ಶತಯಗತಾಯ ಮೀನುಗಾರರ ಸಮಾಧಿ ಕಟ್ಟಿ ವಾಣಿಜ್ಯ ಬಂದರು ನಿರ್ಮಾಣ ಮಾಡಲೇಬೇಕು ಎಂದು ಸರ್ಕಾರ ಹಟ ತೊಟ್ಟಿದೆ ಹತ್ತು ವರ್ಷಗಳ ಹಿಂದೆ ಈ ಯೋಜನೆ ಆಸ್ತ್ವಿತವಕ್ಕೆ ಬಂದರೂ ಅದರ ಅನುಷ್ಠಾನ ಆಗುತ್ತಿರುವುದು ಈಗ ಹಿಂದಿನ ಸರಕಾರದ ಅವಧಿಯಲ್ಲಿ ಇಲ್ಲಿ ಜನರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆದಿರಲಿಲ್ಲ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಇದರಲ್ಲಿ ನೇರವಾಗಿ ಪಾಲ್ಗೊಂಡು ಬಡ ಮೀನುಗಾರರನ್ನು ಬಲಿ ತೆಗೆದುಕೊಳ್ಳಲು ಹವಣಿಸುತ್ತಿದೆ ಈ ಪಟ್ಟಭದ್ರ ಹಿತಾಸಕ್ತಿಗಳಿಗೆ ಈ ವಾಣಿಜ್ಯ ಬಂದರು ನಿರ್ಮಾಣ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ.
ಈ ಪ್ರದೇಶ ಅಪರೂಪದ ಕಡಲಾಮೆಗಳ ವಿಶಿಷ್ಟ ಪ್ರಭೇಧಗಳ ಸಂರಕ್ಷಣಾ ಕೇಂದ್ರವಾಗಿದ್ದು ಸ್ಥಳೀಯ ಮೀನುಗಾರರು ಕಡಲಾಮೆಗಳನ್ನು ಹಲವಾರು ವರ್ಷಗಳಿಂದ ಕಡಲಾಮೆ ಮೊಟ್ಟೆ ಗಳನ್ನು ಸಂರಕ್ಷಣೆ ಮಾಡುತ್ತಾ ಬಂದಿದ್ದಾರೆ ಜೀವವೈವಿಧ್ಯ ಗಳ ಅಪೂರ್ವ ತಾಣವಾದ ಈ ಪ್ರದೇಶ ಬಂದರು ನಿರ್ಮಾಣ ಕಾಮಗಾರಿಯಿಂದ ನಾಶವಾಗಲಿದೆ ಭಟ್ಕಳದ ಶಿರಾಲಿಯಲ್ಲಿ ಕೆಲವು ಧನಿಕರ ಅಂಗಡಿ ಮನೆ ಮುಂಗಟ್ಟುಗಳನ್ನು ಉಳಿಸಲು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯನ್ನು ಕಡಿಮೆ ಅಂತರಕ್ಕೆ ಸೀಮಿತಗೊಳಿಸಲಾಗಿದೆ ಕಾಸರಗೋಡಿನ ಈ ಪ್ರದೇಶದಲ್ಲಿ ಬಂದರು ನಿರ್ಮಾಣಕ್ಕಾಗಿ ಮೀನುಗಾರರ ಮನೆ ಶೆಡ್ ಗಳನ್ನು ನ್ಯಾಯಲಯದ ತಡೆಯಾಜ್ಞೆ ಇದ್ದರೂ ದ್ವಂಸಗೊಳಿಸಿ ಚತುಸ್ಪಥ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ ಇದು ಯಾವ ಸೀಮೆಯ ನ್ಯಾಯ? ಈ ದೇಶದಲ್ಲಿ ಪಾಕಿಸ್ತಾನಿಗಳು ಬಾಂಗ್ಲಾ ದೇಶಿಯರು ರೋಹಿಂಗ್ಯಗಳು ರಾಜಾರೋಷವಾಗಿ ಮನೆಮಠ ಕಟ್ಟಿ ಕೊಂಡು ಅಕ್ರಮ ಕಟ್ಟಿ ಕೊಂಡು ಆರಾಮವಾಗಿ ಇದ್ದಾರೆ.
