ಹೊನ್ನಾವರದ ಟೊಂಕದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣವನ್ನು ಬಲವಂತದಿಂದ ಮಾಡುತ್ತಿರುವ ಕ್ರಮಕ್ಕೆ ಭಟ್ಕಳ ಸಮಾಜದ ಪ್ರಮುಖ ಹಾಗೂ ಮೀನುಗಾರರ ಮುಖಂಡ ವಸಂತ ಖಾವಿ೯ ತೀವ್ರವಾಗಿ ಖಂಡಿಸಿದ್ದು ಇದೊಂದು ಕರಾವಳಿಯ ಮೀನುಗಾರರ ಮೇಲೆ ಮಾಡುತ್ತಿರುವ ರಾಜ್ಯ ಸರ್ಕಾರದ ದಬ್ಬಾಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಕಳೆದ ವರ್ಷ ಮತ್ಸ್ಯಕ್ಷಾಮ ದ ಜೊತೆಯಲ್ಲಿ ಲಾಕ್ ಡೌನ್ ಜಾರಿಯಾಗಿ ಆದಾಯವಿಲ್ಲದೆ ಬಹಳ ತೊಂದರೆಯಾಗಿತ್ತು ಈ ವರ್ಷವೂ ಮತ್ಸ್ಯಕ್ಷಾಮ ದ ಜೊತೆಗೆ ಮತ್ತೆ ಲಾಕ್ ಡೌನ್ ಜಾರಿಯಾಗಿ ಮೀನುಗಾರ ಸಮುದಾಯ ಆದಾಯ ಮೂಲ ವಿಲ್ಲದೆ ತೀವ್ರ ಸಂಕಷ್ಟದಲ್ಲಿದ್ದಾರೆ ಇಂತಹ ಕಾಲದಲ್ಲಿ ಸರ್ಕಾರ ಖಾಸಗಿ ಬಂದರು ನಿರ್ಮಾಣದ ಕಾಮಗಾರಿಗೆ ಅವಕಾಶ ಮಾಡಿಕೊಟ್ಟಿರುವುದರ ಮೂಲಕ ಮೀನುಗಾರರ ಮೇಲೆ ಬರೆ ಎಳೆದಿದೆ. ವಾಣಿಜ್ಯ ಬಂದರು ಕಾಮಗಾರಿಯನ್ನು ಪೊಲೀಸ್ ಬಲದೊಂದಿಗೆ ಮುಂದುವರಿಸುವ ಮೂಲಕ ಮೀನುಗಾರರನ್ನು ದಿಕ್ಕಿಲ್ಲದಂತೆ ಮಾಡಲಾಗುತ್ತದೆ ಎಂದು ದೂರಿದ್ದಾರೆ.
ನೂರು ಕೋಟಿ ಮೊತ್ತದ ರಸ್ತೆಯನ್ನು ಮಾಡುತ್ತಿರುವ ಸರ್ಕಾರ ಮೀನುಗಾರರ ಶೆಡ್ ಮನೆ ಮರ-ಗಿಡ ನಾಶ ಮಾಡುತ್ತಿದ್ದು ಮೀನುಗಾರರು ಅಸಹಾಯಕರಾಗಿದ್ದಾರೆ ಸರಕಾರದೊಂದಿಗೆ ಖಾಸಗಿಯವರಿಗೆ ಸಹಕಾರ ನೀಡುತ್ತಿದ್ದು ಮೀನುಗಾರರ ಆಕ್ರಂದನವನ್ನು ಕೇಳುವವರೇ ಇಲ್ಲವಾಗಿದೆ. ಪೊಲೀಸರ ಮೂಲಕ ಮೀನುಗಾರರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದನ್ನು ಇಡೀ ಮೀನುಗಾರ ಸಮುದಾಯ ಖಂಡಿಸುತ್ತದೆ.
ಸರಕಾರವೇ ಮೀನುಗಾರರ ಮೇಲೆ ದಬ್ಬಾಳಿಕೆ ಮಾಡಿದರೆ ಮೀನುಗಾರರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.
ಕೇವಲ ಬಂದರು ಸಂಪರ್ಕಕ್ಕಾಗಿ ನೂರು ಕೋಟಿ ಮೊತ್ತದ ರಸ್ತೆಯನ್ನು ಮಾಡುತ್ತಿರುವ ಸರ್ಕಾರ ತಕ್ಷಣ ಕಾಮಗಾರಿ ನಿಲ್ಲಿಸಬೇಕು. ಖಾಸಗಿ ಬಂದರು ನಿರ್ಮಿಸಬಾರದು ಎಂದು ನ್ಯಾಯಾಲಯದಲ್ಲಿ ದಾವೆ ಸಲ್ಲಿಸಲಾಗಿದ್ದು ವಿಚಾರಣೆ ಹಂತದಲ್ಲಿರುವಾಗಲೇ ಮತ್ತೆ ಕಾಮಗಾರಿಗೆ ಮುಂದಾಗಿರುವುದು ಸರಿಯಲ್ಲ ಮೀನುಗಾರರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಸರ್ಕಾರ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
www.kharvionline.com