45 ವರ್ಷ ವಯಸ್ಸು ಮೀರಿದವರಿಗೆ ಕೋವಿಡ್ ಲಸಿಕೆ…

ಕೊರೋನಾ ನಿರ್ಮೂಲನೆ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಮುಂದಿಡಲು ಸಜ್ಜಾಗಿರುವ ಶ್ರೀ ಮಹಾಕಾಳಿ ದೇವಸ್ಥಾನ, ವಿದ್ಯಾರಂಗ ಮಿತ್ರ ಮಂಡಳಿ (ರಿ.) ಖಾರ್ವಿಕೇರಿ, ಕುಂದಾಪುರ.

45 ವರ್ಷಕ್ಕಿಂತ ಮೇಲ್ಪಟ್ಟ ಸಮಾಜ ಭಾಂದವರನ್ನು ಕೊರೋನಾ ವೈರಸ್ ಲಸಿಕೆ ಪಡೆಯಲು ಅರ್ಹರನ್ನಾಗಿ ಮಾಡುವ ಮೂಲಕ ವ್ಯಾಕ್ಸಿನೇಷನ್ ಅಭಿಯಾನದ ಅಂಗವಾಗಿ ದಿನಾಂಕ 21/06/2021 ನೇ ಸೋಮವಾರ ದಂದು ಶ್ರೀ ಮಹಾಕಾಳಿ ದೇವಸ್ಥಾನ ಸಭಾಂಗಣ ದಲ್ಲಿ ಮೊದಲು ಬಂದ 200 ಜನ ಫಲಾನುಭವಿಗಳಿಗೆ ಬೆಳ್ಳಗ್ಗೆ ಗಂಟೆ 9:30 ರಿಂದ ಲಸಿಕೆ ನೀಡಲಾಗುವುದು.

ಇದರೊಂದಿಗೆ ಕೊರೋನಾ ವೈರಸ್ ಕಾಯಿಲೆಯ (ಕೋವಿಡ್ -19) ವಿರುದ್ಧದ ಹೋರಾಟದ ಮತ್ತೊಂದು ಮೈಲಿಗಲ್ಲಾಗಿದೆ.

ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ ತೋರಿಸಿ ರೋಗನಿರೋಧಕ ಲಸಿಕೆಯನ್ನು ಪಡೆಯಬಹುದು.

ಶ್ರೀ ಮಹಾಕಾಳಿ ದೇವಸ್ಥಾನ, ಖಾರ್ವಿಕೇರಿ, ಕುಂದಾಪುರ
ವಿದ್ಯಾರಂಗ ಮಿತ್ರ ಮಂಡಳಿ (ರಿ.) ಖಾರ್ವಿಕೇರಿ, ಕುಂದಾಪುರ

Leave a Reply

Your email address will not be published. Required fields are marked *