ಶ್ರೀ ಮಹಾಕಾಳಿ ಅಮ್ಮನವರ ಆರಾಧಿಸಿ ನದಿಯಲ್ಲೇ ತಮ್ಮ ಜೀವನದ ಮೌಲ್ಯ ಗಳ ಸಂಪಾದಿಸಿ ಅಭಿವೃದ್ಧಿ ಕಾಣುತ್ತಿರುವ ಕುಂದಾಪುರದ ಕೊಂಕಣಿ ಖಾರ್ವಿ ಸಮಾಜದ ಜನರು, ಇಂದು ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ವರ್ಗದಲ್ಲೂ ಗುರುತಿಸಿಕೊಂಡಿದ್ದಾರೆ ಅಲ್ಲವೇ ಎಂಬ ಮಾತು ಹಲವಾರು ಭಾರಿ ಕಿವಿಯ ಪಕ್ಕದಲ್ಲೆ ಗೊಂಯಿಗೊಡುತ್ತದ್ದೆ.
ಅದೇ¬ಷ್ಟೇ ಗಾಳಿ ಮಳೆ ಸಿಡಿಲು ಗುಡುಗುಗಳು ಬಂದರೂ ದೂರ ದಿಂದ ನದಿಯ ಕಡೆ ಒಮ್ಮೆ ಕಣ್ಣಾಯಿಸಿದರೆ ಮೀನುಗಾರಿಕೆ ಯಲ್ಲಿ ತೊಡಗಿರುವ ಒಂದು ದೋಣಿಯಾದರು ಇದ್ದೆ ಇರುತ್ತದ್ದೆ. ಕೆಲಸದ ಸಮಯವಿಲ್ಲದೆ, ಹವಾಮಾನಗಳ ವೈಪರಿತ್ಯಗಳ ನುಂಗಿಕೊಂಡು ದುಡಿಯುವ ಮೀನುಗಾರರು ನದಿಯ ಪಾತ್ರದ ಸಾಹಸಗಳಲ್ಲೂ ಮೇಲುಗೈ ಸಾಧಿಸಿದ ಅದೆಷ್ಟು ಉದಾಹರಣೆಗಳಿವೆ.
ಭಗಿರಥ ಮಹರ್ಷಿಗಳ ತಪ್ಪಸ್ಸಿನ ಫಲವಾಗಿ ಮಾನವ ಕುಲಕ್ಕೆ ವರಧಾನವಾಗಿ ಹರಿಯುತ್ತಿರುವ ಗಂಗಾಮಾತೆ ಯ ಒಡಲು ಬಹುಷ ಜಗತ್ತಿನ ಜೀವ ಸಂಕುಲಗಳಿಗೆ ಜೀವಿಸಲು ಮುಖ್ಯ ಆಯಾಮವಾಗಿದೆ.
ಪ್ರಕ್ರತಿ ವಿಕೋಪದಲ್ಲಿ ಮುನಿದರೆ ಇವಳನ್ನು ಇಡಿಯುವ ಶಕ್ತಿ ಜಗತ್ತಿನಲ್ಲೆ ಇಲ್ಲ…
ಇಂತಹ ಅಪಾಯದ ಅಲೆಗಳ ನಡುವೆ ಮೀನುಗಾರರಿಗೆ ತುತ್ತು ನೀಡುತ್ತಿರುವ ಗಂಗಾ ಮಾತೆಯ ಒಡಲಲ್ಲಿ ಈಜುದೆಂದರೆ ಅದಕ್ಕೆ ಇವಳ ಅನುಗ್ರಹ ಬೇಕೆ ಬೇಕು ಇದು ಎಲ್ಲರಿಗೂ ಸಾಧ್ಯವಿಲ್ಲದ ವಿಚಾರ.
ಅದೂ ಕೂಡ ಕೈ ಕಾಲುಗಳಿಗೆ ಬಿಗಿಯಾಗಿ ಸರಪಳಿ ಇರಬೇಕದಾರೆ.
ಹೌದು ನಾನೆಳಬೇಕೆಂದಿರುವುದು
ಕುಂದಾಪುರ ಪುರಸಭಾ ವ್ಯಾಪ್ತಿಯ ಖಾರ್ವಿ ಮಧ್ಯಕೇರಿ ಯ ಸಂಪತ್ ಖಾರ್ವಿ ಯವರ ಕಿರಿಯ ವಯಸ್ಸಿನ ಸಾಧನೆ ಬಗ್ಗೆ.
ಸುಮಾರು 18 ವರ್ಷದ ಹುಡುಗ ಸಂಪತ್ ಖಾರ್ವಿ ಹಲವಾರು ಭಾರಿ ಈಜು ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದ ಕಂಚಿನ ಪದಕ, ಬೆಳ್ಳಿಯ ಪದಕ ಈಗೆ ಹಲವಾರು ಪ್ರಶಸ್ತಿಗಳನ್ನು ತಂದು ಸಮಾಜಕ್ಕೆ ಕಿರೀಟವಾಗಿ ಮುಡಿಸಿರುತ್ತಾರೆ.
