ಮೀನುಗಾರರ ಹಿತಾಸಕ್ತಿಗೆ ಧಕ್ಕೆ ತಂದರೆ ರಾಜ್ಯದಾದ್ಯಂತ ಪ್ರತಿರೋಧ ಎದುರಿಸಬೇಕಾಗುತ್ತದೆ.

ಕಾರವಾರ ಜಿಲ್ಲೆ, ಹೊನ್ನಾವರ ತಾಲ್ಲೂಕು, ಕಾಸರಕೋಡು ಟೋಂಕವಿನಲ್ಲಿ ಖಾಸಾಗಿ ಬಂದರು ನಿರ್ಮಿಸಲು ಸಾಂಪ್ರದಾಯಿಕ ಮೀನುಗಾರರನ್ನು ಒಕ್ಕಲೆಬ್ಬಿಸುತ್ತಿರುವುದು, ಇದೆ ನೆಪದಲ್ಲಿ ಮೀನುಗಾರ ಮಹಿಳೆಯರ ವಿರುದ್ಧ ಪೋಲಿಸರ ನಡೆಸಿದ ಅಮಾನವೀಯ ದೌರ್ಜನ್ಯ ಖಂಡನೀಯವಾಗಿದೆ.

ಕಾರವಾರ ಜಿಲ್ಲೆ, ಹೊನ್ನಾವರ ತಾಲ್ಲೂಕಿನ ಕಾಸರಕೋಡು ಟೊಂಕಾ ಭಾಗದ ಶರಾವತಿ ನದಿ ಅಳಿವೆ ಪ್ರದೇಶದಲ್ಲಿ ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಹೊನ್ನಾವರ ಪ್ರೈವೇಟ್ ಪೋರ್ಟ್ ಲಿಮಿಟೆಡ್ ಕಂಪೆನಿ ವತಿಯಿಂದ ವಾಣಿಜ್ಯ ಬಂದರು ನಿರ್ಮಿಸಲಾಗುತ್ತಿದೆ. ಸರ್ಕಾರ ವಾಣಿಜ್ಯ ಬಂದರು ನಿರ್ಮಾಣಕ್ಕೆ 93 ಎಕರೆ ಜಮೀನು ಮಂಜೂರು ಮಾಡಿದೆ. ಕೆಲ ತಿಂಗಳ ಹಿಂದೆ ವಾಣಿಜ್ಯ ಬಂದರು ಕಾಮಗಾರಿ ಪ್ರಾರಂಭಿಸಿ ಸ್ಥಳೀಯರ ತೀವ್ರ ವಿರೋಧದಿಂದ ಕೈ ಬಿಟ್ಟಿದ್ದ ಕಂಪೆನಿ ಇದೀಗ ಅಧಿಕಾರಿಗಳ ನೇತೃತ್ವದಲ್ಲಿ ಬಂದರು ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಇಂದು ಬೆಳ್ಳಂಬೆಳಿಗ್ಗೆ 500ಕ್ಕೂ ಹೆಚ್ಚು ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ಜೆಸಿಬಿಗಳನ್ನು ತಂದು ಹತ್ತಾರು ಮೀನುಗಾರರ, ಮನೆ ಶೆಡ್ ಗಳನ್ನು ಉರುಳಿಸಲಾಗಿದೆ. ಸುರಿಯುವ ಮಳೆಯನ್ನೂ ಲೆಕ್ಕಿಸದೇ ಕೊರೋನಾದಂತಹ ಸಂದಿಗ್ಧ ಪರಿಸ್ಥಿಯಲ್ಲಿ ಅಮಾನವೀಯವಾಗಿ ವರ್ತಿಸುತ್ತಿದೆ.

