ಇಡೀ ಜಗತ್ತು ಕೋವಿಡ್ ಕರಿನೆರಳಿನಲ್ಲಿ ಕಂಗೆಟ್ಟಿದೆ. ಅದರ ದುಷ್ಪರಿಣಾಮ ಮೀನುಗಾರರಾದ ಸಮಸ್ತ ಕೊಂಕಣಿ ಖಾರ್ವಿ ಸಮಾಜದ ಮೇಲೆ ಭಾರೀ ಪ್ರಭಾವ ಬೀರಿದೆ.
ಸಂಕಷ್ಟಕ್ಕೀಡಾಗುವ ಸಮಾಜ ಸಮೂಹಸನ್ನಿಗೊಳಗಾಗಿ ಹತಾಶರಾಗದಂತೆ ನೋಡಿಕೊಳ್ಳುವ ಮತ್ತು ಜೀವನಕ್ರಮ ಸುಗಮವಾಗುವಂತೆ ಪೂರಕ ಸೌಲಭ್ಯಗಳನ್ನು ಪರಿಹಾರಗಳನ್ನು ಸಕಾಲದಲ್ಲಿ ಒದಗಿಸುವ ಹೊಣೆಗಾರಿಕೆಯನ್ನು ಭಟ್ಕಳ ಕೊಂಕಣಿ ಖಾರ್ವಿ ಸಮಾಜ ಸಮಸ್ತವಾಗಿ ನಿಭಾಯಿಸುತ್ತಾ, ತನ್ನ ಮಾತೃಹೃದಯಿ ಸೇವೆಯಿಂದಲೇ ಸಮಾಜದ ನಾಡಿಮಿಡಿತ ಅರಿತುಕೊಂಡವರು.
ಕೋವಿಡ್ ನ ಸಂದಿಗ್ಧ ಪರಿಸ್ಥಿತಿಯಲ್ಲಿ ಭಟ್ಕಳ ಕೊಂಕಣಿ ಖಾರ್ವಿ ಸಮಾಜದಿಂದ ಸುಮಾರು 435 ಕುಟುಂಬಗಳಿಗೆ 2000 ರುಪಾಯಿ ಮೌಲ್ಯದ ಆಹಾರ ಧಾನ್ಯಗಳ ಕಿಟ್ ಗಳನ್ನು ಬುಧವಾರ ಭಟ್ಕಳ ಬಂದರಿನ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸಾಂಕೇತಿಕವಾಗಿ ವಿತರಿಸಲಾಯಿತು. ಭಟ್ಕಳದ ಸನ್ಮಾನ್ಯ ಎಸಿ ಹಾಗೂ ತಹಶೀಲ್ದಾರರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮಾಜದ ಮುಖಂಡರಾದ ಎನ್ ಡಿ ಖಾರ್ವಿ, ವಸಂತ ಖಾರ್ವಿ, ಸುಬ್ರಾಯ ಖಾರ್ವಿ, ತಿಮ್ಮಪ್ಪ ಖಾರ್ವಿ, ರಮೇಶ ಖಾರ್ವಿ, ರತ್ನಾಕರ್ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.
ವರದಿ : ಈಶ್ವರ್ ಮಂಜುನಾಥ್ ಖಾರ್ವಿ, ಭಟ್ಕಳ