ಸಮೂಹ ವಂಚನೆಯ ಪ್ರಯೋಗ ಶಾಲೆ ಕಾಸರಕೋಡ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿ

ಮಾತು ಆತ್ಮವಂಚನೆಯ ಹಂತವನ್ನು ದಾಟಿ ಸಮೂಹ ವಂಚನೆಯ ಆಯುಧವಾಗಿ ಬದಲಾಗಿರುವ ಕಾಲಘಟ್ಟವಿದು ಮಾತಿನಿಂದ ಕಟ್ಟುವ ವಾದ ಜನಸಮೂಹವನ್ನು ಮರಳುಗೊಳಿಸುವ ಬಹು ಬೇಡಿಕೆಯ ಮಾದಕ ಸರಕಾಗಿದೆ ಇದಕ್ಕೆ ಸ್ಪಷ್ಟ ಉದಾಹರಣೆ ಜನರನ್ನು ವಂಚಿಸಿ ನಡೆಯುತ್ತಿರುವ ಕಾಸರಕೋಡ ಖಾಸಗಿ ವಾಣಿಜ್ಯ ನಿರ್ಮಾಣದ ಕಾಮಗಾರಿ ಮತ್ತು ನಡೆದಿರುವ ದೌರ್ಜನ್ಯದ ಕುರಿತಾಗಿ ರಾಜಕಾರಣಿಗಳು ,ಅಧಿಕಾರಿಗಳು ತಮ್ಮ ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಣೆ ಮಾಡುತ್ತಿರುವ ವೈಖರಿ ಮೀನುಗಾರ ಮಹಿಳೆಯರು ಮಕ್ಕಳ್ಳೆನ್ನದೇ ಮೃಗೀಯವಾಗಿ ಅವರ ಮೇಲೆ ನಡೆದ ದಾಳಿ ಅವರ ಮನೆಯನ್ನು ದ್ವಂಸಗೊಳಿಸಿದ ಪರಿ ನಿಜಕ್ಕೂ ಅತ್ಯಂತ ಖಂಡನೀಯವಾಗಿದೆ.

ಇಷ್ಟೆಲ್ಲಾ ಆದ ಮೇಲೂ ಕಿವಿಯ ಮೇಲೆ ಹೂ ಇಡಲು ಮಾತಿನ ಮೂಲಕ ವಾಸ್ತವ ಸಂಗತಿಯನ್ನು ತಿರುಚಲು ಈ ಯೋಜನೆಯ ಫಲಾನುಭವಿ ರಾಜಕಾರಣಿಗಳು ಅಧಿಕಾರಿಗಳು ಸ್ಪರ್ಧೆ ಗಿಳಿದವರಂತೆ ವಿತಂಡವಾದ ಮಂಡಿಸುತ್ತಿದ್ದಾರೆ ವಾಣಿಜ್ಯ ಬಂದರು ನಿರ್ಮಾಣ ವಿಷಯದಲ್ಲಿ ಸಂತ್ರಸ್ತರ ಬಡ ಮೀನುಗಾರರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕುಹಕ ಯತ್ನ ನಡೆಯುತ್ತಿದೆ ಮೀನುಗಾರರ ಮೇಲೆ ದಾಳಿ ನಡೆದ ದಿನ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತೆಯ ಮೇರುಶಿಖರವಾದ ಅಧಿಕಾರಿಯೋರ್ವರು ಮೀನುಗಾರರ ಮೇಲೇಯೇ ತಪ್ಪನ್ನು ಹೊರಿಸುವ ಮೂಲಕ ಮಾತಿನ ಮಂಟಪ ಕಟ್ಟಿದ್ದಾರೆ.

ನಡಾವಳಿಯ ಪ್ರಸ್ತಾಪ ಮಾಡಿದ್ದಾರೆ ಮೀನುಗಾರರ ನೆರವಿಗೆ ಬಾರದ ನಡಾವಳಿ ಬೆಲ್ಲ ಹಾಕಿ ನೆಕ್ಲಿಕಾ? ಕರಾವಳಿ ತೀರಗಳನ್ನು ಬಂಡವಾಳಶಾಹಿಗಳಿಗೆ ಬಿಕರಿ ಇಡುವ ಆಡಳಿತ ವ್ಯವಸ್ಥೆಯ ವಿರುದ್ಧ ಪ್ರಬಲ ಜನಾಂದಲೋನ ರೂಪುಗೊಳ್ಳುತ್ತಿದೆ ಆತ್ಮ ವಂಚನೆಯನ್ನು ಸಮೂಹ ವಂಚನೆಯ ಆಯುಧವನ್ನಾಗಿ ಬಳಸುತ್ತಿರುವ ರಾಜಕಾರಣಿಗಳು ಅವರ ಆದೇಶವನ್ನು ಪರಿಪಾಲಿಸಿ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುತ್ತಿರುವ ಅಧಿಕಾರಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.


ಉಮಾಕಾಂತ ಖಾರ್ವಿ ಕುಂದಾಪುರ

 

Leave a Reply

Your email address will not be published. Required fields are marked *