ಇನ್ನೂ ಎನಾದರೂ ಮಹತ್ತರವಾದ ಸಾಧನೆ ಮಾಡಬೇಕು ಎಂಬ ಹಂಬಲ ಹಾಗೂ ಛಲದಿಂದ ದಿನಕ್ಕೆ ನಾಲ್ಕು ಗಂಟೆ ಕಾಲಿಗೆ ಸರಪಳಿ ಬಿಗಿದುಕೊಂಡು ತಂದೆ ದೇವಾರಾಯ ಖಾರ್ವಿ ಯವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತ ನೀರಿನೊಂದಿಗೆ ಕಂಡ ಕನಸು KARNATAKA ACHIEVERS Book of Records ನಲ್ಲಿ ಖಾರ್ವಿ ಎಂಬ ಹೆಸರು ದಾಖಲಾಗುವಂತೆ ಮಾಡಿತು.
2019 ರ ಡಿಸೆಂಬರ್ 1 ನೇ ತಾರಿಕು ನಮ್ಮ ಸಮಾಜದ ಮೊಳಕೆಯೊಂದು ಚಿಗುರೊಡೆದ ದಿನ
ನದಿಯ ದಡವೇಲ್ಲಾ ಮೂಲೆ ಮೂಲೆಗಳಿಂದ ಬಂದ ಜನರ ದಂಡು ಚಪ್ಪಳೆಯ ಸದ್ದಿನೊಂದಿಗೆ ಹಲವು ಮಾಧ್ಯಮಗಳ ಕ್ಯಾಮಾರ ಕಣ್ಣಿನಲ್ಲಿ ಕಂಡಿದ್ದು ವಿಶಾಲವಾದ ನದಿಯ ಮಧ್ಯದಲ್ಲಿ ಕತ್ತು ಮೇಲೆತ್ತಿ ಬಿಗಿಯಾಗಿ ಸರಪಳಿ ಕಟ್ಟಿದ ಕೈ ಕಾಲು ಗಳನ್ನು ಬಡಿಯುತ್ತಾ ಈಜುತ್ತ ಬರುವ ಹುಡುಗನ ಸಾಹಸ ನಿಜಕ್ಕೂ ಮೈ ಜುಂಮ್ ಎನ್ನಿಸುವಂತೆ ಮಾಡಿತ್ತು.
ಬಸ್ರೂರಿನಿಂದ ಗಂಗೋಳ್ಳಿಯ ವರೆಗೂ ಕೈ ಕಾಲುಗಳಿಗೆ ಸರಪಳಿ ಬಿಗಿದು ಕೊಂಡು 25 km ಕ್ರಮಿಸಿ ಕೊನೆಗೆ ದಡಕ್ಕೆ ಬಂದು ಊಪ್ ಎಂದು ಬಿಟ್ಟ ಮೊದಲ ಉಸಿರೇ ತನ್ನ ಸಾಧನೆ ಯ ತ್ರಪ್ತಿ ತೊರಿಸಿತು.
ಇಂದು “ಸಂಪತ್ ಖಾರ್ವಿ” ಯವರ KARNATAKA ACHIEVERS Book of Records ನಲ್ಲಿ ದಾಖಲಾದ ಈ ಮಹತ್ತರ ಸಾಧನೆ ಗೆ ರಾಜ್ಯಾದ್ಯಂತ ಅಭಿನಂದನೆಗಳ ಮಹಾಪೂರ ಹರಿದು ಬಂತು.
ತಾನೋಬ್ಬನೆ ಅಲ್ಲದೆ ನಮ್ಮ ಸಮಾಜಕ್ಕೂ ಕೀರ್ತಿ ತಂದ ಇವರ ಸಾಹಸಕ್ಕೆ ಮುಂದೆಯು ಉತ್ತಮ ಬೆಂಬಲ ದೊರಕಬೇಕಿದೆ, ಮುಂದೆಯೂ ಈಜಿನಲ್ಲಿ ಸಾಧನೆ ಮಾಡಬೇಕಿಂದಿರುವ ಸಂಪತ್ ಖಾರ್ವಿ ಯವರ ಕನಸು ನನಸಾಗಲಿ ಜೀವನದಲ್ಲಿ ಇನ್ನಷ್ಟು ಯಶಸ್ಸಾಗಲಿ ಎಂದು kharvionline ಮೂಲಕ ಆಶಿಸುತ್ತೇನೆ.
ಸುನೀಲ್ ಖಾರ್ವಿ, ಕುಂದಾಪುರ
Weldone…