ಪ್ರತಿಭಾವಂತ ಕಲಾವಿದ ನಾಜೂ ( ಜೂನಿಯರ್ ಗುರುಕಿರಣ್ )

ಈ ಸ್ಪುರದ್ರೂಪಿ ಡ್ಯೂಪ್ಲಿಕೆಟ್ ಗುರುಕಿರಣ್ ನನ್ನು ನೋಡಿ ಒರಿಜಿನಲ್ ಗುರುಕಿರಣ್ ಹೌಹಾರಿ ಹೋದರು….!! ಹೋದ ಕಡೆ ಎಲ್ಲಾ ಜನರು ಯಾಮಾರಿ ಹೋದರು ಗುರುಕಿರಣ್ ಎಂದು ಅಪ್ಪಿಕೊಂಡು Oh My God ನೀವು ಜೂನಿಯರ್ ಗುರುಕಿರಣ್…? ಎಂದು ಸಂತಸ ಪಟ್ಟು ಕೈ ಕುಲುಕಿದರು.

Very Handsome…ಈ ಬಗ್ಗೆ ಅನುಮಾನವೇ ಇಲ್ಲ ಸ್ವತಹ ಗುರುಕಿರಣ್ ರವರೇ oh… Sooooooper ಎಂದು ಈ ಜೂನಿಯರ್ ನ್ನು ಅಪ್ಪಿ ಕೊಂಡು ಶುಭ ಹಾರೈಸಿದ ಆ ಕ್ಷಣ ಈ ಜೂನಿಯರ್ ಎಂದು ಮರೆಯಲ್ಲ. ಅದೇ ಮೀಸೆ, ಅದೇ Hair ಸ್ಟೈಲ್, ಅದೇ ನಡಿಗೆ, ಅದೇ ಎತ್ತರ, ಅದೇ Body language…….ಹೀಗಿರುವಾಗ ಯಾರೇ ಆಗಲಿ confusion ಆಗೋದು ಸಹಜ ತಾನೇ.

ಹೀಗೆ ಒಂದು ಚೆಂದದ ಪುಟ್ಟ ಊರಿನ ಅಂದದ ವಿನಯವಂತ ಹುಡುಗನ ಕಲಾ ಬದುಕು ಜರ್ನಿ ಆರಂಭಗೂಳ್ಳುತ್ತಾ ಹೋಗುತ್ತದೆ. ಖ್ಯಾತ ರಂಗ ಭೂಮಿ ನಟ ಕುಳ್ಳಪ್ಪು ರವರ ರೂಪ ಕಲಾ ತಂಡದ ಕೊಡುಗೆ ಈ ಜೂನಿಯರ್ ಗುರುಕಿರಣ್ ಅವರ ನಾಟಕ ತಂಡದಲ್ಲಿ ಜೂನಿಯರ್ ಗುರುಕಿರಣ್ ನಾಯಕನಾಗಿ ತನ್ನ ಕಲಾ ಬದುಕನ್ನು ಆರಂಭಿಸಿ ಅಲ್ಲಿ ತನ್ನ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸುತ್ತಾರೆ. ನಾಟಕಕ್ಕೆ ಹೊಸ ಮಿಂಚು ಸಂಚಾರ ಆಗುತ್ತದೆ ಈ ಜೂನಿಯರ್ ಗುರುಕಿರಣ್ನ ಪ್ರವೇಶದಿಂದ ರಾಜ್ಯದ ಮೂಲೆ ಮೂಲೆಯಲ್ಲೂ ಹಾಗು ಮುಂಬೈನಲ್ಲೂ ನಾಟಕ ಪ್ರದರ್ಶನಗೊಂಡು ಜೂನಿಯರ್ ಗುರುಕಿರಣ್ ಮನೆ ಮಾತಾಗುತ್ತಾರೆ. ವಿದೇಶದಲ್ಲೂ ಇವರು ಗಮನ ಸೆಳೆದಿರುದು ಇವರ ಜನಪ್ರಿಯತೆಗೆ ಜ್ವಲಂತ ಸಾಕ್ಷಿ ಆಗುತ್ತದೆ.

