ಹೀಗೆ ಒಂದಿನ ಏನೋ ಕೆಲಸದ ಮೇಲೆ ರೋಡಲ್ಲಿ ನಾ ಹೋಗ್ತ ಇರುವಾಗ ದೂರದಲ್ಲಿ ಯಾರೋ ಒಬ್ಬ ಹುಡುಗ ರಸ್ತೆ ಬದಿಯಲ್ಲಿ ಒಂದು ಕೈಯಲ್ಲಿ ಹಾರಿ ಮತ್ತೊಂದು ಕೈಯಲ್ಲಿ ಗೀಡ ಇಡಕೊಂಡು ನಿಂತಿದವನು ನೋಡಿ ಕೂಲಿ ಹುಡುಗ ಅಂತ ನೋಡ್ದೆ. ಹತ್ತಿರ ಬರುವಾಗ ನೋಡಿದರೆ ಹರೇ ಇವ್ವ ನಮ್ಮ ಹೊಸಪೇಟೆ ಕಂಚುಗೋಡಿನ ನಿತೇಶ್ ಖಾರ್ವಿ.
ಹಾರಿ ಇಡ್ಕೊಂಡು ಇಲ್ಲಿ ಏನೂ ಮಾಡ್ತಿದಿದ್ದೆ ಕೇಳ್ದೆ ?
ಏನಿಲ್ಲ ರಮ್ಮಿ ಇವತ್ತು ಅಣ್ಣನಂದು ಹುಟ್ಡಬ್ಬ ಅದಕ್ಕಾಗಿ ಒಂದು ಗಿಡ ನೆಡುತ್ತಿದ್ದೀನಿ ಅಂದ,..
ಅವನಿಗಿದ್ದ ಪರಿಸರ ಪ್ರೀತಿ ನೋಡಿ…ನಾನು ಸುಮ್ನೇ ತಮಾಷೆಗೆ ನೇರವಾಗಿ ಒಂದು ಮಾತು ಹೇಳ್ದೆ, “ಅಲ್ಲ ಮಾರಯ ನೀನು ದೊಡ್ಡ ಸೆಲೆಬ್ರಿಟಿ, ರಾಜಕಾರಣಿಗಳ ಹಾಗೇ ಪರಿಸರ ದಿನದಂದು ಇವತ್ತು ಗಿಡ ನೆಟ್ಟಿ ಸೆಲ್ಪಿಗೆ ಪೋಸ್ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸ್ವಲ್ಪ ಲೈಕ ಕಾಮೆಂಟ್ ಪ್ರಚಾರ ತಗೊಂಡು ನಾಳೆ ಮತ್ತೆ ಆ ಗಿಡದ ವ್ಯವಸ್ಥೆ ಏನಾಗಿದೆ ? ನೀರ ಹಾಕಬೇಕಾ? ಗಿಡ ದೊಡ್ಡದಾಗುವರೆಗೂ ಏನಾದರೂ ವ್ಯವಸ್ಥೆ ಮಾಡಬೇಕಾ ಅಂತನೂ ನೋಡಲ್ಲ ನಾಳೆ ದನಕರುಗಳು ಬಂದು ತಿಂದು ಹೋಗ್ತದೆ ಮತ್ತೆ ಪುನಃ ಬರೋ ವರ್ಷ ಅದೇ ಜಾಗದಲ್ಲಿ ಗಿಡ ನೆಡ್ತಿಯಾ, ಇದರಿಂದ ಏನ್ ಪ್ರಯೋಜನ ಮಾರಯ ಅಂದೆ”.
ಅದಕ್ಕೆ ಅವನು ತುಂಬಾ ಸೊಗಸಾಗಿ ಒಳ್ಳೆಯ ಉತ್ತರ ಕೊಟ್ಟು ಹೇಳ್ದ ? “ಆತರ ಶೋಕಿ ನಾನು ಮಾಡುವುದಾದರೆ ಇನ್ನೂವರೆಗೆ ನಾನೂ ನೂರಾರು ಗಿಡಗಳನ್ನು ನೆಟ್ಟಿ ಕೈ ತೊಳೆದು ಗಿಡ ಜವಾಬ್ದಾರಿ ಚಿಂತನೆ ಮಾಡದೆ ನನ್ನ ಪಾಡಿಗೆ ಇರ್ತಿದ್ದೆ” ಆದರೆ ಮಾಡಿದ ಕೆಲಸ ಸ್ವಲ್ಪವಾದರೂ ಅಚ್ಚುಕಟ್ಟಾಗಿ ಮುಂದೆ ನಮಗೆ ಪ್ರಯೋಜನ ಆಗಬೇಕು ಎಂಬ ಉದ್ದೇಶ ಅಷ್ಟೇ….
