ಕಡಲತೀರದ ಮಿನುಗುವ ಮೀನುಗಾರ ಎಂಬ ಅದ್ಬುತ ನೃತ್ಯಗಾರ.!!

ಕಂಚುಗೋಡಿನ ಜನರ ಜೀವಾಳ ಕುಲಕಸುಬು ಮೀನುಗಾರಿಕೆ. ವಿನಯ ಖಾರ್ವಿ ತನ್ನ ತಂದೆ ಅಣ್ಣ ಜೊತೆ ಮೀನುಗಾರಿಕೆ ಮಾಡುತ್ತಲೇ ಉಳಿದ ಸಮಯವನ್ನು ತನ್ನ ಜೀವನದ ಅತೀ ದೊಡ್ಡ ಕನಸಾದ ನೃತ್ಯ ಕಲಿಕೆಯಲ್ಲಿ ತೊಡಗಿಕೊಂಡು ಅತ್ಯುತ್ತಮವಾಗಿ ನೃತ್ಯವನ್ನು ಕೂಡ ಕಲಿತುಕೊಳ್ಳುತ್ತಾರೆ . ತನ್ನದೇ ಭಿನ್ನ ವಿಭಿನ್ನ ಶೈಲಿಯಲ್ಲಿ ನೃತ್ಯ ಮತ್ತು ಅಪಾಯಕಾರಿಯಾದ ಸ್ಟಂಟ್ ಸಹಾಸದ Hiphop ಡಾನ್ಸಿಂಗ್ ಮಾಡುತ್ತ ಮಾಡುತ್ತಲೇ ಕೈ ಕಾಲು ಮುರಿದುಕೊಂಡಿದ್ದು ಲೆಕ್ಕವಿಲ್ಲ ಆದರೂ ತನ್ನ ಸಾಹಸ ಹಿಫಾಪ್ ನೃತ್ಯದ ಗುರಿಯನ್ನು ಬಿಟ್ಟಿಲ್ಲ.

ಚಿಕ್ಕ ವಯಸ್ಸಿನಲ್ಲಿಯೇ ಡಾನ್ಸ್ ಕಲಿಬೇಕೆಂಬ ಆಸಕ್ತಿಯಿಂದ ನಿಂತ ಕೂತ ಜಾಗದಲ್ಲೆಲ್ಲ ಒಟ್ರಾಸಿ ಡಾನ್ಸ್ ಅಭ್ಯಾಸ ಮಾಡುತ್ತ ಮಾಡುತ್ತ ತಾನು ಕಲಿತಿದು ಅಲ್ಲದೇ ತನ್ನ ಜೊತೆಗೆ ಊರಿನ ಚಿಕ್ಕಪುಟ್ಟ ಮಕ್ಕಳನ್ನು ಸೇರಿಸಿ ದಿನನಿತ್ಯ ಕಡಲತೀರದ ಮಣ್ಣಿನಲ್ಲಿ ಅಪಾಯಕಾರಿ ಸಾಹಸಿ ಸ್ಟೆಪ್ ಹಿಫಾಪ್ ನೃತ್ಯದ ಹೆಜ್ಜೆಗಳನ್ನು ಕಲಿಸಿ ಉತ್ತಮ ತರಬೇತಿ ನೀಡುತ್ತ ನೀಡುತ್ತ ಕೊನೆಗೆ ತನ್ನ ಕನಸಿನ ಕೂಸದ Amazing steppers ಸ್ವಂತ ನೃತ್ಯ ತಂಡವನ್ನು ಕಟ್ಟಿಕೊಂಡೆ ಬಿಟ್ಟರು. ಅದೇ ನೃತ್ಯ ತಂಡದಿಂದಲೇ ಯಾವುದೇ ಗರುವಿನ ತರಬೇತಿ ಇಲ್ಲದೆ ಏಕಲವ್ಯ ಹಾಗೇ ಸ್ವ ಬುದ್ಧಿವಂತಿ ಮತ್ತು ಪ್ರತಿಭಾವಂತಿಕೆಯಿಂದ ಸಿಕ್ಕ ಸಿಕ್ಕ ಕಡೆ ಭಾಗವಹಿಸುತ್ತ ಮೊದಲ ಭಾಗದಲ್ಲಿ ಸುಮಾರು ಒಟ್ಟು 40 ಪ್ರಶಸ್ತಿಗಳನ್ನು ಚಾಚಿಕೊಂಡಿದ್ದಾರೆ ಹಾಗೂ ತನ್ನ ಕನಸಿನ ಕೂಸಾದ ಸ್ವಂತ Amazing steppers ನೃತ್ಯ ಶಾಲೆಯನ್ನು ಆರಂಭಿಸಿ ಈಗಾಗಲೇ ಅವರ ನೃತ್ಯ ಶಾಲೆಯಲ್ಲಿ 60 ಮಕ್ಕಳಿಗೆ ನೃತ್ಯವನ್ನು ಕಲಿಸುತ್ತಿದ್ದಾರೆ.

