ಈ ಸೃಷ್ಟಿಯೊಂದು ಮಹಾ ಜ್ಞಾನಸಾಗರ ಇದರ ಪ್ರತಿಯೊಂದು ವಸ್ತುವೂ ಪ್ರತಿಯೊಂದು ವಿಷಯವೂ ಕೌತುಕಗಳ ಭಂಡಾರ ಭೂಮಿಯೊಂದರಲ್ಲೇ ಅಗಣಿತವಾದ ರಹಸ್ಯಗಳು ತುಂಬಿದೆ ಜಗತ್ತಿನಲ್ಲಿ ನಮ್ಮನ್ನು ಸೇರಿದಂತೆ ಎಲ್ಲವೂ ನಿರಂತರ ಚಲನೆಯಲ್ಲಿವೆ ಗರ್ಭ ದಿಂದ ಗೋರಿಯ ತನಕ ಹೃದಯ ಬಡಿತ ನಡೆಯುತ್ತಲೇ ಇರುತ್ತದೆ ನಾವು ಉಸಿರಾಡುವ ಗಾಳಿ ತೆಗೆದುಕೊಳ್ಳುವ ಆಹಾರ ಕುಡಿಯುವ ನೀರು ದೇಹದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ
ಇದೇ ಬಗೆಯ ಪರಿವರ್ತನೆಗಳು ಸಸ್ಯಗಳಲ್ಲೂ ಪ್ರಾಣಿಗಳಲ್ಲೂ ನಡೆಯುತ್ತಲೇ ಇರುತ್ತದೆ ನಿರ್ಜೀವ ವಸ್ತುಗಳ ಕಣಗಳು ಕೂಡಾ ನಿರಂತರ ಚಲನೆಯಲ್ಲಿರುತ್ತದೆ ಉಳಿವಿನ ಲಕ್ಷಣವೇ ಬದಲಾವಣೆ ಬದಲಾವಣೆಗಳು ನಿಧಾನವಾಗಿ ಆಗುವುದರಿಂದ ನಾವು ಅದನ್ನು ಗಮನಿಸುವುದಿಲ್ಲ ಹಗಲು ರಾತ್ರಿ ಋತುಮಾನಗಳ ಬದಲಾವಣೆ ನಮಗೇನು ಹೊಸತು ಎನಿಸುವುದಿಲ್ಲ ಆದರೆ ಪ್ರಕೃತಿ ನಿರ್ಮಿತ ಅಂಶಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕೌತುಕಗಳ ಭಂಡಾರವು ನಮ್ಮೆದುರು ಅನಾವರಣಗೊಳ್ಳುತ್ತದೆ ಈ ಪೀಠಿಕೆಯನ್ನು ಇಲ್ಲಿಗೆ ಮೊಟಕುಗೊಳಿಸಿ ವಿಷಯಕ್ಕೆ ಬರುತ್ತೇನೆ
ಕುಂದಾಪುರ ಪಂಚಗಂಗಾವಳಿ ನದಿತಟದ ಮರಳಿನಲ್ಲಿ ನದಿನೀರು ಇಳಿತವಾದಾಗ ಲೋಳೆಯ ರೂಪದ ಪಾರದರ್ಶಕ ವಸ್ತುವೊಂದು ಮರಳಿನಲ್ಲಿ ಕಚ್ಚಿಕೊಂಡು ಗೋಚರವಾಗುತ್ತಿತ್ತು ಬಲೂನು ಆಕೃತಿಯಲ್ಲಿ ಕಾಣಿಸಿಕೊಳ್ಳುವ ಈ ವಸ್ತುವನ್ನು ನಾವೆಲ್ಲರೂ ಚಂದ್ರನ ಮಲ ಎಂದೇ ಕರೆಯುತ್ತಿದ್ದೆವು ನಮ್ಮ ಹಿರಿಯರು ಕೂಡಾ ಹಾಗೇಯೇ ಹೇಳುತ್ತಿದ್ದರು ನದಿ ಇಳಿತದ ಸಮಯದಲ್ಲಿ ನಡೆದಾಡುವ ಸಂದರ್ಭದಲ್ಲಿ ಈ ಚಂದ್ರನ ಮಲದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡೆಯುತ್ತಿದ್ದೇವು ಅಷ್ಟರ ಮಟ್ಟಿಗೆ ಅದನ್ನು ಕಂಡರೆ ಜನ ಅಸಹ್ಯ ಪಡುತ್ತಿದ್ದರು ಅದು ತುಂಬಾ ಕಂಡು ಬಂದರೆ ಮೀನುಗಳು ದೂರಕ್ಕೆ ಓಡಿಹೋಗುತ್ತದೆ ಎಂಬ ನಂಬಿಕೆ ಮನೆ ಮಾಡಿತ್ತು ಆದರೆ ಈ ಚಂದ್ರನ ಮಲ ವಾಸ್ತವವಾಗಿ ನದಿ ನೀರಿನ ಭರತದ ಸಮಯದಲ್ಲಿ ನದಿತಳದ ಮರಳಿನ ಗುಳಿಗಳಲ್ಲಿ ಸಂಗ್ರಹವಾದ ನೀರಿನ ಬುಗ್ಗೆಗಳು ನದಿ ನೀರು ಇಳಿತವಾದಾಗ ಗುಳಿಗಳ ಮೂಲಕ ಮೇಲೆದ್ದು ಬಂದು ಬಲೂನು ಆಕೃತಿಯಲ್ಲಿ ರೂಪುಗೊಂಡು ಲೋಳೆಯಂತೆ ಕಾಣಿಸಿಕೊಳ್ಳುತ್ತಿದ್ದವು ಬಾಲ್ಯ ದಲ್ಲಿ ಕಂಡು ಅನುಭವಿಸಿದ ಪೃಕೃತಿ ವೈಚಿತ್ರಗಳ ಈ ದೃಶ್ಯ ಗಳು ನಮ್ಮ ಕೂತೂಹಲಕ್ಕೆ ಇಂಬುಕೊಡುತ್ತಿದ್ದು ಕಾಲಗತಿಸಿದಂತೆ ಈ ಚಂದ್ರ ನ ಮಲವನ್ನು ನಾನು ಮತ್ತೆ ಕಂಡ ಉದಾಹರಣೆ ಇಲ್ಲ.
ಚಂದ್ರಭೂಮಿಯಿಂದ ಎರಡುವರೆ ಲಕ್ಷ ಕಿ ಮೀ ದೂರದಲ್ಲಿ ಇದ್ದಾನೆ ಅಷ್ಟು ದೂರದಿಂದ ಚಂದ್ರನ ಮಲ ಭೂಮಿಗೆ ಅದರಲ್ಲೂ ನದಿತಳಕ್ಕೆ ಬೀಳುವುದೆಂದರೆ ಯಾರೂ ನಂಬುವುದಿಲ್ಲ ಆದರೆ ಬಾಲ್ಯ ದಲ್ಲಿ ನಮ್ಮ ಹಿರಿಯರು ಆಕಾಶದಿಂದ ಚಂದ್ರ ವಿಸರ್ಜಿಸುವ ಮಲ ಎಂದೇ ನಮ್ಮನ್ನು ನಂಬಿಸಿದ್ದರು ಪ್ರಸ್ತುತ ಈ ಜಗತ್ತಿನ ಕುರಿತು ತಿಳಿಯಲು ನಾವು ಸದಾ ಕೂತೂಹಲಿಗಳಾಗಿದ್ದೇವೆ ನಾವು ವಾಸಿಸುವ ಈ ಅದ್ಬುತ ಜಗತ್ತನ್ನು ತಿಳಿಯ ಹೊರಟರೆ ಅದು ಬಳ್ಳಿಯಿಂದ ಆರಂಭವಾಗಿ ಎಷ್ಟು ಕವಲೊಡೆದರೂ ಪುನಃ ಚಿಗುರುವ ರೀತಿಯಲ್ಲಿ ಎಂದೂ ಹಸಿರಾಗಿರುವುದು.
ಉಮಾಕಾಂತ ಖಾರ್ವಿ ಕುಂದಾಪುರ
ಉತ್ತಮ ಸಂಗ್ರಹಣೆ
👌👌👍