ಕಾಸರಕೋಡ ಖಾಸಗಿ ಬಂದರು ನಿರ್ಮಾಣ ರಸ್ತೆ ಕಾಮಗಾರಿ ಸೃಷ್ಟಿಸಿದ ದುರಂತ ಕಡಲಿನಲ್ಲಿ ದೋಣಿ ದುರಂತ ಓರ್ವ ಮೀನುಗಾರನ ದುರ್ಮರಣ.
ಕಾಸರಗೋಡಿನ ಟೊಂಕದ ಬಳಿ ಸಮುದ್ರದ ಮಧ್ಯದಲ್ಲಿ ಮೀನುಗಾರಿಕಾ ದೋಣಿ ಮುಳುಗಿ ಒಬ್ಬ ಮೀನುಗಾರ ಮೃತಪಟ್ಟಿದ್ದಾರೆ ನಾಲ್ಕು ಜನ ಮೀನುಗಾರರಿದ್ದ ದೋಣಿ ಸಮುದ್ರ ತೀರದಿಂದ ಸೋಮವಾರ ಬೆಳಿಗ್ಗೆ 6.00 ಗಂಟೆಗೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿದಿತ್ತು. ಆದರೆ ಸಮುದ್ರದಲ್ಲಿ ಎತ್ತರದ ಅಲೆಯಿಂದಾಗಿ ದೋಣಿ ಸಮುದ್ರದ ಮಧ್ಯೆ ಮಗುಚಿದೆ ಪರಿಣಾಮ ಉದಯ ದಾಮೋದರ ತಾಂಡೇಲ ಮೃತಪಟ್ಟಿದ್ದಾರೆ ಇನ್ನುಳಿದ ಮೂವರು ಮೀನುಗಾರರಾದ ಶಂಕರ್ ಮಾದೇವ ತಾoಡೇಲ್, ವಿಜಯ್ ಫೆರ್ನಾಂಡಿಸ್ ಹಾಗೂ ಕಾಮೇಶ್ವರ್ ದೇವಯ್ಯ ತಾoಡೇಲ್ ರವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ, ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ.
ಹೊನ್ನಾವರ ಕಾಸರಗೋಡು ಟೊಂಕದಲ್ಲಿ ಖಾಸಗಿ ಬಂದರು ನಿರ್ಮಾಣ ಪ್ರದೇಶದಲ್ಲಿ ಇತ್ತೀಚೆಗೆ ಬಂಡವಾಳಶಾಹಿಗಳು ಬಲವಂತವಾಗಿ ಮೀನುಗಾರರ ಮನೆ ತೆರವುಗೊಳಿಸಿ ಪ್ರದೇಶವನ್ನು ಅಸ್ತವ್ಯಸ್ತಗೊಳಿಸಿ ಇಲ್ಲಿ ಇಡಲಾದ ಮೀನುಗಾರಿಕಾ ದೋಣಿಗಳನ್ನು ತೆಗೆಯಲು ಆಗದಂತೆ ಮಾಡಿತ್ತು ರಸ್ತೆ ನಿರ್ಮಾಣದ ಈ ಪ್ರದೇಶದ ಸಮುದ್ರ ಅತ್ಯಂತ ಶಾಂತವಾಗಿದ್ದು, ಇಲ್ಲಿಂದಲ್ಲೇ ದೋಣಿಗಳನ್ನು ಮೀನುಗಾರರು ಸಮುದ್ರ ಕ್ಕೆ ಇಳಿಸುತ್ತಿದ್ದರು ಆದರೆ ಸರ್ಕಾರ ರಸ್ತೆ ನಿರ್ಮಾಣ ಮಾಡಿ ದೋಣಿಗಳು ಇಳಿಯದಂತೆ ರಸ್ತೆ ನಿರ್ಮಾಣ ಮಾಡಿ ತೊಂದರೆ ಸೃಷ್ಟಿಸಿರುವುದರಿಂದ ಮೀನುಗಾರರು ಅನ್ಯ ಮಾರ್ಗ ವಿಲ್ಲದೇ ಇಲ್ಲಿನ ಬ್ಲೂಫ್ಲಾಗ್ ಪ್ರದೇಶದ ಪ್ರಕ್ಷುಬ್ದ ಕಡಲ ತೀರದಿಂದ ದೋಣಿಗಳನ್ನು ಇಳಿಸಿದ ಪರಿಣಾಮವಾಗಿ ಕಡಲಿನ ಅಲೆಯ ಹೊಡೆತಕ್ಕೆ ಸಿಲುಕಿ ಓರ್ವ ಮೀನುಗಾರ ಸತ್ತಿದ್ದು ಮತ್ತಿಬ್ಬರು ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ ಎಂಬ ಮಾಹಿತಿ ಬಂದಿದೆ ಈ ದುರ್ಘಟನೆಗಳಿಗೆ ಬಂಡವಾಳಶಾಹಿಗಳೇ ಸಂಪೂರ್ಣ ಹೊಣಿಗಾರರಾಗಿದ್ದು ಮೀನುಗಾರರನ್ನು ಬಂಡವಾಳಶಾಹಿಗಳೇ ಬಂದರು ನಿರ್ಮಾಣ ಕಾಮಗಾರಿಯ ಹೆಸರಿನಲ್ಲಿ ಕೊಲ್ಲುತ್ತಿದೆ.
ವರದಿ: ರೇಣುಕ ತಾoಡೇಲ್ ಕಾಸರಗೋಡು
www.kharvionline.com