ನಮ್ಮ ಕುಂದಾಪುರ-ಗಂಗೊಳ್ಳಿಯ ಆಸುಪಾಸಿನ ಯಾವುದೇ ನೃತ್ಯದ ವೇದಿಕೆ ಇರಲಿ “Amazing steppers” dance ಇದೆ ಅಂದರೆ ಓ..ಕಂಚುಗೋಡು ವಿನಯ ಖಾರ್ವಿ ಯವರ ನೃತ್ಯ ತಂಡ ಅಲ್ವ, ಹಾ ಅವರದ್ದು ಡಾನ್ಸ್ ಸಖತ್ ಸೂಪರ್ ಇರುತ್ತೆ ಮರಯ ಅವರ ಡಾನ್ಸ್ ನೋಡೋಕೇ ಖುಷಿ ಆಗುತ್ತೇ ಮರ್ರೇ, ಅವರ ಡಾನ್ಸಿಂಗ್ ನೋಡುವುದಕ್ಕಾಂತಲೇ ಜನ‌ ಕಾತುರದಿಂದ ಕಾಯುತ್ತಾರೆ…

Amazing steppers ಈ ಹೆಸರೇ ಹೇಳುವಂತೆ ಹೆಸರಿಗೆ ತಕ್ಕಂತೆ ಅವರ ಡಾನ್ಸಿಂಗ್ ಶೈಲಿಯು ಒಂದು ಅದ್ಬುತ. ವೇದಿಕೆಯ ಮೇಲೆ ಅವರ ಅಪಾಯಕಾರಿ ಡಾನ್ಸಿಂಗ್ ಸ್ಟಂಟ್ ಸ್ಟೆಪ್ ಮಾಡುವುದು ನೋಡಿದರೆ…ಅಬ್ಬಾ ಅಯ್ಯೋ ದೇವ್ರೇ ಅಂತ ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯದಿಂದ ಕೂಗಾವರೇ ಜಾಸ್ತಿ…ಅವ್ರು ಹಾರುವುದು ಜಿಗಿಯುವುದು ಬೀಳುವುದು ನೋಡಿದರೆ ನಮ್ಮ ಎದೆ ಢವಢವ ಆಗುತ್ತೇ ಅಯ್ಯಪ್ಪೋ ಇಂತದೆಲ್ಲ ಮಾಡಿ ಏನೋ ಕೈಕಾಲು ಮುರಿದುಕೊಳ್ತರಪ್ಪ ಈ ಹುಡುಗ್ರು ಅನಿಸುತ್ತೆ, ಮತ್ತೆ ಕೆಲವರು ಇವ್ರು ಇನ್ಸೂರೆನ್ಸ್ ಮಾಡಿಕೊಂಡೇ ಬಂದಿರಬೇಕು ಅಂತಾರೆ…!!

