ಹೊನ್ನಾವರ: ಕಾಸರಕೊಡು ಟೊಂಕಾ ಭಾಗದ ಶರಾವತಿ ನದಿ ಅಳಿವೆ ಪ್ರದೇಶದಲ್ಲಿ ಹೆಚ್ಪಿಪಿಎಲ್ ಕಂಪನಿ ವಾಣಿಜ್ಯ ಬಂದರು ಕಾಮಗಾರಿ ನಡೆಸಲು ಮುಂದಾಗಿದ್ದು, ಸ್ಥಳೀಯ ಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹೊನ್ನಾವರದ ಕಾಸರಗೋಡು ಪ್ರದೇಶದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಖಾಸಗಿ ವಾಣಿಜ್ಯ ಬಂದರು ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತೆ ಪೊಲೀಸ್ ಭದ್ರತೆಯಲ್ಲಿ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಮನೆ ತೆರವಿಗೆ ಮುಂದಾಗಿದ್ದನ್ನು ವಿರೋಧಿಸಿ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಯುವಕನೋರ್ವ ಸಮುದ್ರಕ್ಕೆ ಹಾರಲು ಮುಂದಾಗಿದ್ದು ಪೊಲೀಸರು, ಕರಾವಳಿ ಕಾವಲು ಪಡೆ ಯಿಂದ ರಕ್ಷಣೆ ಮಾಡಲಾಗಿದೆ.
ಕಾಸರಕೊಡು ಟೊಂಕಾ ಭಾಗದ ಶರಾವತಿ ನದಿ ಅಳಿವೆ ಪ್ರದೇಶದಲ್ಲಿ ಸುಮಾರು 600 ಕೋಟಿ ರೂ.ವೆಚ್ಚದಲ್ಲಿ ಹೆಚ್ಪಿಪಿಎಲ್ ಕಂಪನಿ ವಾಣಿಜ್ಯ ಬಂದರು ನಿರ್ಮಿಸುತ್ತಿದೆ. ಸರ್ಕಾರ ವಾಣಿಜ್ಯ ಬಂದರು ನಿರ್ಮಾಣಕ್ಕೆ 93 ಎಕರೆ ಮಂಜೂರಿ ಮಾಡಿದೆ. ಕೆಲ ತಿಂಗಳ ಹಿಂದೆ ವಾಣಿಜ್ಯ ಬಂದರು ಕಾಮಗಾರಿ ಪ್ರಾರಂಭಿಸಿದ್ದ ಕಂಪನಿ ಸ್ಥಳೀಯರ ವಿರೋಧದಿಂದ ಸ್ಥಗಿತಗೊಳಿಸಿತ್ತು.
ಇಂದು ಬೆಳಿಗ್ಗೆ ಮತ್ತೆ ಪೊಲೀಸರ ಭದ್ರತೆಯಲ್ಲಿ ಕಾಮಗಾರಿ ನಡೆಸಲು ಮುಂದಾಗಿದ್ದು ಸ್ಥಳೀಯ ಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳೆಗ್ಗೆಯಿಂದಲೇ ಸುರಿಯುವ ಮಳೆಯನ್ನು ಲೆಕ್ಕಿಸದೆ ಸಾವಿರಾರು ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಕಾಮಗಾರಿ ಸ್ಥಗಿತಗೊಳಿಸದ ಹಿನ್ನೆಲೆ ಕೆಲ ಯುವಕರು ಸಮುದ್ರಕ್ಕೆ ಹಾರಲು ಯತ್ನಿಸಿದ್ದಾರೆ. ಸದ್ಯ ಪೊಲೀಸರು ಹಾಗೂ ಸ್ಥಳೀಯರು ಯುವಕರನ್ನು ತಡೆದಿದ್ದು, ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪ್ರತಿಭಟನೆಯ ಸ್ಥಳದಲ್ಲಿ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
www.kharvionline.com
February ಅಲ್ಲಿ ನಾನು attend ಅದ ಒಂದು ಕಾನ್ಫರೆನ್ಸ್ ನಲ್ಲಿ ಕರ್ನಾಟಕದ ಕರಾವಳಿಗೆ ಕೇಂದ್ರ ಸರ್ಕಾರ ಮಾಡಿರುವ Coastal ಡೆವಲಪಮೆಂಟ್ ಪ್ಲಾನ್ ಹಂಚಿಕೊಂಡಿದ್ದರು … ಅದನ್ನು ನೋಡಿದಾಗ ನನಗೆ ಅನಿಸುದು ಕರಾವಳಿಯನ್ನು ಯಾವೊದೋ ಒಂದು ವಾಣಿಜ್ಯ ಬಳಿಕೆಗೆ ಉಪಾಯಯೋಗಿಸಿಕೊಳ್ಳುವ ವಸ್ತುವಿನಂತೆ ಪ್ಲಾನಿಂಗ್ ಆಗಿದೆ …
ಅಲ್ಲಿರಿವ ಪ್ರಕೃತಿ, ಜನ, ತಲತಲಾಂತರದಿಂದ ಅವರ ವಾಸಸ್ಥಾನ ಅವರ ಜೀವನೋಪಾಯ ಅಲ್ಲಿನ ಸಂಪ್ರದಾಯ ಇದ್ಯಾವುದರ ಬಗ್ಗೆ ಏನು ಹೇಳಲೇ ಇಲ್ಲ. ಅವರ ಪ್ರಕಾರ ಇಲ್ಲಿನ ಪ್ರದೇಶ ದೆವೆಲೋಪ್ ಆಗುತ್ತೆ ಆದರೆ seabird ನಮಗೆ ಸಾಕ್ಷಿ ಸ್ಥಳೀಯರು ಎಷ್ಟು ದೆವೆಲೋಪ್ ಆಗಿದೆ ಅನ್ನುವುದಕೆ. ಕಾಸರಗೋಡು ಆರಂಭ ಮಾತ್ರ ಅನಿಸುತ್ತೆ .