ಸಮಾಜದ ಮೇಲಿನ ದೌರ್ಜನ್ಯ ಖಂಡನೀಯ: ಖಾರ್ವಿ ಆನ್ಲೈನ್

ಒಂದು ಸಮಾಜ ಕಟ್ಟುವ ಮೂಲ ಉದ್ದೇಶ ಅದರಡಿಯಲ್ಲಿರುವ ಜನರ ಕಷ್ಟಗಳನ್ನು ಆದಷ್ಟು ಪರಿಹರಿಸುವ ಆಲೋಚನೆಯಾಗಿರಬೇಕು. ಆದರೆ ನಮ್ಮ ಜನರು ಬೇಡದ ಚಿಂತನೆ ಮಾಡಿ, ಜಾತಿ ರಾಜಕೀಯ, ಧರ್ಮದ ಹೆಸರಿನಲ್ಲಿ ಕಿತ್ತಾಡುತ್ತಾ ಸಮಾಜದ ಅಸ್ತಿತ್ವಕ್ಕೆ ದಕ್ಕೆ ಉಂಟು ಮಾಡುವ ಮಟ್ಟಕ್ಕೆ ತಂದಿದ್ದಾರೆ.

ಪ್ರತಿಯೊಬ್ಬರು ಸಮಾಜದ ಹೆಸರಿನಲ್ಲಿ ಅವರವರ ಸ್ವಾರ್ಥಸಾಧನೆಯ ಕಾರ್ಯದಲ್ಲಿ ತೊಡಗಿದ್ದಾರೆ. ಇದು ನನಗೆ ಸಂಬಂದ ಪಡದೇ ಇರುವ ವಿಷಯ ಇದಕ್ಕಾಗಿ ನಾನೇಕೆ ದನಿಯೆತ್ತಬೇಕು?’ ಎಂಬ ಗುಣ ನಮ್ಮಲ್ಲಿದ್ದು ಮೊದಲು ಅದನ್ನು ಕೈ ಬಿಡಬೇಕು. ಸಮಾಜದ ಏಳಿಗೆಯತ್ತ ಪ್ರತಿಯೊಬ್ಬರೂ ಶ್ರಮಿಸಬೇಕು. ಇನ್ನು ಮುಂದಾದರೂ ಖಾರ್ವಿ ಫಸ್ಟ್ ಎಂಬ ಧೋರಣೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ.

ಬಡತನ ಮತ್ತು ರಾಜಕೀಯ ಪ್ರಾತಿನಿಧ್ಯ ವಿಲ್ಲದ ಸಮಾಜವನ್ನು ಆಡಳಿತ ವ್ಯವಸ್ಥೆ ತುಳಿಯುವುದು ಸಾಮಾನ್ಯ ಸಂಗತಿ ಅದಕ್ಕೆ ನಮ್ಮ ಖಾರ್ವಿ ಸಮಾಜ ಉತ್ತಮ ಉದಾಹರಣೆ ನೂರಾರು ವರ್ಷಗಳಿಂದ ನಾವು ಬಲಾಢ್ಯರಿಂದ ರಾಜಕೀಯ ಪೃಭತಿಗಳಿಂದ ತುಳಿಸಿಕೊಂಡೇ ಬದುಕುತ್ತಿದ್ದೇವೆ ದಿನಂಪ್ರತಿ ನಾವು ಸಾಯುತ್ತಿದ್ದೇವೆ ಹೊನ್ನಾವರ ಕಾಸರಗೋಡು ನಮ್ಮ ಸಮಾಜದ ಮೀನುಗಾರರ ಮೇಲೆ ಆಡಳಿತ ವ್ಯವಸ್ಥೆ ನಡೆಸಿದ ದೌರ್ಜನ್ಯ ಪ್ರಜಾಪ್ರಭುತ್ವ ವ್ಯವಸ್ಥೆಯ ಕ್ರೂರ ಅಣಕವಾಗಿದ್ದು ಪ್ರಜ್ಞಾವಂತ ನಾಗರಿಕರೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕು

