ಸರಕಾರಿ ಕೃಪಾಪೋಷಿತ ಬಂಡವಾಳಶಾಹಿಗಳ ಖಾಸಗಿ ಸಂಸ್ಥೆಗಳ ಬಗ್ಗೆ ಅವಲೋಕಿಸಿದಾಗ ಕಾರ್ಲ್ ಮಾರ್ಕ್ಸ್ ಹೇಳಿದ ಮಾತು ನೆನಪಿಗೆ ಬರುತ್ತದೆ ಲಾಭದ ಶೇಖರಣೆ ,ಕ್ರೋಢೀಕರಣ ಹೆಚ್ಚಾದಂತೆಲ್ಲಾ ,ಖಾಸಗಿ ಬಂಡವಾಳದ ಉದ್ದಟತನ ಜಾಸ್ತಿಯಾಗುತ್ತದೆ. ಶೇಕಡಾ 10ರಷ್ಟು ಬಂಡವಾಳ ಎಲ್ಲ ಕಡೆ ಹಬ್ಬಿಕೊಳ್ಳುತ್ತದೆ ಅದು ಶೇಕಡಾ 20 ರಷ್ಟು ಹೆಚ್ಚಾದಾಗ ಬಹಳ ಚುರುಕಾಗಿ ಕೆಲಸ ಮಾಡುತ್ತದೆ ಅದು ಶೇಕಡಾ 60 ರಷ್ಟು ಹೆಚ್ಚಾದಾಗ ನಿರ್ಭಯವಾಗಿ ವರ್ತಿಸಲಾರಂಭಿಸುತ್ತದೆ ಅದು ಶೇಕಡಾ 100ರಷ್ಟಾದರೆ ಸಾಕು ಎಲ್ಲಾ ಕಾನೂನು ಕಟ್ಟಲೆಗಳನ್ನು ಮೆಟ್ಟಿ ನಿಲ್ಲುತ್ತದೆ ಎಲ್ಲರನ್ನು ಎಲ್ಲವನ್ನು ಭಸ್ಮ ಮಾಡಿ ಬಿಡುತ್ತದೆ ಅದು ಮೀರದ ದುಷ್ಕ್ರತ್ಯಗಳಿರುವುದಿಲ್ಲ ಇದಕ್ಕೆ ಜ್ವಲಂತ ಸಾಕ್ಷಿ ಹೊನ್ನಾವರ ಖಾಸಗಿ ಬಂದರು ನಿರ್ಮಾಣ ಕಾಮಗಾರಿ
ತನ್ನನ್ನು ಪ್ರಶ್ನಿಸಿದವರನ್ನು ಹೊಸಕಿ ಹಾಕುತ್ತಾ ಕೊನೆಗೆ ತನ್ನನ್ನು ಬೆಳೆಸಿದ ಸರಕಾರಿ ವ್ಯವಸ್ಥೆಯನ್ನೇ ಆಹುತಿ ತೆಗೆದುಕೊಳ್ಳುತ್ತದೆ ಸರ್ಕಾರ ನಡೆಸುತ್ತಿರುವ ಶಿಖಾಮಣಿಗಳಿಗೆ ಅದೆಲ್ಲ ಅರ್ಥ ವಾಗುವುದಿಲ್ಲ. ಹೇಗೆ ಸರಕಾರಿ ಅರಣ್ಯ ಕಟಾವು ಗುತ್ತಿಗೆ ಪಡೆದ ಗುತ್ತಿಗೆದಾರ ಕಟಾವಿಗೆ ನಿಗದಿ ಪಡಿಸಿದ ಅರಣ್ಯ ಮಾತ್ರ ವಲ್ಲ ಅದಕ್ಕೆ ಹೊಂದಿಕೊಂಡಿರುವ ಅರಣ್ಯ ದ ಮರಮಟ್ಟುಗಳನ್ನು ಬೋಳಿಸುತ್ತಾ ಹೋಗುತ್ತಾನೆಯೋ ಹಾಗೆ ಕಾಸರಗೋಡು ಖಾಸಗಿ ಬಂದರು ನಿರ್ಮಾಣ ಸಂಸ್ಥೆ ಸಮುದ್ರ ಮಾತ್ರವಲ್ಲ ಅದರ ಸುತ್ತ ಮುತ್ತ ಪ್ರದೇಶ ಕೂಡಾ ತನ್ನದೇ ಎಂಬಂತೆ ಅಧಿಕಾರ ಚಲಾವಣೆ ಮಾಡುತ್ತಿದೆ.
ಬ್ರಿಟಿಷ್ ಆಳ್ವಿಕೆಯಲ್ಲಿ ಸಾಮ್ರಾಜ್ಯ ಶಾಹಿ ಹಿಡಿತದಲ್ಲಿದ್ದ ಭಾರತವು ಸ್ವಾತಂತ್ರ್ಯ ನಂತರ ನವ ವಸಾಹತುಶಾಹಿ ವ್ಯವಸ್ಥೆ ಯಲ್ಲಿ ಬಹುಮಟ್ಟಿಗೆ ಸಿಕ್ಕಿ ಹಾಕಿಕೊಂಡಿದೆ ಅಂದರೆ ಹಿಂದೆ ನಡೆಯುತ್ತಿದ್ದ ನೇರ ಶೋಷಣೆ ಇದೀಗ ಹೊಸ ರೂಪ ಪಡೆದುಕೊಂಡು ಖಾಸಗಿ ಸಂಸ್ಥೆ ಗಳ ಮೂಲಕ ನಡೆಯುತ್ತಿದೆ ಬೇಡ ಬೇಡವೆಂದರೂ ಶನಿವಾರ ಕಾಸರಗೋಡಿನ ಬಡ ಮೀನುಗಾರರ ಮೇಲೆ ನಮ್ಮ ಆಡಳಿತ ವ್ಯವಸ್ಥೆ ನಡೆಸಿದ ಅಮಾನವೀಯ ದೌರ್ಜನ್ಯ ನೆನಪಾಗಿ ಕಣ್ಣಾಲಿಗಳು ತೇವಗೊಳ್ಳುತ್ತದೆ ಮಹಿಳೆಯರ ಆಕ್ರಂದನ ಮುಗ್ದ ಮಕ್ಕಳ ಆಳಲು ಮನೆಗಳ ಮೇಲೆ ಜೆಸಿಬಿ ಆರ್ಭಟ ಗಿಡಮರಗಳ ದ್ವಂಸ ಮೀನುಗಾರರ ಮೇಲೆ ಅವಾಚ್ಯ ಪದ ಪ್ರಯೋಗ ನೆನಪಿಸಿಕೊಂಡರೆ ಬೇಸರವಾಗುತ್ತದೆ.
