ಜೆಲ್ಲಿ (ಜಾರ್) ಫಿಶ್ ಗಳ ಭಯಾನಕ ಲೋಕ

ಸಾಗರಗಳಲ್ಲಿ ಜೀವ ವಿಕಸನವಾಗುವಾಗ ಉದ್ಬವಿಸಿದ ವಿಚಿತ್ರ ಜೀವಿಯೇ ಜೆಲ್ಲಿ ಫಿಶ್ ಅಥವಾ ಲೋಳೆಮೀನು ಆದರೆ ಇದು ಮೀನುಗಳಲ್ಲ ಕುಟುಕುಕಣವಂತಗಳು ಎಂಬ ಗುಂಪಿನ ಸ್ಕೈಪೋಜೋವಾ ಎಂಬ ವರ್ಗದ ಜಲಚರಗಳು ಪಾರದರ್ಶಕ ಶರೀರವಿರುವುದರಿಂದ ಇದನ್ನು ಲೋಳೆಮೀನು ಎನ್ನುತ್ತಾರೆ.

ಇವುಗಳಲ್ಲಿ ಅನೇಕ ಪ್ರಭೇದಗಳು ಇದ್ದು ವಿವಿಧ ಆಕಾರಗಳಲ್ಲಿ ವರ್ಣರಂಜಿತವಾಗಿ ಇರುತ್ತದೆ ಈ ಲೋಳೆಮೀನುಗಳು ಮನುಷ್ಯನ ಪಾಲಿಗೆ ಅಪಾಯಕಾರಿಗಳಾಗಿದ್ದು ಇದರ ಸ್ಪರ್ಶದಿಂದ ಮನುಷ್ಯನ ಅಂಗಾಂಗಗಳು ನಿಷ್ಕ್ರಿಯೆಗೊಳ್ಳುತ್ತದೆ ಮತ್ತು ಅದರ ಕಡಿತ ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದರೆ ಅಂಗಾಂಗ ಕಳೆದುಕೊಳ್ಳಬೇಕಾಗುತ್ತದೆ. ಕುಂದಾಪುರ ಪಂಚಗಂಗಾವಳಿ ನದಿಯಲ್ಲಿ ಭರತದ ಸಮಯದಲ್ಲಿ ಕಡಲಿನಿಂದ ಬಂದ ಲೋಳೆಮೀನುಗಳ ದಾಳಿಯಿಂದ ಕೆಲವರು ಕೈಕಳೆದುಕೊಂಡ ಉದಾಹರಣೆಗಳಿವೆ ಲೋಳೆಮೀನುಗಳ ಹೊರ ಚರ್ಮದಲ್ಲಿ ಕುಟುಕು ಕಣಗಳಿರುತ್ತವೆ ಈ ಕಣಗಳು ಮಾರ್ಪಾಡಾದ ಜೀವಕೋಶಗಳು ಈ ಕೋಶಗಳ ಒಳಭಾಗದಲ್ಲಿ ವಿಷಗ್ರಂಥಿಯಿರುತ್ತದೆ ಕೋಶದ ಒಂದು ಭಾಗವು ಚಾವಟಿಯಂತಿದ್ದು ಕೋಶದ ಒಳಭಾಗದಲ್ಲಿ ಅದು ಸುರುಳಿಯಂತೆ ಸುತ್ತಿಕೊಂಡು ಇರುತ್ತದೆ.

ವೈರಿಗಳು ಹತ್ತಿರ ಬಂದಾಗ ಅಥವಾ ಆಹಾರದ ಬೇಟೆಯ ಸಂದರ್ಭದಲ್ಲಿ ಲೋಳೆಮೀನುಗಳು ಸುರುಳಿಯಂತೆ ಸುತ್ತಿಕೊಂಡ ವಿಷಪೂರಿತ ಚಾವಟಿಯನ್ನು ಮೀನು ಸಂಧಿಪದಿಯಂತ ಜಲಚರಗಳ ಮೇಲೆ ಬೀಸುತ್ತದೆ ಪರಿಣಾಮವಾಗಿ ಚಾವಟಿಯ ಮೂಲಕ ವಿಷ ಜಲಚರಗಳ ಶರೀರವನ್ನು ಸೇರಿ ಅವುಗಳು ಕ್ಷಣಮಾತ್ರದಲ್ಲಿ ವಿಲವಿಲ ಒದ್ದಾಡಿ ಸಾಯುತ್ತವೆ ಮನುಷ್ಯ ನಿಗಾದರೆ ಅದರ ಸ್ಪರ್ಶ ದಿಂದ ದೇಹವೆಲ್ಲ ತೀವ್ರ ತರದ ಊರಿಯೂತ ಉಂಟಾಗಿ ಅದರ ವಿಷಯುಕ್ತ ಚಾವಟಿ ಸ್ಪರ್ಶವಾದ ಜಾಗ ನಿಷ್ಕ್ರಿಯೆಗೊಳ್ಳುತ್ತದೆ.