ಮುಂದಿನ ದಿನದಲ್ಲಿ ದೊಡ್ಡಮಟ್ಟದಲ್ಲಿ ಗಿಡ ನೆಡುವ ಅಂದೋಲನ ಮಾಡಬೇಕೆಂಬ ಆಸೆ ಕೂಡ ಇದೆ ಅದನ್ನು ಖಂಡಿತ ಮಾಡ್ತೀನಿ ಎಂಬ ಭರವಸೆ ಕೂಡ ನೀಡಿದ್ದಾನೆ.
ಹೌದು ಅವನು ಹೇಳಿದ್ರಲ್ಲಿ ಸತ್ಯಾಂಶ ಇದೆ….
ಅವನು ಸತತ ಎರಡು ವರ್ಷಗಳಿಂದ ಕನಿಷ್ಠ 15 ಗಿಡಗಳನ್ನು ನೆಟ್ಟಿದ. ಏನ್ರೀ ಓ ಅಷ್ಟೇ ನಾ ? ಅಂದುಕೊಳ್ಳಬೇಡಿ…ನೂರಾರು ಗಿಡಗಳನ್ನು ನೆಟ್ಟಿ ಬೆಳೆಯಲು ಏನು ವ್ಯವಸ್ಥೆ ಮಾಡದೇ ನೂರಾರಲ್ಲಿ ಕೇವಲ ಒಂದು ಗಿಡ ಉಳಿಸಿ ಕೊಳ್ಳುವುದು ದೊಡ್ಡ ವಿಷಯ ಅಲ್ಲ…
ನೆಟ್ಟಿದ್ದು ಒಂದು ಗಿಡವಾದರೂ ಅದನ್ನು ಬೆಳೆದು ದೊಡ್ಡದಾಗುವ ತನಕ ಮುತುವರ್ಜಿಯಿಂದ ಬೆಳೆಸಿ ಕೊನೆ ತನಕ ಉಳಿಸಿಕೊಳ್ಳುವುದೇ ದೊಡ್ಡ ಗುಣ. ನಿತೇಶ್ ಹಾಗೇ ಅಲ್ಲ ತಾನು ನೆಟ್ಟಿದ ಗಿಡಗಳನ್ನು ಜಾಗ್ರತೆಯಿಂದ ದಿನನಿತ್ಯ ಮನೆಯಿಂದ ನೀರು ತಂದು ಹಾಕಿ, ದನಕರುಗಳು ಬಂದು ತಿನ್ನದಾಗೆ ಸುತ್ತಲೂ ಸರಿಯಾದ ರಕ್ಷಣೆ ತಟ್ಟಿ ಮಾಡಿ ಗಿಡಗಳನ್ನು ಉಳಿಸಿ ಬೆಳೆಸುವ ಕಾರ್ಯದ ಜವಾಬ್ದಾರಿಯನ್ನು ಕೂಡ ತೆಗೆದುಕೊಂಡ ನಿಜವಾದ ಪರಿಸರ ಪ್ರೇಮಿ ಅಂದ್ರೇ ಹೀಗೆ ಅಲ್ವ.
ಇವರಿಗೆ ಇರುವ ಪರಿಸರ ಪ್ರೀತಿ ನಮ್ಮಲ್ಲಿನ ಪ್ರತಿಯೊಬ್ಬರು ಅನುಸರಿಸಲಿ ಎಲ್ಲರಿಗೂ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದಲೇ ಇವರ ಕಿರು ಪರಿಚಯ ಮಾಡಿಸಿದೀನಿ ಅಷ್ಟೇ…
ಓ ಮತ್ತೊಂದು ಮಾತು ಹೇಳೋಕೆ ನಂಗೆ ನೆನಪು ಹೋಯ್ತು…
ಇವನ ವೇಷಭೂಷಣ ಮತ್ತು ಹಾರಿ ಇಡಕೊಂಡು ಕೆಲಸ ಮಾಡುವುದನ್ನು ನೋಡಿ ಕೂಲಿ ಹುಡುಗ ಅವಿದ್ಯಾವಂತ ಅಂತ ಭಾವಿಸ ಬೇಡಿ ಯಾಕೆಂದರೆ ಅವನು ಓದಿದ್ದು ಡಬ್ಬಲ್ ಡಿಗ್ರಿ ಮಾರಾಯ್ರೇ…ಅಷ್ಟೇ ಅಲ್ಲ ಅವನ ಉದ್ಯೋಗ ಸಿವಿಲ್ ಇಂಜಿನಿಯರ್ ಕಾಲೇಜನಲ್ಲಿ ಪ್ರೊಫೆಸರ್ ಹಾಗೂ ಉತ್ತಮ ವಾಗ್ಮಿ ಸಮಾಜದ ಅಂಕುಡೊಂಕುಗಳನ್ನು ತಿದ್ದ ಬೇಕೆಂಬ ಬಿಸಿರಕ್ತದ ನಿಷ್ಠುರವಾದಿ ಸೀದಾಸಾದ ವ್ಯಕ್ತಿ….