ಇದು ನಮ್ಮ ಸಮಾಜವನ್ನು ಮೂರನೇ ದರ್ಜೆ ಪ್ರಜೆಗಳನ್ನಾಗಿ ಆಡಳಿತ ವ್ಯವಸ್ಥೆ ಪರಿಭಾವಿಸುವ ಭಯಾನಕ ಗುಲಾಮಗಿರಿಯಾಗಿದ್ದು ಬಡ ಮೀನುಗಾರರ ಮೇಲೆ ನಡೆದ ಅಮಾನುಷ ದಬ್ಬಾಳಿಕೆಯನ್ನು ನಾವು ತೀವ್ರ ವಾಗಿ ಖಂಡಿಸುತ್ತೇವೆ ಬಂಡವಾಳಶಾಹಿ ಪಾಳೇಗಾರಿ ಹಿತಾಸಕ್ತಿ ಗಳಿಗೆ ಅನುಗುಣವಾಗಿ ವರ್ತಿಸುತ್ತಿರುವ ಆಡಳಿತ ವ್ಯವಸ್ಥೆಯಿಂದ ನಮ್ಮ ಸಮಾಜದ ಮೇಲೆ ನಡೆಯುತ್ತಿರುವ ಅನ್ಯಾಯಕ್ಕೆ ಕೊನೆಗಾಣಿಸಬೇಕಾದರೆ ನಮ್ಮ ಸಮಾಜ ಸಂಘಟಿತರಾಗಿ ಸೆಟೆದು ನಿಂತು ಹೋರಾಟ ಮಾಡಬೇಕಾಗಿದೆ

ಸಮಾಜದ ಮೇಲೆ ನಡೆಯುವ ಅಕ್ರಮಗಳ ವಿರುದ್ದ ದನಿ ಎತ್ತಿ ಹೋರಾಡಬೇಕು. ಅತ್ಯಂತ ಅಗತ್ಯವಾಗಿ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಜಾಗ್ರತೆಯನ್ನು ಮೂಡಿಸಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಕೊಡುಗೆಗಳನ್ನು ಸಮಾಜಕ್ಕೆ ನೀಡುವುದು ಅತ್ಯಂತ ಅವಶ್ಯಕತೆಯಾಗಿದೆ.

ಸುಧಾಕರ್ ಖಾರ್ವಿ
www.kharvionline.com

6 thoughts on “ಸಮಾಜದ ಮೇಲಿನ ದೌರ್ಜನ್ಯ ಖಂಡನೀಯ: ಖಾರ್ವಿ ಆನ್ಲೈನ್

  1. ಸಮಾಜದ ಮೇಲೆ ದೌರ್ಜನ್ಯ ಕುರಿತ ಲೇಖನ ಪ್ರಸ್ತುತ ನಮ್ಮ ಸಮಾಜದ ವಿದ್ಯಮಾನಗಳ ಸ್ಪಷ್ಟ ಚಿತ್ರಣವಾಗಿರುತ್ತದೆ ಇಂದು ನಮ್ಮ ಸಮಾಜದ ಪ್ರತಿಯೊಬ್ಬರೂ ಸ್ವಾರ್ಥ ಬಿಟ್ಟು ಸಮಾಜದ ಅಭಿವೃದ್ಧಿ ಗಾಗಿ ಕಾರ್ಯೋನ್ಮುಖರಾಗುವ ಸಾಂಧರ್ಬಿಕ ಸನ್ನಿವೇಶ ಒದಗಿ ಬಂದಿದೆ ಅರ್ಥ ಪೂರ್ಣ ಲೇಖನ ಪ್ರಬುಧ್ಧ ಚಿಂತನೆ

