ಮೀನುಗಾರರ ಮೇಲಿನ ದೌರ್ಜನ್ಯ ಖಂಡನೀಯ: ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರು

ಗಂಗೊಳ್ಳಿ : ಇಂದು ನಡೆದ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಭೆಯಲ್ಲಿ ಹೊನ್ನಾವರ ಕಾಸರಗೋಡಿನಲ್ಲಿ ಬಡ ಮೀನುಗಾರರ ಕುಟುಂಬದ ಮೇಲಿನ ಸರಕಾರದ ದೌರ್ಜನ್ಯ ವನ್ನು ಸಾಮೂಹಿಕವಾಗಿ ಖಂಡಿಸಲಾಯಿತು.

ಮಳೆಗಾಲದ ಋತುವಿನಲ್ಲಿ ಗಾಳಿಮಳೆ ಎನ್ನದೆ ಮೀನುಗಾರರು ಜೀವನ ಪೂರ್ತಿ ಸಮುದ್ರ ತೀರದಲ್ಲಿ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಸಣ್ಣಪುಟ್ಟ ಮನೆ ಹಾಗೂ ಗುಡಿಸಲಿನಲ್ಲಿ ವಾಸಿಸುತ್ತಿರುವವರ ಮೇಲೆ ಸರಕಾರದ ದೌರ್ಜನ್ಯ ನಿಜಕ್ಕೂ ಖಂಡನೀಯ

ಕರ್ನಾಟಕ ರಾಜ್ಯದಲ್ಲಿ ಎರಡು ವಾಣಿಜ್ಯ ಬಂದರು ಇರುವಾಗ (ಕಾರವಾರ, ಮತ್ತು ಪಣಂಬೂರು ಮಂಗಳೂರು) ಪರ್ಯಾಯ ಬಂದರಿನ ಅವಶ್ಯಕತೆ ಇದೆಯಾ, ದೊಡ್ಡ ದೊಡ್ಡ ಹಡಗಿನಲ್ಲಿ ಸರಕು ಸಾಗಾಣಿಕೆ ಸಮಯದಲ್ಲಿ ವಾಣಿಜ್ಯ ಬಂದರಿಗೆ ಬರುವಾಗ ಸಣ್ಣ ಬೋಟ್ ನಲ್ಲಿ ಹಾಗೂ ಸಣ್ಣಸಣ್ಣ ದೋಣಿಯಲ್ಲಿ ಮೀನುಗಾರಿಕೆ ನೆಡೆಸಲು ತುಂಬಾ ಕಷ್ಟವಾಗುತ್ತದೆ. ಉದಾಹರಣೆಗೆ ಎರಡು ವರ್ಷದ ಹಿಂದೆ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ 7 ಮೀನುಗಾರರ ಸಹಿತ ಕಣ್ಮರೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಅವಘಡದ ವಿಷಯ ನಮ್ಮ ಕಣ್ಣಂಚಿನಲ್ಲಿ ಇದೆ. ಇಂತಹ ಸಂದರ್ಭದಲ್ಲಿ ನಮಗೆ ವಾಣಿಜ್ಯ ಬಂದರು ಮಾಡುವ ಅಗತ್ಯ ಇದೆಯೇ.

ಬಡಮೀನುಗಾರರ ಮೇಲೆ ಸರ್ಕಾರದ ದಬ್ಬಾಳಿಕೆ ಸರಿಯಾದ ಕ್ರಮ ಅಲ್ಲ, ಮಹಿಳೆಯರ ಆಕ್ರಂದನ, ಮುಗ್ದ ಮಕ್ಕಳ ಆಳಲು, ಮನೆಗಳ ಮೇಲೆ ಜೆಸಿಬಿ ಆರ್ಭಟ ಗಿಡಮರಗಳ ದ್ವಂಸ ಮೀನುಗಾರರ ಮೇಲೆ ಅವಾಚ್ಯ ಪದ ಪ್ರಯೋಗ ನಿಜಕ್ಕೂ ಖಂಡನೀಯ . ಮಳೆಗಾಲದ ಸಮಯದಲ್ಲಿ ಮನೆ ತೆಗೆಸಿ ಬೀದಿ ಬೀದಿಗಳಲ್ಲಿ ವಾಸಿಸುವ ಪರಿಸ್ಥಿತಿಯಲ್ಲಿ ಇರಬೇಕು, ಈಗಾಗಲೇ ಮೀನುಗಾರರು ಮತ್ಸ್ಯಕ್ಷಾಮ ದಿಂದ ನಿತ್ಯ ಜೀವನಕ್ಕೆ ಒಪ್ಪತ್ತಿನ ಊಟಕ್ಕೆ ಗತಿ ಇಲ್ಲದ ಸಮಯದಲ್ಲಿ ಸರ್ಕಾರದ ಈ ಯೋಜನೆ ಜಾರಿಗೆ ತರುವ ಪ್ರಯತ್ನ ಸ್ಥಗಿತಗೊಳಿಸಬೇಕಾಗಿ ನಾವು ಸರ್ಕಾರ ಕ್ಕೆ ಆಗ್ರಹಿಸುತ್ತೇವೆ. ಈ ಸಮಯದಲ್ಲಿ ಎಲ್ಲರೂ ಒಂದಾಗಿ ಹೋರಾಟ ಮಾಡಬೇಕಾಗಿದೆ ಇಂದು ಕಾಸರಗೋಡು ಮೀನುಗಾರ ಬಂಧುಗಳಿಗೆ ಬಂದ ಪರಿಸ್ಥಿತಿ ನಾಳೆ ನಮಗೂ ಬರಬಹುದು.

ಯಾವುದೇ ಮುನ್ಸೂಚನೆ ನೀಡದೇ ಬದುಕಿಗೆ ಆಧಾರವಾಗಿದ್ದ ಶೆಡ್ ಮನೆಗಳನ್ನು ಉರುಳಿಸುತ್ತಿದ್ದಾರೆ. ಇಷ್ಟೊಂದು ಅನ್ಯಾಯವಾಗುತ್ತಿದ್ದರು ಸರಕಾರ ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಕೂಡಲೇ ಈ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಮೀನುಗಾರರು ಆಗ್ರಹಿಸಿದ್ದಾರೆ.

ವರದಿ: ಕೆ. ನಾಗೇಶ್ ಖಾರ್ವಿ ಕಂಚುಗೋಡು

Leave a Reply

Your email address will not be published. Required fields are marked *