ಯಾಕೋ ಅಲ್ಲಿನ ವಾತಾವರಣ ತನ್ನ ಸಿದ್ದಾಂತಕ್ಕೆ ಸರಿ ಹೊಂದಲ್ಲ ಅಂತ ಇಂಜಿನಿಯರ್ ಪ್ರೊಫೆಸರ್ ಕೆಲಸ ಬಿಟ್ಟು ಸ್ವಂತ ಕಾಂಟ್ಯ್ರಾಕ್ಟ್ ಕೆಲಸ ಮಾಡಿಕೊಂಡಿದ್ದಾನೆ.
ಸ್ವ ಕಾರ್ಯ ಜೊತೆ ಸಾಮಾಜಿಕ ಕಾರ್ಯ ಕೂಡ ಆಗಲಿ ಎಂಬ ಮನೋಭಾವದ ವ್ಯಕ್ತಿ. ತೆರೆಮರೆಯಲ್ಲಿ ನಿಂತು ಸಾಮಾಜಿಕ ಕಾರ್ಯ ಕೂಡ ಮಾಡುತ್ತಿದ್ದಾರೆ. ಊರಿನ ಆರೋಗ್ಯ ಮತ್ತು ಸ್ವಚ್ಚತಾ ದೃಷ್ಟಿಯಿಂದ ಈಗಾಗಲೇ ಇಂಗು ಗುಂಡಿಯ ಕಾರ್ಯಗಳನ್ನು ಖುದ್ದು ತಾನೇ ಅನಕ್ಷರಸ್ಥರ ಹಾಗೂ ಅಶಕ್ತರ ಮನೆ ಮನೆಗೆ ಹೋಗಿ ಅರ್ಜಿ ಫಾರಂ ಭರ್ತಿಮಾಡಿ ಪಂಚಾಯತ್ ಹೋಗಿ ವಿಚಾರಿಸಿ ಜವಾಬ್ದಾರಿಯಿಂದ ತನ್ನೂರಿನ ಹೆಚ್ಚಿನ ಮನೆಯ ಇಂಗು ಗುಂಡಿ ಕಾಮಗಾರಿಗಳನ್ನು ಅತೀ ಕಡಿಮೆಯಲ್ಲಿ ಅಚ್ಚುಕಟ್ಟಾಗಿ ಪ್ರಾಮಾಣಿಕವಾಗಿ ಕಾರ್ಯಗಳನ್ನು ತ್ವರಿತವಾಗಿ ಮುಗಿಸಿದ್ದಾನೆ.
ನೀವು ಕೂಡ ನಿಮ್ಮಲಿನ ಯಾವುದೇ ವಾಸ್ತು ಪ್ರಕಾರದ ಕಟ್ಟಡಗಳ ವಿನ್ಯಾಸ, ಸಿವಿಲ್ ಇಂಜಿನಿಯರಿಂಗ್ ಕನ್ಸಲ್ಟೆನ್ಸಿ ಮತ್ತು ಕಾಂಟ್ರಾಕ್ಟ್ ಕೆಲಸಗಳಿಗೆ ಕೂಡ ಸಂಪರ್ಕಿಸಬಹುದು, ನಿತೇಶ ಖಾರ್ವಿ: 9986691365.
ಹೆಬ್ಬುಲಿ ರಮ್ಮಿ ಕಂಚುಗೋಡು
ನಮ್ಮ ಗುರುಗಳು ನಮ್ಮ ಹೆಮ್ಮೆ