ನಿಮ್ಮೊಂದಿಗೆ ಒಂದಿಷ್ಟು ಖುಷಿಯ ಮಾತುಗಳು

ಭಾರತೀಯ ಪರಂಪರೆಯಲ್ಲಿ ಅಕ್ಷರವೆಂದರೆ ಸತ್ಯದ ಹುಡುಕಾಟ ಸಚ್ಚಾರಿತ್ಯದ ಹೂತೋಟ ಶ್ರೇಷ್ಠ ಮೌಲ್ಯಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಂಪ್ರದಾಯ, ಸಂಸ್ಕೃತಿಗಳನ್ನು ಉದ್ದೀಪನಗೊಳಿಸುವ ತೇಜೋಮಯ ನಕ್ಷತ್ರ ಈ ನಕ್ಷತ್ರದ ತೇಜೋಮಯ ಬೆಳಕಿನಲ್ಲಿ ನಮ್ಮ ಸಮಾಜದ ಉನ್ನತಿಯ ಪ್ರಕಾಶವು ಪ್ರಜ್ವಲಿಸಬೇಕು ಎಂಬ ಸದುದ್ದೇಶದಿಂದ ಸಮುದಾಯದ ಪ್ರಥಮ ಸುದ್ದಿ ಮಾಧ್ಯಮ ಜನ್ಮ ತಾಳಿತು ಜನ್ಮ ತಾಳಿದ ಎರಡೇ ತಿಂಗಳ ಅವಧಿಯಲ್ಲಿ ಜಗತ್ತಿನಾದಂತ್ಯ ತನ್ನ ಕೀರ್ತಿಯನ್ನು ಖಾರ್ವಿ ಆನ್ಲೈನ್ ಹರಡಿಕೊಂಡು ಮೈದಳೆದು ನಿಂತಿದೆ.

ಸಮಾಜದ ಆಶೋತ್ತರಗಳಿಗೆ ದ್ವನಿಯಾಗುವ ಪಥದತ್ತ ದಿಟ್ಟ ಹೆಜ್ಜೆ ಇಟ್ಟಿದೆ ಈ ಅಭೂತಪೂರ್ವ ಯಶಸ್ಸಿಗೆ ತಮ್ಮೆಲ್ಲರ ಅವಿಸ್ಮರಣೀಯ ಸಹಕಾರ ಪ್ರೀತಿ, ಬೆಂಬಲ ಮತ್ತು ವಾತ್ಸಲ್ಯಗಳೇ ಮುಖ್ಯ ಕಾರಣವಾಗಿದೆ. ತಮ್ಮಿಂದ ಬರುವ ಪ್ರಶಂಸೆಗಳ ಮಹಾಪೂರವಂತೂ ನಮ್ಮನ್ನು ಸಾರ್ಥಕತೆಯ ನೆರೆಯಲ್ಲಿ ತೇಲಾಡಿಸಿದೆ ಸಾಹಿತ್ಯ, ಜಾನಪದ, ಮಾನವಿಕ, ವಿಜ್ಞಾನ, ಕಲೆ, ಸಂಪ್ರದಾಯ, ವ್ಯಕ್ತಿ ಚಿತ್ರ, ಪ್ರಚಲಿತ ವಿದ್ಯಮಾನಗಳ ಸಮೃದ್ಧ ಕಣಜವಾಗಿ ಖಾರ್ವಿ ಆನ್ಲೈನ್ ಅಗಾಧ ಹರವು ಪಡೆದು ಮೈದಳೆಯಬೇಕಾದರೆ, ಅದರ ಹಿಂದೆ ಇದ್ದ ಶ್ರಮ, ಸೃಜನಶೀಲ ಮನಸ್ಸು ಕೈ ಒಂದೆರಡಲ್ಲ ಹತ್ತಾರು, ನೂರಾರು ಖಾರ್ವಿ ಆನ್ಲೈನ್ ಸರ್ವಾಂಗ ಸುಂದರವಾಗಿ ರೂಪುಗೊಳ್ಳಲು ನಮ್ಮೊಂದಿಗೆ ಕೈಜೋಡಿಸಿದ ಸಹೃದಯರೆಲ್ಲರಿಗೂ, ಹೃತ್ಪೂರ್ವಕ ವಂದನೆಗಳು.

ಇಂದು ಜಗತ್ತಿನಾದಂತ್ಯ (ಭಾರತ, ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್, ಐರ್ಲ್ಯಾಂಡ್, ಕುವೈತ್ ಸ್ವೀಡನ್, ಫ್ರಾನ್ಸ್, ಮಲೇಶಿಯಾ, ನೈಜೀರಿಯಾ, ಸೌದಿ ಅರೇಬಿಯಾ ಮತ್ತು ಇತರ ದೇಶಗಳು)ಖಾರ್ವಿ ಆನ್ಲೈನ್ ವಿಕ್ಷೀಸಿ ಹರಸಿ, ಹಾರೈಸುತ್ತಿರುವ ಸಹೃದಯರ ಸಂಖ್ಯೆ ಏಣಿಕೆಗೂ ಮೀರಿ ನಿಂತಿದೆ ಸರ್ವರ ಬೆಂಬಲ ಪ್ರೋತ್ಸಾಹಗಳು, ನಮ್ಮನ್ನು ಅದ್ಯಮ್ಯ ಗಮ್ಯ ದತ್ತ ಸಾಗಲು ಅಪೂರ್ವ ಪ್ರೇರಣೆ ನೀಡಿದೆ ಮತ್ತೊಮ್ಮೆ ಮಗದೊಮ್ಮೆ ಇನ್ನೊಮ್ಮೆ ಯಶಸ್ಸಿನ ಕಾರಣೀಭೂತರಾದ ತಮಗೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.

ಸುಧಾಕರ್ ಖಾರ್ವಿ
ಮತ್ತು
ಖಾರ್ವಿ ಆನ್ಲೈನ್ನ ಎಲ್ಲಾ ಸದಸ್ಯರು
www.kharvionline.com

3 thoughts on “ನಿಮ್ಮೊಂದಿಗೆ ಒಂದಿಷ್ಟು ಖುಷಿಯ ಮಾತುಗಳು

  1. ಶುಭವಾಗಲಿ ಸುದಣ್ಣ… ಖಾರ್ವಿ ಆನ್ಲೈನ್ ಮುಖಾಂತರ ನಮ್ಮ ಸಮಾಜದ ವಿವಿಧ ಸಾಧಕರ , ಸಮಾಜದ ಅಭಿವೃದ್ಧಿಗೆ ಶ್ರಮಿಸಿದವರ ಕುರಿತು ಬಹಳಷ್ಟು ಮಾಹಿತಿಯನ್ನು ನೀಡಿದ್ದೀರಿ… ಹೀಗೆ ನಿಮ್ಮ ಸೇವೆ ಮುಂದುವರಿಯಲಿ.. ಅಣ್ಣ…

  2. ಇಂದು ನಮ್ಮ ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ನಮ್ಮ ಕಣ್ಣು ಕಿವಿಗಳ ಕದ ಮುಚ್ಚಿ ,ಶೂನ್ಯದಲ್ಲಿ ಕೈ ಕಟ್ಟಿ ನಿಂತು,ನಿಟ್ಟುಸಿರು ಬಿಡುವ ಮೂಕಸಾಕ್ಷಿಗಳು ನಾವಾಗಬಾರದು.ಈ ನಿಟ್ಟಿನಲ್ಲಿ ಖಾರ್ವಿ ಆನ್ಲೈನ್ ನಮ್ಮ ದ್ವನಿ ಎಲ್ಲೆಡೆ ಪ್ರತಿದ್ವನಿಸಲು ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ.ಇದರ ಅಭೂತಪೂರ್ವ ಸಾಧನೆ ಪ್ರಶಂಸನೀಯ. ಅಭಿನಂದನೆಗಳು👍👍👍👌👌👌👏👏👏🎉🎉🎉🙏🙏🙏

  3. ಚಿಕ್ಕ ಬೀಜವೊಂದನ್ನು ನೆಟ್ಟು ಅದನ್ನು ಕಾಪಾಡಿ ನೀರೆರೆದು ಜೋಪಾನ ಮಾಡಿ ಬೆಳಸಿ ಮರಮಾಡುವುದು ಎಷ್ಟು ಕಷ್ಟವೋ, ಈ ನಮ್ಮ ಖಾರ್ವಿ ಆನ್ಲೈನ್ ಸುದ್ದಿ ಮಾದ್ಯಮವೂ ನಮ್ಮ ಸಮಾಜದ ಎಲ್ಲಾ ಸದಸ್ಯರ ಶ್ರಮದ ಫಲವಾಗಿ ಯಶಸ್ಸಿನತ್ತ ದಾಪುಗಾಲು ಇಡುತ್ತಾ ಸಾಗುತ್ತಿದೆ. ಮುಂದೆ ಬರುವ ಅಡೆ ತಡೆಗಳನ್ನೆಲ್ಲ ಮೀರಿ ನೈಜವಾದ ಸಮಾಜಕ್ಕೆ ಹತ್ತಿರವಾದ, ಅಗು ಹೋಗುಗಳನ್ನು, ಹಬ್ಬ ಹರಿದಿನಗಳ ವಿಷೇಷತೆಗಳನ್ನು, ತಮ್ಮ ಕಸುಬಗಳ ಸಾಧಕ ಬಾಧಕಗಳ ಬಗ್ಗೆ ಪ್ರಪಂಚದಾದ್ಯಂತ ಹಾಗೂ ನಮ್ಹ ದೇಶದಲ್ಲಿಯೂ ಹರಡಿಕೊಂಡಿರುವ ನಮ್ಮ ಸಮಾಜಭಾಂದವರಿಗೆ ಇಲ್ಲಿನ ಸುದ್ದಿಗಳನ್ನು ಬಿತ್ತರಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತಿರುವ ಸುಧಾಕರ್ ಕೋಟಾನ್ ಕುಂದಾಪುರ. ಇವರಿಗೂ ಹಾಗು ಸದಸ್ಯರಿಗೆ ಹೃದಯ ಪೂರ್ವಕ ದನ್ಯವಾದಗಳು.
    ಮಹೇಶ್ ಪಟೇಲ್ ಕುಂದಾಪುರ.

Leave a Reply

Your email address will not be published. Required fields are marked *