ಕಡಲೂ ಅವರದ್ದೇ ಅನ್ನದ ಬಟ್ಟಲು ಕೂಡಾ ಅವರದ್ದೇ

ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು ಎಂದು ಪೃಕೃತಿಯಲ್ಲಿ ದೈವ ಸಾಕ್ಷಾತ್ಕಾರ ಕಂಡ ಒಲವಿನ ಕವಿ ಕೆ. ಎಸ್. ನರಸಿಂಹಸ್ವಾಮಿ ಸುಶ್ರಾವ್ಯ ಭಾವಗೀತೆ ಬರೆದರು.

ಕಡಲಿನೊಂದಿಗೆ ಬದುಕು ಸಾಗಿಸುತ್ತಿರುವ ಮೀನುಗಾರರಿಗೆ ಈ ಗೀತೆ ಹೃದಯಂಗಮವಾಗಿ ಅನ್ವಯವಾಗುತ್ತದೆ ಆದರೆ ಈಗ ಏನಾಗಿದೆ? ಕಡಲು ಬಂಡವಾಳ ಶಾಹಿಗಳ ಪಾಲಾಗಿದೆ ಸರ್ಕಾರ ಕಡಲ ತೀರಗಳನ್ನು ಬಂಡವಾಳ ಶಾಹಿಗಳಿಗೆ ಗಿರವಿ ಇಟ್ಟಿದೆ ಇಬ್ಬರೂ ಸೇರಿ ಮೀನುಗಾರರ ಅನ್ನದ ಬಟ್ಟಲಿಗೆ ಕೈ ಹಾಕಿದ್ದು ಹತಾಶ ಮೀನುಗಾರರು ಕಡಲಿಗೆ ಹಾರಲು ಹೋದರೆ ಅಲ್ಲೂ ಕೂಡಾ ಹಾರುವಂತಿಲ್ಲ ಕಡಲು ಕೂಡಾ ತಮ್ಮದೆಂಬ ಅಹಂಕಾರದ ಸೊಕ್ಕಿನ ಮಾತುಗಳು ಸರ್ಕಾರಿ ಕೃಪಾಪೋಷಿತ ಖಾಸಗಿ ಬಂದರು ನಿರ್ಮಾಣ ಪೃಭತಿಗಳಿಂದ ಕೇಳಿ ಬರುತ್ತಿದೆ ತನ್ಮೂಲಕ ಈ ಪೃಭತಿಗಳು ಮೀನುಗಾರರ ಅನ್ನದ ಬಟ್ಟಲಿಗೆ ಕೈ ಹಾಕಿದ್ದಾರೆ.

ಪ್ರಾಣ ತೆಗೆಯಲು ಬರುವ ಯಮ ಕೂಡಾ ಊಟ ಮಾಡುತ್ತಿರುವ ಮನುಷ್ಯನನ್ನು ಊಟ ಮಾಡುವ ತನಕ ಕಾದು ಆಮೇಲೆ ಪ್ರಾಣ ತೆಗೆದುಕೊಂಡು ಹೋಗುತ್ತಾನೆ ಎಂಬ ಪ್ರತೀತಿ ಇದೆ ಈ ಬಂದರು ನಿರ್ಮಾಣ ಯೋಜನೆಯ ಪೃಭತಿಗಳು ಮೀನುಗಾರರ ಅನ್ನದ ಬಟ್ಟಲನ್ನು ಕಸಿದುಕೊಂಡು ಅವರ ಪ್ರಾಣ ತೆಗೆಯುತ್ತಿದ್ದಾರೆ ತಮ್ಮ ಪರಮ ನೀಚತನದ ಮುಖಗಳನ್ನು ಬಹಳ ಹೆಮ್ಮೆ ಯಿಂದ ಅನಾವರಣಗೊಳಿಸುತ್ತಿದ್ದಾರೆ ಇದರ ತರಾತುರಿಯ ಪ್ರದರ್ಶನವೇ ಕಾಸರಕೋಡ ಟೊಂಕದ ಮೀನುಗಾರರ ಮನೆ ದ್ವಂಸ ದೌರ್ಜನ್ಯದ ಪರಮಾವಧಿ ಈ ನಡುವೆ ಕಾಮಗಾರಿಗೆ ಮರುಚಾಲನೆ ನೀಡಲು ತೆರೆಯ ಹಿಂದೆ ಮುಂದೆ ಅವಿರತ ಪ್ರಯತ್ನಗಳು ನಡೆಯುತ್ತಿದೆ ಏಕಾಏಕಿ ಮತ್ತಷ್ಟು ದಂಡಿನೊಂದಿಗೆ ಬಡ ಮೀನುಗಾರರ ಮೇಲೆ ದಾಳಿ ನಡೆಸುವ ಸಾಧ್ಯತೆಯೂ ದಟ್ಟವಾಗಿದೆ.

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *