ಸಮಾಜದ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಿರುವುದು ಖಂಡನೀಯ: ರವಿ ಟಿ ನಾಯ್ಕ್

ಹೊನ್ನಾವರದ ಕಾಸರಕೋಡ ಟೊಂಕದಲ್ಲಿ ತಲಾ ತಲಾಂತರಗಳಿಂದ ಅನ್ಯೋನ್ಯವಾಗಿ ಶಾಂತಿಯುತವಾಗಿ ವಾಸಿಸುತ್ತಿರುವ ಸರಿ ಸುಮಾರು 500ರಿಂದ 1000 ಮೀನುಗಾರರಿಗೆ ಸಂಬಂಧಪಟ್ಟ ಜಾಗಗಳನ್ನು ಬಲವಂತವಾಗಿ ತೆರವುಗೊಳಿಸಿ ಜನ ವಿರೋಧಿ ಖಾಸಗಿ ಒಡೆತನದ ವಾಣಿಜ್ಯ ಬಂದರು ನಿರ್ಮಾಣ ಅತ್ಯಂತ ಖಂಡನೀಯ.

ಮೇಲ್ನೋಟಕ್ಕೆ ಇದು ಮೊಸರಲ್ಲಿ ಕಲ್ಲು ಹುಡುಕುವ ಒಂದು ಹುನ್ನಾರ ಹಾಗೂ ಮೀನುಗಾರರನ್ನು ಸಾಮೂಹಿಕವಾಗಿ ಒಕ್ಕಲೆಬ್ಬಿಸುವ ಷಡ್ಯಂತ್ರ ಕಾರಣ ಸಂಬಂಧಪಟ್ಟ ವಿಜ್ಞಾನಿಗಳು, ಬುದ್ಧಿಜೀವಿಗಳು, ಹಾಗೂ ಸಾಮಾಜಿಕ ಕಾರ್ಯಕರ್ತರು ಅಂಕಿ-ಅಂಶಗಳ ಮೂಲಕ ಬಂದರು ನಿರ್ಮಾಣದಿಂದ ಜನರ ಮೇಲಾಗುವ ಅಡ್ಡಪರಿಣಾಮ ಸ್ಪಷ್ಟವಾಗಿ ವಿವರಿಸಿದ್ದಾರೆ, ಅಲ್ಲದೇ ಮುಖ್ಯವಾಗಿ ಮೀನುಗಾರಿಕೆಯನ್ನು ನಂಬಿ ಜೀವಿಸುತ್ತಿರುವ ಕುಟುಂಬಗಳ ಮೇಲೆ ನಡೆದಿರುವ ದೊಡ್ಡ ಬರೆ.

ಸುನಾಮಿ ನೈಸರ್ಗಿಕ ಪ್ರಳಯ ಅಂತ ಬಾವಿಸಿದ ನಮಗೆ ಕೆಲವು ಶ್ರೀಮಂತರ ಅವಿಷ್ಕಾರಕ್ಕಾಗಿ ಕೃತಕವಾಗಿ ನಿರ್ಮಿಸಿಇಡೀ ಪರಿಸರ ಹಾಳುಗೆಡವುದು ಅತ್ಯಂತ ಹೇಯವಾದ ಕಾರ್ಯ ತಿಳಿದು ಕೂಡ ರಾಜ್ಯ ಸರ್ಕಾರ ಈ ರೀತಿಯ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಅನಿವಾರ್ಯ.

ದಯವಿಟ್ಟು ಮೀನುಗಾರರನ್ನು ನೆಮ್ಮದಿಯಾಗಿ ಬದುಕಲು ಬಿಡಿ.

ರವಿ.ಟಿ ನಾಯ್ಕ್, ಉದ್ಯಮಿ
ಖಾವಿ೯ ಅಭಿಮಾನಿ

 

4 thoughts on “ಸಮಾಜದ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಿರುವುದು ಖಂಡನೀಯ: ರವಿ ಟಿ ನಾಯ್ಕ್

  1. ದೂರದ ಮುಂಬೈನಲ್ಲಿ ಇದ್ದರೂ ನಮ್ಮ ಸಮಾಜದ ಬಗೆಗಿನ ನಿಮ್ಮ ಕಾಳಜಿ ಕಳಕಳಿ ಪ್ರಶಂಸನೀಯ ವಾಸ್ತವ ಸಂಗತಿಗಳ ದರ್ಪಣವಾಗಿ ತಾವು ಪಡಿಮೂಡಿಸಿರುವ ಅಂಶಗಳು ಸಕಾಲಿಕವಾಗಿದೆ ಧನ್ಯವಾದಗಳು🙏🙏🙏

  2. ನಾವು ಪೂರ್ಣ ರೂಪದಲ್ಲಿ ಒಗ್ಗೂಡಬೇಕಾದ ಕ್ಷಣ ಇದು… ನಮ್ಮ ಸಮುದಾಯದ ವಿದ್ಯಾವಂತ ಯುವಕರನ್ನು ನಾವು ವಿನಂತಿಸುತ್ತೇವೆ ದಯವಿಟ್ಟು ನೀವು ಎಲ್ಲಿದ್ದರೂ ಈ ವಿಷಯದ ಬಗ್ಗೆ ನಿಮ್ಮ ಧ್ವನಿಯನ್ನು ಸೇರಿಸಿ … ದಯವಿಟ್ಟು ಹೊನ್ನವರ ಕಾಸರಗೋಡಿನಲ್ಲಿ ನಡೆಯುತ್ತಿರುವ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಭಾಗವಹಿಸಿ ಮತ್ತು ಸಮುದಾಯದ ಸದಸ್ಯರಿಗೆ ಜಾಗೃತಿ ಮೂಡಿಸಿ ನೀವು. ಈ ಸಮಸ್ಯೆಯು ಕೇವಲ ಒಂದು ಸ್ಥಳಕ್ಕೆ ಸಂಬಂಧಿಸಿಲ್ಲ… ಯಾಕಂದರೆ ಇಂದು ಇಲ್ಲಿ ನೆಡಿಯುತಿರುವ ಈ ವಿಷಯ ಶೀಘ್ರದಲ್ಲೇ ನಿಮ್ಮ ಊರು ನಿಮ್ಮ ಮನೆಗು ತಲುಪುತ್ತದೆ… ನಮ್ಮ ರಾಜಕೀಯ, ಪ್ರಾದೇಶಿಕ ಮತ್ತು ವೈಯಕ್ತಿಕ ಪಕ್ಷಪಾತಗಳನ್ನು ಬದಿಗಿಟ್ಟು ಒಟ್ಟಿಗೆ ಸೇರುವ ಸಮಯ ಇದು… ಖಾರ್ವಿಯ ಯುವಕರನ್ನು ದಯವಿಟ್ಟು ಒಗ್ಗೂಡಿಸಿ ಮತ್ತು ನಿಮ್ಮ ಧ್ವನಿಯನ್ನು ಹೆಚ್ಚಿಸಿ… ನಿಮ್ಮ ಸುತ್ತಲಿನ ಸಮಾಜ ಬಂದವರಿಗೆ ಶಿಕ್ಷಣ ನೀಡಿ… ಇಲ್ಲದಿದ್ದರೆ 2036 ರ ಹೊತ್ತಿಗೆ ನಾವು ಬಹಳಷ್ಟು ವಿಷಯಗಳನ್ನು ಕಳೆದುಕೊಳ್ಳುತೆವೆ.

  3. ನಾವು ಮಾತು ಮಾತಿಗೂ ನಮ್ಮಲ್ಲಿ ಒಗ್ಗಟ್ಟು ಇದೆ, ನಾವೆಲ್ಲ ಒಂದೆ, ಎಂದು ಬಡಬಡಿಸಿಕೊಳ್ಳುವುದನ್ನು ಬಿಟ್ಟು ಕರ್ನಾಟಕ, ಗೊವಾ, ಮಹಾರಾಷ್ಟ್ರ ಗಳಲ್ಲಿ ಹರಡಿಕೊಂಡಿರುವ ನಾವೆಲ್ಲಾ ಕೊಂಕಣಿಖಾರ್ವಿಗಳು ನಮ್ಮ ಮುಖಂಡರಾದಿಯಾಗಿ ಪ್ರತೀ ಊರಿನ ಸ್ಥಳೀಯ ಖಾರ್ವಿ ಮುಖಂಡರು ಒಗ್ಗೂಡಿ ಒಂದೇ ದಿನ ಅನ್ಯಾಯಕ್ಕೊಳಗಾದ ಜನರ ಸ್ಥಳಕ್ಕೆ ಹೋಗಿ ಅವರೊಂದಿಗೆ ಇದ್ದು ಸರಕಾರದ ಗಮನ ಸೆಳೆಯಬೇಕಾಗಿದ್ದು, ಹೋರಾಟ ನಡೆಸಬೇಕಾದದ್ದು ಸಮಾಜದವರಾದ ನಮ್ಮೆಲ್ಲರ ಜವಾಬ್ದಾರಿ ಯಾಗಿರುತ್ತದೆ. ಅದರೆ ಇದರ ಮುಂದಾಳತ್ವ ತೆಗೆದುಕೊಳ್ಳಬೇಕಾದವರು ಎಚ್ಚತ್ತುಕೊಳ್ಳಬೇಕಾದದ್ದು ಅನಿವಾರ್ಯ.

  4. ಹೊನ್ನಾವರದ ಕಾಸರಗೋಡು ಟೋಂಕದಲಿ ಖಾರ್ವಿ ಸಮಾಜದ ಬಡ ಕುಟುಂಬದವರ ಮೇಲಾದ ಅನ್ಯಾಯ ನಿಜವಾಗಿಯೂ ಅತೀವ ದುಃಖದ ಫಟನೆಯಾಗಿದೆ. ಖಾರ್ವಿ ಸಮಾಜದ ಎಲ್ಲಾ ಸಂಘ ಸಂಸ್ಥೆಗಳು ಒಟ್ಟಿಗೆ ಈ ವಿಷಯದ ಬಗ್ಗೆ ಚರ್ಚಿಸಿ ಆ ಬಡ ಕುಟುಂಬದವರಿಗೆ ನ್ಯಾಯ ಸಿಗುವ ದಿಶೆಯಲ್ಲಿ ಸತತ ಪ್ರಯತ್ನ ಮಾಡುವ ಅಗತ್ಯವಿದೆ.

Leave a Reply

Your email address will not be published. Required fields are marked *