ಈ ದೇಶವಾಸಿಗಳಾಗಿ ತಲೆತಲಾಂತರದಿಂದ ಕಡಲತಡಿಯಲ್ಲಿ ಬದುಕು ಕಟ್ಟಿ ಕೊಂಡಿರುವ ಮೀನುಗಾರರ ಮೇಲೆ ಈ ಪರಿಯ ದೌರ್ಜನ್ಯ ನಿಜಕ್ಕೂ ಖಂಡನೀಯ 600 ಕೋಟಿ ವೆಚ್ಚದ ಈ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯಿಂದ ಫಲಾನುಭವಿಗಳಾಗುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಯೋಜನೆ ಜಾರಿಯಾಗಲೇಬೇಕೇಂಬ ಉದ್ದೇಶದಿಂದ ಶತಾಯಗತಾಯ ಆಕ್ರಮಣಕಾರಿ ಹೆಜ್ಜೆ ಇಡುತ್ತಿದ್ದಾರೆ ಮೀನುಗಾರರ ಹಿತರಕ್ಷಕರು ಎಂದು ಹೇಳಿಕೊಳ್ಳುವ ರಾಜಕಾರಣಿಗಳು ಬಣ್ಣ ಬದಲಿಸುತ್ತಿದ್ದಾರೆ.
ಒಬ್ಬರೇ ಒಬ್ಬರು ಮೀನುಗಾರರ ಬದುಕನ್ನು ಸರ್ವನಾಶ ಮಾಡುವ ಈ ಯೋಜನೆಯನ್ನು ಖಂಡಿಸುವ ಗೋಜಿಗೆ ಹೋಗಿಲ್ಲ ಆದಿತ್ಯವಾರದ ಸಭೆಯ ಮುಖ್ಯ ಸಂದೇಶವೆಂದರೆ ಕೊನೆಗೆ ಬಲ ಪ್ರಯೋಗಿಸಿ ಈ ಯೋಜನೆಯನ್ನು ನೂರಕ್ಕೆ ನೂರು ಜಾರಿಗೊಳಿಸುವುದು ಮಾತ್ರ ಕೊನೆಗೂ ಉಳಿಯುವ ಪ್ರಶ್ನೆಯೆಂದರೆ ಒಂದೇ ಮೀನುಗಾರರು ತಮ್ಮ ಮನೆ ಮಠ ಬದುಕನ್ನು ಬಿಟ್ಟು ಕೊಂಡು ಹೋಗುವುದಾದರೂ ಎಲ್ಲಿಗೆ?
ಉಮಾಕಾಂತ ಖಾರ್ವಿ ಕುಂದಾಪುರ
ಗಂಗೊಳ್ಳಿ ಕುಂದಾಪುರ ಭಟ್ಕಳ ಮಂಗಳೂರು ಹೀಗೆಯೇ ಪ್ರತಿಯೊಂದು ಊರಿನ ನಾಡದೋಣಿಯ ಮುಖಂಡರು ಒಂದು ಕಡೆ ಸೇರಿಕೊಂಡು ಸಭೆಯಲ್ಲಿ ಚರ್ಚಿಸಿ ದೊಡ್ಡಮಟ್ಟದ ಹೋರಾಟದ ಉತ್ತಮ ಯೋಜನೆಯನ್ನು ರೂಪಿಸಿ..ಪ್ರತಿಯೊಂದು ಮೀನುಗಾರರಿಗೆ ವಾಹನ ವ್ಯವಸ್ಥೆ ಮಾಡಿಕೊಂಡು ಅಲ್ಲಿ ಹೋಗಿ ಪ್ರತಿಭಟನೆ ಮಾಡಿದರೆ….ಸರಕಾರ ಬೇಡವೆಂದರು ಶರಣಗುತ್ತಾರೆ……ಆದರೆ ಇದಕ್ಕೊಂದು ವೇದಿಕೆ ಮಾಡಿ ಜವಾಬ್ದಾರಿ ತೆಗೆದುಕೊಳ್ಳುವ ಮುಖಂಡರೇ ಮುಂದು ಬರುತ್ತಿಲ್ಲ ಅದೇ ನಮ್ಮ ದೌರ್ಬಲ್ಯ.