ಉಮಾಕಾಂತ ಖಾರ್ವಿ ಕುಂದಾಪುರ
ಈ ಸಂದರ್ಭದಲ್ಲಿ, ಬಂಡವಾಳಶಾಹಿಗಳು ಮತ್ತು ಸಮಾಜವಾದಿ ಸರ್ಕಾರಗಳು ಎರಡೂ ಕೈಜೋಡಿಸಿವೆ. ಪ್ರಸ್ತುತ ಸರ್ಕಾರ ಯಾರೆಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಬಂಡವಾಳಶಾಹಿಗಳು ಯಾರೆಂದು ನಿಮಗೆ ತಿಳಿದಿದೆಯೇ?
ಬಂದರನ್ನು ನಿರ್ಮಿಸಲು ಹೊರಟಿರುವ ಅ ಕಂಪನಿಯ ಹೆಸರು ಹೊನ್ನಾವರ್ ಪೋರ್ಟ್ ಪ್ರೈವೇಟ್ ಲಿಮಿಟೆಡ್. ವಿಚಿತ್ರವೆಂದರೆ ಇದು ಆಂಧ್ರಪ್ರದೇಶ ಮೂಲದ ಕಂಪನಿಯಾಗಿದ್ದು ಅದು 2010 ರಲ್ಲಿಯೇ ರೂಪುಗೊಂಡಿತು. ಅಂದರೆ ಪ್ರಸ್ತುತ ಸರ್ಕಾರ ಹಿಂದಿನ ಸರ್ಕಾರದ ಯೋಜನೆಗಳನ್ನು ಮುಂದಿಡುತ್ತಿದೆ.
ಈ ಕಂಪನಿಯ ನಿರ್ದೇಶಕರು
ಶಿವ ಶಂಕರ್ ರೆಡ್ಡಿ ಗಂಡಲೂರು ವ್ಯವಸ್ಥಾಪಕ ನಿರ್ದೇಶಕ
ಕೃಷ್ಣಮೂರ್ತಿ ಅರುಣಾಚಲಂ ನಿರ್ದೇಶಕ
ಖಜಾ ಮಾಸಿಹುದ್ದೀನ್ ಖಾನ್ ನಿರ್ದೇಶಕ
ಗಂಡಲೂರು ವೀರ ಶೇಖರ್ ರೆಡ್ಡಿ ನಿರ್ದೇಶಕ
ಇವರೆಲ್ಲ ಮೂಲತಃ ಆಂಧ್ರಪ್ರದೇಶ ಮತ್ತು ತಮಿಳುನಾಡಿನವರು, ಇಲ್ಲಿನ ಬಡ ಸ್ಥಳೀಯ ಜನರಿಗೆ ಏನಾಗಬಹುದು ಎಂಬ ಬಗ್ಗೆ ಅವರು ಯಾಕೆ ತಲೆಕೆಡಿಸಿಕೊಳ್ಳುತ್ತಾರೆ?
ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ, ನಾರ್ತ್ ಕೆನರಾ ಸೀಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಮತ್ತೊಂದು ಕಂಪನಿಯ ಖಜಾ ಮಾಸಿಹುದ್ದೀನ್ ಖಾನ್ ನಿರ್ದೇಶಕರು.
ಅಭಿವೃದ್ಧಿ ಹೆಸರಲ್ಲಿ ಯಾರು ತ್ಯಾಗ ಮಾಡಬೇಕು ಮತ್ತು ಯಾರು ಬೆಲೆ ತೆತ್ತಬೇಕು …. ಅಭಿವೃದ್ಧಿ ಅಂತಹ ವಿಷಯಗಳು ವಾಟ್ಸಾಪ್ ಫಾರ್ವರ್ಡ್ಗಳಲ್ಲಿ ಮಾತ್ರ ನೋಡಲು ಸುಂದರವಾಗಿ ಕಾಣುತ್ತವೆ ಆದರೆ ಅದು ನಮ್ಮ ಮನೆ ಬಾಗಿಲಿಗೆ ಬಂದಾಗ … ತ್ಯಾಗ ಮಾಡಬೇಕಾಗಿರುವುದು ಒಬ್ಬ ಬಡವ ಮತ್ತು ಅದರ ಬೆಲೆ ನಮ್ಮ ಜೀವನಾದರ ಎಂದು ನಾವು ಅರಿವಾಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಕಾರವಾರದಲ್ಲಿ ಅದ ವಿಷಯ ಅಲ್ಲಿನ ಸ್ಥಳಿಯ ಜನ ಇಂದಿಗೂ ಸಹ ಬಳಲುತ್ತಿದ್ದಾರೆ. ಅಭಿವೃದ್ಧಿಯಾಗಿದು ಹೊರ ರಾಜ್ಯದವರು.