ಜಗತ್ತಿನ ಮೂಲೆ ಮೂಲೆಯಲ್ಲೂ ಹುಡುಕಾಡಿದರೆ ಖಂಡಿತವಾಗಿಯೂ ಖಾರ್ವಿ ಸಮಾಜದ ಅದೆಷ್ಟೋ ಪ್ರತಿಭೆಗಳು ಕಾಣ ಸಿಗುತ್ತದೆ.
ಹುಡುಕುವ ಹದ್ದಿನ ಕಣ್ಣುಗಳು ಬೇಕಾಗಿದೆ ಅದೆಷ್ಟೋ ಪ್ರತಿಭೆಗಳು ತಮ್ಮ Young Age ನಲ್ಲಿ Service ನಲ್ಲಿ ಇರುವಾಗ ಅದೆಷ್ಟೋ ಸಾಧನೆಗಳನ್ನು ಮಾಡಿದ್ದು ಅದು ಯಾರ ಗಮನವನ್ನು ಸೆಳೆಯದೆ ತೆರೆ ಮರೆಯಲ್ಲಿ ಅವಿತು ಕೊಂಡು ಕೂತು ಸಾಧಕರು ಅಪರಿಚಿತರಾಗಿ ಉಳಿದಂತೆ ಇರೋದು ಎಷ್ಟು ನ್ಯಾಯ …? ಈ ನಿಟ್ಟಿನಲ್ಲಿ kharvionline ಕಾರ್ಯಾಚರಣೆ ನಿಜಕ್ಕೂ ಪ್ರಶಂಶನಿಯ.
ಕಾಲೇಜ್ ಡೇಸ್ ನಿಂದಲೂ ಚೆಸ್ ಬಗ್ಗೆ ಅಪಾರ ಪ್ರೀತಿ ಆಸಕ್ತಿ ಹುಟ್ಟಿಸಿ ಕೊಂಡ ಹೊನ್ನಾವರದ ಪ್ರಭಾತ್ ನಗರದ ಉತ್ತಮ ಕೆ. ಹೊನ್ನಾವರಕಾರ್ ಇವರಿಗೆ ಸರಿಯಾದ ವೇದಿಕೆ ಸಿಕ್ಕಿದ್ದು ಮಾತ್ರ ಗೋವಾದ MPT ಯಲ್ಲಿ ಉದ್ಯೋಗ ಸಿಕ್ಕಾಗ ತನ್ನ ಚೆಸ್ ಪ್ರತಿಭೆಯನ್ನು ಹೊರಹಾಕಲು ಸಿಕ್ಕ ಒಂದು ಅವಕಾಶದಿಂದಲೆ MPT ಯ ಗಮನ ಸೆಳೆದರು. ಗೋವಾ MPT ಅಲ್ಲದೇ ಹೊರ ರಾಜ್ಯಗಳು ಆಯೋಜಿಸಿದ ಟೂರ್ನ್ಮೆಂಟ್ ಗಳಲ್ಲೂ UKH ಭಾಗವಹಿಸಿ ಪ್ರಶಸ್ತಿ ಗಿಟ್ಟಿಸುತ್ತಾರೆ ಅದು ತಾನು ಕಾರ್ಯ ಮಾಡುವ MPT ಪರವಾಗಿಯೂ ಮತ್ತು individual ಆಗಿಯೂ.
ಹೀಗೆ ಚೆಸ್ ಜರ್ನಿ ಇವರ ಉದ್ಯೋಗಕ್ಕೆ ಮೆರುಗು ನೀಡುತ್ತಲೇ ಹೋಗುತ್ತದೆ ನಂತರ MPT ಯ ಹಲವಾರು ಮಂದಿ ಚೆಸ್ ಆಟಗಾರರು ಸೇರಿ ಪ್ರತಿ ವರ್ಷ ದೇಶದ ಹಲವೆಡೆ ಮಾಡಗಾಂವ್ ಪೋರ್ಟ್ ಟ್ರಸ್ಟ್ ಮೂಲಕ MPT ಗೆ ಹಲವಾರು ಅವಾರ್ಡ್ ಗಿಟ್ಟಿಸಿ ಕೊಂಡು ಬರುತ್ತಾರೆ. ಇದರಲ್ಲಿ ಉತ್ತಮ ಕೆ.ಹೊನ್ನಾವರಕಾರ್ ರನ್ನ ವಿಶೇಷ ಆಟದಿಂದ ಗಮನ ಸೆಳೆಯುತ್ತಾರೆ. Very Fast ಆಟಗಾರ ನೆಂದು ಮೆಚ್ಚುಗೆ ಪಡೆದದ್ದಲ್ಲದೆ ಇವರ Defense ಮತ್ತು Attacks ಎಲ್ಲರನ್ನೂ ಆಶ್ಚ್ಯರ್ಯವನ್ನುಂಟು ಮಾಡುತ್ತಿತ್ತು ಚೆನ್ನೈ, ಮುಂಬೈ, ಬೆಂಗಳೂರು, ಮಂಗಳೂರು…..ಹೀಗೆ ದೇಶದ ಹಲವೆಡೆ ಇವರ ಟೀಂ ಆಟವಾಡಿದೆ ತುಂಬಾ ಟೂರ್ನ್ಮೆಂಟ್ ಗೆ UKH ಟೀಂ ಲೀಡರ್ ಆಗಿ ಕಾರ್ಯ ನಿರ್ವಸಿದ್ದಾರೆ.
ಚೆಸ್ ಅಂದರೆ ಇವರಿಗೆ ಪಂಚ ಪ್ರಾಣ ಇವರ ಮನೆಯಲ್ಲಿನ ಕಪಾಟು ಗಳಲ್ಲಿ ಇಂಗ್ಲಿಷ್ ಚೆಸ್ ಬುಕ್ಸ್ ಗಳೇ ತುಂಬಿ ತುಳುಕುತ್ತಿತ್ತು ಪ್ರತೀ ದಿನ ಓದು ಮತ್ತು ಆಟ ಅಹರ್ನಿಶಿ ಶ್ರಮ, ಚೆಸ್ ನೊಂದಿಗೆ ಕ್ಯಾರಂನ್ನು ತುಂಬಾ ಚೆನ್ನಾಗಿ ಅಡಬಲ್ಲ ಇವರು ಕೆಲವು ನಿಮಿಷದಲ್ಲಿ ಬೋರ್ಡ್ ಖಾಲಿ ಮಾಡುತ್ತಿದ್ದರು.
ಇದೀಗ ತನ್ನ ನಿವೃತ್ತ ಜೀವನವನ್ನು ಹೊನ್ನಾವರದ ಪ್ರಭಾತ್ ನಗರದಲ್ಲಿ ಕಳೆಯುತ್ತಿರುವ ಈ ಚೆಸ್ ಮಾಂತ್ರಿಕರಿಗೆ ಒಳ್ಳೆದಾಗಲಿ ನೂರು ವರ್ಷ ಸುಖವಾಗಿರಲಿ.
ರವಿ ಕುಮಾರ್ ಗಂಗೊಳ್ಳಿ