ತೆರೆ ಮರೆಯ ಅದ್ಭುತ ಪ್ರತಿಭೆ

ಪ್ರಚಾರ ಬಯಸದ ಅಪರೂಪದ ಕಲಾವಿದ ಜಿ.ಕೆ.ಗಂಗೊಳ್ಳಿ

ಗೋಪಾಲ ಖಾರ್ವಿ ಗಂಗೊಳ್ಳಿ ಇವರ ಹೆಸರು ನಿವೃತ್ತ ಡ್ರಾಯಿಂಗ್ ಮಾಸ್ಟರ್ ಶಿಸ್ತು, ಬದ್ಧತೆ, ಪ್ರಾಮಾಣಿಕತೆ ಮೂಲಕ ಬದುಕಿಗೆ ಹೊಸ ಅರ್ಥ ನೀಡಿದವರು ಡ್ರಾಯಿಂಗ್ ಮಾಸ್ಟರ್ ಆಗಿ ವೃತ್ತಿ ಜೀವನದ ಪುಟ ತೆರೆದ ಇವರು ತನ್ನ ಅಪೂರ್ವ Paintings ನಿಂದ ಗಮನ ಸೆಳೆದವರು “ಕಲಾ ನಿಪುಣ” ಪ್ರಶಸ್ತಿಗೆ ಭಾಜನರಾದ ಇವರು ತನ್ನ ಚಿತ್ರಗಾರಿಕೆಯ ಕೌಶಲ್ಯದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದು ವಿದ್ಯಾರ್ಥಿಗಳ ಬಳಗದ ಮೆಚ್ಚಿನ ಶಿಕ್ಷಕರು.

ಇವರು ಬಿಡಿಸಿದ ತೈಲ ವರ್ಣದ ಮರವಂತೆ ಕಡಲ ತೀರ Painting ಎಲ್ಲರ ಹೃದಯ ಗೆದ್ದು ಬಿಟ್ಟಿತ್ತು ಹಲವರು ಈ Paintings ಗೆ ಬೇಡಿಕೆ ಇಟ್ಟರು 1986/87 ರ ದಶಕದಲ್ಲಿ ಇವರ ಈ ತೈಲ ವರ್ಣ ವೈರಲ್ ಆಗಿ ಹೋಯಿತು ಹೀಗೇನೇ ಇವರು ಬಿಡಿಸಿದ ಮುರುಡೇಶ್ವರ ಟೆಂಪಲ್ ಕಿನಾರೆ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ.

ಇವರ ಚಿತ್ರಗಾರಿಕೆ ಸ್ವಲ್ಪ ವಿಶಿಷ್ಟ ವಿಭಿನ್ನ He is different from others….ತನ್ನದೇ ಕಲ್ಪನೆ, ಶೈಲಿಯಲ್ಲಿ ಚಿತ್ರಕ್ಕೆ ಹೊಸ ಸ್ಪರ್ಶ ನೀಡುವ ಕಲಾ ಜಾದೂಗಾರ ಇವರು ಬಿಡಿಸಿದ ತೈಲ ವರ್ಣ ಚಿತ್ರವಾದ “ಕೃಷ್ಣ ಅರ್ಜುನ ಮಹಾಭಾರತ ” ದ ಯುದ್ಧ ಸನ್ನಿವೇಶದ ಚಿತ್ರ ಆ ಕಾಲದಲ್ಲಿ ದೊಡ್ಡ ಸದ್ದು ಮಾಡಿತ್ತು Extraordinary Painting ಅದಾಗಿತ್ತು GKG ಎಲ್ಲರ ಗಮನವನ್ನು ತನ್ನ ಕಡೆ ಸೆಳೆದು ಬಿಟ್ಟಿದ್ದರು.

