ಶ್ರೀ ಮಹಾಕಾಳಿ ದೇವಸ್ಥಾನ ದಲ್ಲಿ ಕಳೆದ 3 ದಿನಗಳಿಂದ 2 ಹಂತಗಳಲ್ಲಿ ಮೊದಲ ಡೊಸ್ ಲಸಿಕೆ ವಿತರಣೆಯಾಗಿದೆ ಅನುಬಂಧ-1 ಮತ್ತು ಅನುಬಂಧ-2 ರ ಅನ್ವಯ 18+ ಹಾಗೂ 45 + ವಯೋಮಿತಿ ಯ ಸೂಮಾರು 400 ಜನ ಲಸಿಕೆ ಪಡೆಯಲು ಸಹಕಾರಿಯಾಗಿದೆ ಎಂದು ಶ್ರೀ ಮಹಾಕಾಳಿ ದೇವಸ್ಥಾನ ದ ಅಧ್ಯಕ್ಷ ರಾದ ಶ್ರೀ ಜಯಾನಂದ ಖಾರ್ವಿ ಹಾಗೂ ವಿದ್ಯಾರಂಗ ಮಿತ್ರ ಮಂಡಳಿ ಅಧ್ಯಕ್ಷ ರಾದ ಶ್ರೀ ಅರುಣ್ ಖಾರ್ವಿ ತಿಳಿಸಿದ್ದಾರೆ.
ದಿನಾಂಕ 25/06/2021 ರ ಶುಕ್ರವಾರ ವು ಶ್ರೀ ಮಹಾಕಾಳಿ ದೇವಸ್ಥಾನ ದಲ್ಲಿ ಲಸಿಕೆ ವಿತರಣೆ ನಡೆಯಲಿದ್ದು 45+ ಇರುವ ಹೆಚ್ಚಿನ ಫಲಾನುಭವಿಗಳು ಇದರ ಸದುಪಯೋಗ ಪಡೆಯಬಹುದಾಗಿದೆ.
ಇನ್ನೂ ಕೆಲವೆ ದಿನಗಳಲ್ಲಿ ವಾರ್ಡ್ ಗಳ ಅನ್ವಯ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ದೊರೆಯಲಿದೆ.
ಸಮಾಜ ದಿಂದಲೂ ಸಂಭದಪಟ್ಟ ಇಲಾಖೆಗೆ ಬೇಡಿಕೆ ಇಟ್ಟಿದ್ದೇವೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನೀಲ್ ಖಾರ್ವಿ ತಿಳಿಸಿದ್ದಾರೆ.