣ್ಣದ ಮಿಡತೆಯ ಮೃತದೇಹವನ್ನು ಹೊಂಡ ತೋಡಿ ಹೂತು ಹಾಕುವ ಅಪೂರ್ವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಕೀಟಗಳ ಕ್ರಮಬದ್ಧತೆಯ ಜೀವನಶೈಲಿಯ ಸಾಮಾಜಿಕ ವ್ಯವಸ್ಥೆಯನ್ನು ಅನಾವರಣಗೊಳಿಸಿದ್ದು ಪ್ರಸ್ತುತ ಸಾಂದರ್ಭಿಕ ಸನ್ನಿವೇಶಗಳಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಸಂಬಂಧ ಪಟ್ಟಂತೆ ಮೃತರ ಮನೆಯವರು ತೋರಿಸುತ್ತಿರುವ ಹೃದಯಹೀನ ನಡವಳಿಕೆಗಳನ್ನು ಹೋಲಿಸಿ ನೋಡಿದರೆ ಮನುಷ್ಯರಿಗಿಂತ ಈ ಕೀಟಗಳು ಎಷ್ಟೋ ಪಾಲು ಮೇಲು ಎಂಬ ಭಾವನೆ ವ್ಯಕ್ತವಾಗುತ್ತದೆ.

ಜಗತ್ತಿನ ಸಮಸ್ತ ಜೀವಿಗಳಲ್ಲಿ ಮಾನವನೇ ಶ್ರೇಷ್ಠ ಎಂಬ ಭಾವನೆಯನ್ನು ಸಹಸ್ರಾರು ವರ್ಷಗಳಿಂದ ಬಿತ್ತಿ ಕೊಂಡು ಬಂದ ಪರಿಣಾಮವಾಗಿ ಬಹುತೇಕ ಜೀವಜಂತುಗಳ ಬಗ್ಗೆ ಉಪೇಕ್ಷೆ ಬೆಳೆದುಬಂದಿದೆ, ಆದರೆ ಕೊರೋನಾ ಮಾಹಾಮಾರಿ ಬಂದಮೇಲೆ ಮನುಷ್ಯರ ಜೀವಕ್ಕೆ ಬೆಲೆ ಇಲ್ಲದಾಗಿದೆ ನಾಯಿಗಿಂತ ಕಡೆಯಾಗಿ ಮನುಷ್ಯ ಸಾಯುತ್ತಿದ್ದಾನೆ ಮೃತದೇಹಗಳನ್ನು ಗತಿ ಗೋತ್ರ ವಿಲ್ಲದೆ ಗಂಗಾನದಿ ಅಂತ ಪವಿತ್ರ ನದಿಯಲ್ಲಿ ಬಿಸಾಡಲಾಗುತ್ತದೆ. ಸತ್ತವರನ್ನು ಅವರ ಮನೆಯವರೇ ಅಂತ್ಯಸಂಸ್ಕಾರ ಮಾಡಲು ಬರುವುದಿಲ್ಲ.

ಪಾಪ ಯಾರ್ ಯಾರೋ ಪುಣ್ಯಾತ್ಮರು ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ ಯಾರಿಗೆ ಯಾರು ಇಲ್ಲ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಜೀವದ ಭಯ ಕಾಡುತ್ತಿದೆ ಇದೆಲ್ಲವನ್ನು ಗಮನಿಸಿದಾಗ ಈ ಕೀಟದ ಕರ್ತವ್ಯ ಪಾಠ ವಾಗಬಹುದು

ಉಮಾಕಾಂತ್ ಖಾರ್ವಿ ಕುಂದಾಪುರ.

Leave a Reply

Your email address will not be published. Required fields are marked *