ಹನ್ನೊಂದು ವರ್ಷ ತನ್ನ ನೃತ್ಯ ಜೀವನದಲ್ಲಿ ಸರಿ ಸುಮಾರು ಆರು ನೂರಕ್ಕಿಂತ ಹೆಚ್ಚು ವೇದಿಕೆಯ ಮೇಲೆ ಆರು ನೂರಾಕ್ಕಿಂತ ಹೆಚ್ಚು ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ. ನೃತ್ಯ ವಿಭಾಗದಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿ ಒಟ್ಟು ಬರೊಬ್ಬರಿ 94 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿ ನಮ್ಮ ತಾಲ್ಲೂಕು ಹಾಗೂ ಊರಿನ ಹೆಸರನ್ನು ಪ್ರಜ್ವಲಿಸುವಾಗೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಕಿನಾರ ಸಿನಿಮಾದಲ್ಲಿ ನೃತ್ಯಗಾರರಾಗಿ ಕೊರೇಗ್ರಾಫರ್ ಮಾಡಿದ್ದರೆ ಹಾಗೂ ಯಶ್ ನಟನೆಯ “ಮಾಸ್ಟರ್ ಫೀಸ್” ಸಿನಿಮಾದಲ್ಲಿ ಕೂಡ ಬ್ಯಾಕ್ ಗ್ರೌಂಡರಾಗಿ ನೃತ್ಯಿಸಿದ್ದಾರೆ. ತಮಿಳಿನ ವಿಜಯಸೇತುಪತಿ ಮತ್ತು ತಮನ್ನಾರ ಸೆಲೆಬ್ರಿಟಿಗಳ ಹೆಸರಾಂತ ಪ್ರಖ್ಯಾತ ರಿಯಾಲಿಟಿ ಶೋ masterchef ಕಾರ್ಯಕ್ರಮದಲ್ಲಿ ಕರೆಸಿ ಅಲ್ಲಿ ಇವರನ್ನು ಸೆಲೆಬ್ರಿಟಿ ಗುಂಪಿನಲ್ಲಿ ಸೇರಿಸಿ ಶೂಟಿಂಗ್ ಮುಗಿಸಿದು ನಮ್ಮ ಕುಂದಾಪುರ ತಾಲೂಕಿಗೆ ಹೆಮ್ಮೆಯ ವಿಷಯ. ಮುಂದಿನ ದಿನದಲ್ಲಿ ವಿನಯ ಖಾರ್ವಿ ಇರುವ master chef ಶೋ ಅತೀ ಶೀಘ್ರದಲ್ಲಿ ತೆರೆ ಕಾಣಬಹುದು.

ಮತ್ತೊಂದು ಶುಭ ಸುದ್ದಿ ಏನೆಂದರೆ ಝೀ ಕನ್ನಡ ವಾಹಿನಿಯಲ್ಲಿ ವಾರಾಂತ್ಯದಲ್ಲಿ ಪ್ರಸಾರಗೊಳ್ಳುತ್ತಿರುವ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಎನ್ನುವ ರಿಯಾಲಿಟಿ ಶೋನಲ್ಲಿ ಈ ವಾರ ಅಂದರೆ ಇಂದು ಶನಿವಾರ ರಾತ್ರಿ 7:30 ಸಮಯಕ್ಕೆ ಕಂಚುಗೋಡಿನ ವಿನಯ್ ಖಾರ್ವಿ ನೇತೃತ್ವದ “ಆಮೇಜಿಂಗ್ ಸ್ಟೇಪ್ಪರ್ಸ್” ನೃತ್ಯ ತಂಡ ನೃತ್ಯ ಪ್ರದರ್ಶನ ನೀಡಲಿದೆ ನಿವೆಲ್ಲರೂ ವೀಕ್ಷಿಸಿ ಪ್ರೋತ್ಸಾಹದ ಚಪ್ಪಾಳೆಯ ಹಾಡನ್ನು ಹಾಡಿ ಹಾರೈಸಿ.🙏

ಹಾಗೂ ನಿಮ್ಮ ಯಾವುದೇ ರೀತಿ‌ಯ ಸಭೆ ಸಮಾರಂಭಗಳಲ್ಲಿ ಆಮೇಜಿಂಗ್ ನೃತ್ಯ ತಂಡವನ್ನು ಸಂಪರ್ಕಿಸಬೇಕಾದರೆ ಈ ಕೆಳಗಿನ ನಂಬ್ರರಿಗೆ ಕರೆ ಮಾಡಿ ಸಹಕರಿಸಿ. ವಿನಯ ಖಾರ್ವಿ :9035035749

ಹೆಬ್ಬುಲಿ ರಮ್ಮಿ ಕಂಚುಗೋಡು

3 thoughts on “ಕಡಲತೀರದ ಮಿನುಗುವ ಮೀನುಗಾರ ಎಂಬ ಅದ್ಬುತ ನೃತ್ಯಗಾರ.!!

Leave a Reply

Your email address will not be published. Required fields are marked *