ಕಾಸರಕೋಡು, ಮಲ್ಲುಕುರ್ವಾ ಪ್ರದೇಶದಲ್ಲಿ ಸುಮಾರು 600ಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆಯನ್ನು ನಂಬಿ ಬದುಕುತ್ತಿವೆ. ಸರ್ಕಾರ ಸ್ಥಳೀಯರಿಗೆ ಸ್ಪಷ್ಟ ಮಾಹಿತಿ ನೀಡದೆ ಕಾಮಗಾರಿ ನಡೆಸುತ್ತಿದೆ. ಇಂದು ರಸ್ತೆ ಕಾಮಗಾರಿ ಕೈಗೊಂಡು ಮುಂದಿನ ದಿನಗಳಲ್ಲಿ ಅಭಿವೃದ್ಧಿ ನೆಪದಲ್ಲಿ ಮೀನುಗಾರರನ್ನು ಸಂಪೂರ್ಣ ಒಕ್ಕಲೆಬ್ಬಿಸುವ ಹುನ್ನಾರ ನಡೆಸಲಾಗಿದೆ ಎಂಬ ಆತಂಕ ಎದುರಾಗಿದೆ.

ಸರ್ಕಾರವು ಈ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಲಿ, ಮೀನುಗಾರರಿಗೆ ಪರ್ಯಾಯ ಕಲ್ಪಿಸದೆ ಕಾಮಗಾರಿ ಮುಂದುವರಿಸುವುದು ಬೇಡ. ಸರ್ಕಾರವು ಮೀನುಗಾರರ ಹಿತಾಸಕ್ತಿಗೆ ಧಕ್ಕೆ ತಂದರೆ ರಾಜ್ಯದಾದ್ಯಂತ ಪ್ರತಿರೋಧ ಎದುರಿಸಬೇಕಾಗುತ್ತದೆ.

ಸೂರ್ಯಪ್ರಕಾಶ ಕೋಲಿ
ಅಧ್ಯಕ್ಷ: ಸಾಂಪ್ರದಾಯಿಕ ಮೀನುಗಾರರ ಒಕ್ಕೂಟ
ಗ್ಲೋಬಲ್ ಸಿಟಿ, ಬೆಂಗಳೂರು.

One thought on “ಮೀನುಗಾರರ ಹಿತಾಸಕ್ತಿಗೆ ಧಕ್ಕೆ ತಂದರೆ ರಾಜ್ಯದಾದ್ಯಂತ ಪ್ರತಿರೋಧ ಎದುರಿಸಬೇಕಾಗುತ್ತದೆ.

  1. ದರಿದ್ರ ಕಂತ್ರಿ ರಾಜಕಾರಣಿಗಳು ಮತ್ತು ಹೃದಯಹೀನ ಅಧಿಕಾರಿಗಳು ಸೇರಿ ಬಡ ಮೀನುಗಾರರ ಮನೆ ಗಿಡಮರಗಳನ್ನು ಮೀನು ಬಲೆಗಳನ್ನು ನಾಶ ಮಾಡಿದ್ದಾರೆ ಮೀನುಗಾರರನ್ನು ಸಾಮೂಹಿಕವಾಗಿ ಒಕ್ಕಲೆಬ್ಬಿಸುವ ಕುಹಕ ಹುನ್ನಾರ ನಡೆಯುತ್ತಿದೆ ಮೀನುಗಾರರ ಸಮಾಧಿಯ ಮೇಲೆ ಅರಮನೆ ಕಟ್ಟಲು ಹೊರಟಿರುವ ಬಂಡವಾಳ ಶಾಹಿಗಳ ಗುಲಾಮರಾಗಿರುವ ನಮ್ಮ ಜನಪ್ರತಿನಿಧಿಗಳು ಹೊಟ್ಟೆಗೆ ತಿನ್ನುವುದು ಅನ್ನವಲ್ಲ ಹೇಸಿಗೆ ಅವರ ಜನ್ಮ ಕ್ಕೆ ಧಿಕ್ಕಾರವಿರಲಿ ಸೂರ್ಯ ಪ್ರಕಾಶರವರ ಮಾತುಗಳು ಸಮಯೋಚಿತವಾಗಿದೆ👌👌👌👍👍👍🙏🙏🙏🐠🐡🐠🐟🐠🐡

Leave a Reply

Your email address will not be published. Required fields are marked *