ಕೈ ಯಲ್ಲಿ ಬ್ರಶ್ ಸಿಕ್ಕರೆ ಸಾಕು ಅಲ್ಲೊಂದು ಹೊಸ ಸ್ರಷ್ಟಿಯನ್ನು ಸ್ರಷ್ಟಿಸುವ ಕಲಾ ನಿಪುಣ ಶ್ರೀ ಗೋಪಾಲ ಖಾರ್ವಿ ಗಂಗೊಳ್ಳಿ. ಇವರ ಮಾಂತ್ರಿಕ ಕೈ ಯಲ್ಲಿ ಮೂಡಿ ಬಂದಂಥ ಭಾವ ಚಿತ್ರಗಳು ಬೆರಗು ಹುಟ್ಟಿಸುತ್ತಿತ್ತು ಜೀವಂತ ವ್ಯಕ್ತಿ ಅಲ್ಲಿ ಕುಳಿತಂತೆ ಇರೋ ಹಾಗೆ ಬಿಡಿಸುವ ಇವರ ಕಲಾ ಚಾತುರ್ಯಕ್ಕೆ Hats up, ಇದೀಗ ವಿಶ್ರಾಂತ ಜೀವನದಲ್ಲಿ ಇರುವ ಗೋಪಾಲ್ ಖಾರ್ವಿ ತನ್ನ ಅದ್ಭುತ ಕಲೆ ಯಿಂದಲೇ ಗುರುತಿಸಿ ಕೊಂಡರೂ ಸಮಾಜ ಮಾತ್ರ ಇವರ ಕಲೆಗಾರಿಕೆಯನ್ನು ಎಲ್ಲಿಯೂ ಗುರುತಿಸಿ ಗೌರವಿಸಲಿಲ್ಲ ಎನ್ನುವ ನೋವು ಇವರಲ್ಲಿ ಮನೆ ಮಾಡಿ ಕೊಂಡಿರುದು ಅಕ್ಷರಶಃ ಸತ್ಯ.

ಇವರನ್ನು ಗುರುತಿಸಿ ಗೌರಸಿದರೆ ಇವರ ಪ್ರತಿಭೆಗೆ ಒಂದು ಪುರಸ್ಕಾರ ಸಿಕ್ಕಂತೆ ಆಗುತ್ತದೆ.

ಖಾರ್ವಿ ಸಮಾಜದ ಪ್ರತಿಭಾವಂತ ತೈಲ ವರ್ಣ ಚಿತ್ರಗಾರ ಶ್ರೀ ಗೋಪಾಲ ಖಾರ್ವಿ ಗಂಗೊಳ್ಳಿ ಇವರಿಗೆ ದೇವರು ಆರೋಗ್ಯ ಸುಖ ಶಾಂತಿ ನೆಮ್ಮದಿ ನೀಡಲಿ.

ರವಿ ಕುಮಾರ್ ಗಂಗೊಳ್ಳಿ

One thought on “ತೆರೆ ಮರೆಯ ಅದ್ಭುತ ಪ್ರತಿಭೆ

  1. ದೇಶಾದ್ಯಂತ ಹರಡಿರುವ ಸಮುದಾಯದ ಸದಸ್ಯರಿಗೆ ಮತ್ತು ಅಲ್ಲಿ ಬೆಳೆಯುತಿರುವ ಸಮಾಜದ ಯುವಪೀಳಿಗೆ ಮತ್ತು ಪುಟಾಣಿಗಳಿಗೆ … ನಮ್ಮ ಸಮುದಾಯದ ತೆರೆ ಮರೆಯ ಈ ರೀತಿಯ ಅದ್ಭುತ ಪ್ರತಿಭೆಪ್ರತಿಭೆಗಳಿಗೆ ಅವರನ್ನು ಪರಿಚಯಿಸುವ ಅದ್ಭುತ ವಿಧಾನ. ಗೋಪಾಲ ಖಾರ್ವಿಜಿಯವರಿಗೆ ನನ್ನ ನಮನ.

Leave a Reply

Your email address will not be published. Required fields are marked *