ಇಂದು ಕರ್ನಾಟಕ ಸ್ಟೇಟ್ ನಲ್ಲಿ ಜೂನಿಯರ್ ಗುರು ಕಿರಣ್ ಚಿರಪರಿಚಿತ ಅಂದ ಹಾಗೇ ಇವರ ಹೆಸರು ನಾಗರಾಜ್ ಖಾರ್ವಿ ಗಂಗೊಳ್ಳಿ ಗಾಯಕನಾಗಿ, ನಟನಾಗಿ, ಡಾನ್ಸರ್ ಆಗಿ ಅಷ್ಟೇ ಅಲ್ಲ ಮೂರ್ತಿ ರಚನಕಾರರಾಗಿ ಜೊತೆಗೆ ಈವೆಂಟ್ ಶೋ ಗೆ ಅದ್ಭುತ ಸ್ಟೇಜ್ ವಿನ್ಯಾಸಕಾರನಾಗಿ, ವಿಶೇಷ ಟ್ಯಾಬ್ಲೋ ತಯಾರಿಸುವ ಮಾಂತ್ರಿಕನಾಗಿ ….ಹೀಗೆ ಬಹುಮುಖ ಪ್ರತಿಭಾವಂತರಾಗಿ ನಾಗರಾಜ್ @ ನಾಜೂ ಎಲ್ಲರ ಗಮನಸೆಳೆದ ಪ್ರತಿಭೆ ಮಜಾ ಭಾರತ್, ಈ ಟಿವಿ ಶೋ ನಲ್ಲಿ ಮಿಂಚಿ ಸೈ ಎನಿಸಿಕೊಂಡ ನಾಜ್ ಇಂದು Karoke ಶೋ ನಲ್ಲಿ ಹಾಗೂ Orchestra ದಲ್ಲಿ Very Famous ಹಾಡು ನೃತ್ಯದೊಂದಿಗೆ ಹೊಸ ಸಂಚಲನ ಮೂಡಿಸುತ್ತಾ ಬಂದಿದ್ದು ಊರಿನ ಹೆಸರು ಕೀರ್ತಿಯನ್ನು ದೇಶ ವಿದೇಶದಲ್ಲಿಯೂ ಪಸರಿಸಿದ್ದಾರೆ. ತುಳು ಸಿನೆಮದಲ್ಲಿ ಅಭಿನಯಿಸಿದ ನಾಜ್ ಅಲ್ಲಿ ಎಲ್ಲರ ಮೆಚ್ಚುಗೆ ಪಡೆದರೂ ಈ Handsome ಗೆ ಕನ್ನಡ ಚಿತ್ರರಂಗದಲ್ಲಿ ಒಂದು ಅವಕಾಶ ಸಿಕ್ಕರೆ ಸ್ಯಾಂಡಲ್ ವುಡ್ ಗೆ ಒಬ್ಬ ಚೆಂದದ ಪ್ರತಿಭಾವಂತ ಕಲಾವಿದ ದೊರಕಿದ ಸಂಭ್ರಮ ಖಂಡಿತ.

ತಿರುಪತಿಗೆ ಹೋಗಿದ್ದ ನಾಜೂಗೆ ಗುರುಕಿರಣ್ ಎಂದು ತಿಳಿದು VIP ಸಾಲಿನಲ್ಲಿ ನೇರವಾಗಿ ದೇವರ ದರ್ಶನಕ್ಕೆ ಕರೆದು ಕೊಂಡು ಹೋದ ಅಲ್ಲಿನ ಆಡಳಿತ ಮಂಡಳಿಯ ಸದಸ್ಯನಂತರ ಗಲಿಬಿಲಿಯಾದರೂ ತುಂಬಾ ಖುಷಿ ಪಟ್ಟು ಬೀಳ್ಕೊಟ್ಟರು ಈ ಜೂನಿಯರ್ ಗುರುಕಿರಣ್ ಗೆ.

ಗಂಗೊಳ್ಳಿಯ ರತ್ನಾಕರ ಖಾರ್ವಿ ಮತ್ತು ಲೀಲಾವತಿ ಖಾರ್ವಿ ಮಗನಾದ ನಾಜೂಗೆ ತನ್ನ ಈ ಬೆಳವಣಿಗೆ ಬಗ್ಗೆ ತುಂಬಾ ಹೆಮ್ಮೆ ಇದೆ ಏನಾದರೂ ಸಾಧಿಸ ಬೇಕು ಎಂಬ ಹಂಬಲ ಇದೆ ಸಾಥ್ ನೀಡಿ ಬೆಂಬಲಿಸಿದ ಜೇಂಕಾರ್ ಮ್ಯೂಸಿಕ್ ಭಟ್ಕಳ ಹಾಗು ರೂಪ ಕಲಾ ತಂಡ ಇನ್ನಿತರರು, ಎಲ್ಲರ ಬಗ್ಗೆ ಗೌರವ ಇದೆ ಹಾಗು ಪ್ರಸ್ತುತ ಗಂಗೊಳ್ಳಿ Mahalaxmi co- operative Bank ನಲ್ಲಿ ಸೇವೆ ನೀಡುತ್ತಿದ್ದು ನನ್ನ ಸಾಧನೆಗೆ ಬ್ಯಾಂಕ್ ಸಿಬ್ಬಂದಿ ಹಾಗು ಆಡಳಿತ ಮಂಡಳಿಯ ಸಹಕಾರ ಎಂದಿಗೂ ಮರೆಯಲಾರೆ ಎನ್ನುತ್ತಾರೆ ನಾಜೂ.

ಖಾರ್ವಿ ಸಮಾಜದ ಹೆಮ್ಮೆ ನಾಜೂ ( ಜೂನಿಯರ್ ಗುರುಕಿರಣ್ )

All the Best

ರವಿ ಕುಮಾರ್ ಗಂಗೊಳ್ಳಿ

One thought on “ಪ್ರತಿಭಾವಂತ ಕಲಾವಿದ ನಾಜೂ ( ಜೂನಿಯರ್ ಗುರುಕಿರಣ್ )

  1. ಅಭಿಜಾತ ಪ್ರತಿಭೆ ನನ್ನ ಸಹೋದರ ನಾಜುವಿನ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಅದ್ಬುತ ನಟನೆಯನ್ನು ಹೊರಹೊಮ್ಮಿಸುವ ಆತನ ನಟನಾ ಶೈಲಿ ಬೆರಗು ಮೂಡಿಸುತ್ತದೆ. ವೈಶಿಷ್ಟ್ಯ ಪೂರ್ಣ ಲೇಖನ.👍👍👍👏👏👏👌👌👌👍👍👍

Leave a Reply

Your email address will not be published. Required fields are marked *