  2. ಹೊನ್ನಾವರ ದಲ್ಲಿ ನಡೆದ ಘಟನೆ ನಿಜಕ್ಕೂ ಖಂಡನೀಯ, ತಪ್ಪು, ಸರಿ, ಅದೇನೆ ಇರಲಿ ಬಹುಷ ಮಳೆಗಾಲ ಹಾಗೂ ಕೊವೀಡ್ ಸಂಧರ್ಬದಲ್ಲಿ ಇಂತಹ ನಡೆ ಬೇಡವಾಗಿತ್ತು, ಅಲ್ಲಿನ ಸಂಸದರು ಶಾಸಕರು ಯಾಕೆ ಸುಮ್ಮನಿದ್ದರೆ ತಿಳಿಯುತ್ತಿಲ್ಲಾ.
    ನಮ್ಮ ಸಮಾಜ ದಲ್ಲಿ ರಾಜಕೀಯ ಯಾರದರೂ ಮುಂದುವರೆಯುತ್ತಿದ್ದರೆ ಸಮಾಜದ ನಾಯಕರೇ ಕಾಲು ಎಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಇಂತಹ ಸಂದರ್ಭದಲ್ಲಿ ನಾಯಕರ ಮೌನವೇಕೆ..?
    ರಾಷ್ಟ್ರ ಮಟ್ಟದಲ್ಲಿ ನಮ್ಮ ಸಂಘ ಇದೆ ಇದು ಬರೀ ಶ್ರೀಮಂತರ ಮದುವೆಗಾಗಿ ಭವನ ನಿರ್ಮಾಣಕ್ಕೆ ಮಾತ್ರ ಸಿಮಿತಾವಾಯಿತೆ?
    ಅಥವ ಸಂಸ್ಥೆಯ ಹೆಸರು ಹೇಳಿ ತಮಗೆ ಬೇಕಾದವರಿಗಾಗಿ ಸಿಟು ಕೊಡಿ ಎಂದು ರಾಜಕೀಯ ಪಕ್ಷದ ನಾಯಕರ ಮನೆಗೆ ಹೋಗಿ ರಾಜಕೀಯ ಮಾಡಲು ಮಾತ್ರ ಸಿಮಿತವಾಯಿತೆ.??
    ನಮ್ಮ ಸಮಾಜ ದ ನಾಯಕರು ಯಾಕೆ ಮೌನ ವಯಿಸಿದ್ದಾರೆ..? ಅವರೇ ಉತ್ತರಿಸಬೇಕಿದೆ

    1. ಸಮಾಜ ಅಂತ ಬಂದಾಗ ರಾಜಕೀಯ ಬದಿಗಿಡಬೇಕು, ರಾಷ್ಟ್ರಿಯ ಪಕ್ಷ ಹಾಗೂ ಆಡಳಿತ ದಲ್ಲಿರುವ ಪಕ್ಷದಲ್ಲಿ ಗುರಿತಿಸಿಕೊಂಡಿದ್ದರು ಕೂಡ, ಇಂದು ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ತಿಳಿದಾಗ ಗಟ್ಟಿ ದನಿಯಲ್ಲಿ ಅದನ್ನು ಖಂಡಿಸಿ ಜನ ಸಾಮಾನ್ಯರ ಪರ ನಿಂತಿರುವ ಸುನೀಲ್ ಖಾರ್ವಿ ಯವರಿಗೆ ದನ್ಯವಾದಗಳು, ನಿಮ್ಮೊಂದಿಗೆ ಸಮಾಜ ಎಂದಿಗೂ ಇದೆ. ನಿಮ್ಮಂತ ಯುವ ನಾಯಕರ ಅಗತ್ಯತೆ ನಮಗೆ ಇದೆ.

  3. ಕುಂದಾಪುರ ಖಾರ್ವಿ ಸಮಾಜದ ಯುವರಾಜಕಾರಣಿ ಸುನಿಲ್ ಖಾರ್ವಿ ಯವರ ಮಾತುಗಳು ಮಾರ್ಮಿಕ ವಾಗಿದ್ದು ಸಂಬಂಧಪಟ್ಟವರು ಅರ್ಥ ಮಾಡಿಕೊಳ್ಳಬೇಕು ರಾಜಕೀಯ ಪಕ್ಷ ವೊಂದರ ಸಕ್ರಿಯ ಕಾರ್ಯ ಕರ್ತನಾಗಿ ಸಮಾಜಕ್ಕೆ ಅನ್ಯಾಯ ವಾದಾಗ ಸಿಡಿದು ನಿಲ್ಲುವ ಸುನಿಲ್ ಖಾರ್ವಿ ಯವರಂತಹ ಡೈನಾಮಿಕ್ ವ್ಯಕ್ತಿತ್ವದ ಸಮಾಜಮುಖಿ ಚಿಂತನೆಯ ಯುವ ನಾಯಕರ ಅಗತ್ಯ ಸಮಾಜಕ್ಕೆ ಎಂದಿಗಿಂತಲೂ ಇಂದು ಬೇಕಾಗಿದೆ👌👌👍👍👏👏🙏🙏🙏

