ಹಾಡುಗಾರ ಆಗಲೇಬೇಕು ಎನ್ನುವ ಹಠ ಛಲಕ್ಕೆ ಗಂಟು ಬಿದ್ದು ಸಾಧಿಸಿದ ಯುವಕನ ಯಶೋಗಾಥೆಗೆ ಎಲ್ಲರೂ ಬೆರಗುಗೊಂಡರು.
ಹರೀಶ್ ಖಾರ್ವಿ ಎಂಬ ಮೀನುಗಾರ ಹುಡುಗ ಒಮ್ಮೆ ಹಾಡಿದರೆ ಸಾಕು …ವಾವ್…ಅಲ್ಲೊಂದು ಗಂಧರ್ವ ಲೋಕ ಸ್ರಷ್ಟಿ ಆಗುತ್ತೆ ಕಡಲಿನಲ್ಲಿ ಮೀನುಗಳು ಹಾರಿ ಹಾರಿ ಸಂತಸ ಪಡುತ್ತದೆ ಕಡಲ ತೆರೆಗಳು ಅಪ್ಪಿಕೊಂಡು ಜೋಕಾಲಿ ಆಡುತ್ತದೆ ಹರೀಶ್ ಗಾನಸುಧೆಗೆ ಬೆಲೆ ಕಟ್ಟಲಾಗದು ನಿಜಕ್ಕೂ ಅದ್ಭುತ ಹಾಡುಗಾರ ಓದಿದ್ದು ಕೇವಲ 2ನೇ ತರಗತಿ ನೂರಾರು ಭಕ್ತಿ ಗೀತೆ ರಚಿಸಿದ ಕೀರ್ತಿ ಇವರದು ಸಿನಿಮಾ ಹಾಡು, ಭಕ್ತಿ ಗೀತೆ, ಜನಪದ, ಭಾವಗೀತೆಗೆ ಜೀವ ತುಂಬಿದ ಬ್ರಹ್ಮ.
ಮಾಧುರ್ಯ ಕಂಠಸಿರಿಗೆ ಈತನ ಬಾಲ್ಯದ ಭಜನೆ ಗೀಳು ಕಾರಣ ಭಜನೆ ಹಾಡುತ್ತಲೆ ಗಾಯಕನಾಗಿ ಹೊರ ಹೊಮ್ಮಿದ ಪ್ರತಿಭಾವಂತ, ಕನ್ನಡ ಮಾತ್ರವಲ್ಲ ಹಿಂದಿ, ತಮಿಳು, ಒಡಿಸ್ಸಿ ಭಾಷೆಯಲ್ಲೂ ಹಾಡಿದ ಗಾಯಕ.
“ಕರ್ನಾಟಕ ಜ್ಯೋತಿ ರಾಜ್ಯಪ್ರಶಸ್ತಿ” ಪುರಸ್ಕ್ರತ ಹರೀಶ್ ಖಾರ್ವಿ ಇಂದು “Karoke” ಹಾಡುಗಾರಿಕೆಗೆ ಫೇಮಸ್ ಆಗಿದ್ದಾರೆ.
ಇವರ ಒಂದು ಪರಿಚಯವನ್ನು ಕುಂದಾಪುರದ ವಾರ ಪತ್ರಿಕೆ ಯಲ್ಲಿ ಬರೆದಿರುವೆ……
ರವಿ ಕುಮಾರ್ ಗಂಗೊಳ್ಳಿ
ದನ್ಯವಾದ ರವಿ ಬಾಬಾ ಖುಷಿ ಜಲ್ಲೆ ತುಮ್ಗೇಲೆ ಪ್ರೋತ್ಸಾಹ ಪೂಳೋಣು ದನ್ಯವಾದ
ದನ್ಯವಾದ ನಮ್ಮ ಎಲ್ಲಾ ಖಾರ್ವಿ ಬಂಧು ಮಿತ್ರರಿಗೆ
ಹರೀಶ್ ನಮ್ಮ ಸಮಾಜದ ಹೆಮ್ಮೆಯ ಗಾಯಕ ಅದ್ಬುತ ಕಂಠ ಸಿರಿಯ ಈ ಕಲಾವಿದನ ಗಾನಮಾಧುರ್ಯವನ್ನು ನಾನು ಪ್ರತ್ಯಕ್ಷದರ್ಶಿ ಪ್ರೇಕ್ಷಕನಾಗಿ ವಂಡ್ಸೆ ನೆಂಪು ಹೈಸ್ಕೂಲ್ ನಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ ಆಲಿಸಿದ್ದೇನೆ.👌👌👌👏👏👏👍👍👍🙏🙏🙏🙏🙏🎉