  4. ಕರಾವಳಿ ಅಭಿವೃದ್ಧಿ ಯೋಜನೆ ಅತ್ಯಂತ ಮುಂದುವರಿದ ಹಂತದಲ್ಲಿದೆ. 2036 ರ ವೇಳೆಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸುವುದು ಅವರ ಆಲೋಚನೆ … ಈ ಸಂಪೂರ್ಣ ಯೋಜನೆಯಲ್ಲಿ ಅವರು ಮೀನುಗಾರ ಸಮುದಾಯಕ್ಕೆ ಸ್ಪಷ್ಟವಾದ ಕಡಿತ ಪ್ರಯೋಜನಗಳನ್ನು ಎಲ್ಲೂ ಉಲ್ಲೇಖಿಸಿಲ್ಲ … ಆದರೆ ಈ ಅಭಿವೃದ್ಧಿಗೆ ಮೀನುಗಾರ ಸಮುದಾಯಕ್ಕೆ ಸೇರಿದ ಬಹಳಷ್ಟು ಭೂಮಿಯನ್ನು ತೆಗೆದುಕೊಳ್ಳಲಾಗುವುದು ಎಂಬುದು ಸ್ಪಷ್ಟ ಎಂಬುವುದು ನಮಗೆ ಗೊತ್ತು.
    ಯಾಕಂದರೆ 1999 ರಲ್ಲಿ ಪ್ರಾರಂಭವಾದ ಕಾರ್ವಾರದ ಸೀಬರ್ಡ್ ಯೋಜನೆಗಾಗಿ ಅಭಿವೃದ್ಧಿಯ ಹೆಸರಿನಲ್ಲಿ ಅಂದಿನ ಸರ್ಕಾರ ಮಾಡಿದು ಅದೆ. ಆದರೆ ಯಾರು ಅಭಿವೃದ್ಧಿಯಾದರು? ಅಲ್ಲಿಗೆ ಬಂದು ನೆಲೆಸಿದ ಉತ್ತರ ಭಾರತೀಯ ಅಧಿಕಾರಿಗಳು, ಏಕೆಂದರೆ ಇದು ಕೇಂದ್ರ ಸರ್ಕಾರದ ಯೋಜನೆ. ಭೂಮಿಯನ್ನು ಕಳೆದುಕೊಂಡ ಮೀನುಗಾರರು ಸಮುದ್ರದಿಂದ ಬಹಳ ದೂರದಲ್ಲಿ ಅಥವಾ ಬೆಟ್ಟಗಳ ಮೇಲೆ ನೆಲೆಸಿದ್ದಾರೆ. ಈ ಇಡೀ ಕರಾವಳಿ ಅಭಿವೃದ್ಧಿ ಯೋಜನೆಯಲ್ಲಿ ಆಗುವುದು ಅದೇ, ಅನ್ಯ ರಾಜ್ಯಗಳ ಹೂಡಿಕೆದಾರರು ಬಂದು “develop” ಆಗುತ್ತಾರೆ ಅಷ್ಟೇ.

  5. ಖಾರ್ವಿ ಸಮುದಾಯವು ರಾಜಕೀಯವಾಗಿ, ಶೈಕ್ಷಣಿಕ ವಾಗಿ ಹಾಗೂ ಹಿಂದುಳಿದ ಜನಾಂಗವಾಗಿದೆ.
    ಖಾರ್ವಿ ಸಮುದಾಯದಲ್ಲಿ ರಾಜಕೀಯ ಮುಖಂಡರ ಅಗತ್ಯವಿದೆ. ಸರಕಾರದ ಏನೇ ಸವಲತ್ತು ಬಂದರೂ ನಮಗೆ ಸಿಗದೇ ವಂಚಿತರಾಗಿದ್ದೇವೆ .ಪ್ರತ್ಯೇಕ ಮೀಸಲಾತಿ ನಮ್ಮ ಸಮುದಾಯಕ್ಕೆ ಅಗತ್ಯವಿದೆ. ನಮ್ಮ ಸಮುದಾಯವು ರಾಜಕೀಯ ಪಕ್ಷದ ಆಟದ ಗೊಂಬೆ ಆಗಬಾರದು.

Leave a Reply

Your email address will not be published. Required fields are marked *