ದೊಡ್ಡ ದೊಡ್ಡ ಮೀನುಗಳು ಇದಕ್ಕೆ ಹೆದರುತ್ತಾವೆಯಾದರೂ ಇದನ್ನು ಇಡಿಯಾಗಿ ಭಕ್ಷಿಸುವ ಜಲಚರವೆಂದರೆ ಕಡಲಾಮೆಗಳು ಮಾತ್ರ ಆಮೆಗೆ ಲೋಳೆಮೀನುಗಳು ಅಚ್ಚುಮೆಚ್ಚಿನ ಆಹಾರ ಆಮೆಯ ದೇಹ ಪೃಕೃತಿ ವಿಶಿಷ್ಟವಾಗಿರುವುದರಿಂದ ಲೋಳೆಮೀನುಗಳ ವಿಷ ಅದರ ಮೇಲೆ ಕಿಂಚಿತ್ತೂ ಪರಿಣಾಮ ಬೀರುವುದಿಲ್ಲ ಹಾಗಾಗಿ ವಿದೇಶದ ಸಮುದ್ರ ತೀರಗಳಲ್ಲಿ ಲೋಳೆಮೀನುಗಳಿಂದ ಈಜಾಡುವವರಿಗೆ ತೊಂದರೆಯಾಗದಂತೆ ಭಾರೀ ಪ್ರಮಾಣದಲ್ಲಿ ಕಡಲಾಮೆಗಳನ್ನು ಸಾಕುತ್ತಾರೆ ಕಡಲಾಮೆಗಳು ಇದ್ದಲ್ಲಿ ಲೋಳೆಮೀನುಗಳು ದೂರ ಓಡಿಹೋಗುತ್ತವೆ ಲೋಳೆಮೀನುಗಳ ವರ್ಣರಂಜಿತ ಬಣ್ಣಗಳಿಗೆ ಮಾರುಹೋದ ಮೀನುಗಳು ಅದರ ಸ್ಪರ್ಶ ದಿಂದ ಕ್ಷಣಮಾತ್ರದಲ್ಲಿ ಸಾಯುತ್ತವೆ ಮುಖ್ಯ ವಾಗಿ ಬಂಗ್ಡೆ ಬೈಗೆ ಮೀನುಗಳ ಜೊತೆಗೆ ಸೇರಿಕೊಂಡು ಲೋಳೆಮೀನುಗಳು ಚಾಣಾಕ್ಷತನದಿಂದ ಅವುಗಳನ್ನು ತಿಂದು ಮುಗಿಸುತ್ತದೆ ಕೆಲವು ಲೋಳೆಮೀನುಗಳು ಗಂಟೆಯ ಆಕೃತಿಯಲ್ಲಿದ್ದರೆ ಇನ್ನು ಕೆಲವು ಬಿಚ್ಚಿದ ಕೊಡೆಯಂತೆ ಕಂಡು ಬರುತ್ತವೆ.

ಅಲೆಗಳ ಹೊಡೆತಕ್ಕೆ ಸಿಲುಕಿ ಲೋಳೆಮೀನುಗಳು ಕಡಲ ದಂಡೆಯ ಮರಳ ರಾಶಿಯ ಮೇಲೆ ಬಿದ್ದರೆ ಅದರ ಸಾವು ನಿಶ್ಚಿತ ಲೋಳೆಮೀನುಗಳು ಗಾತ್ರದಲ್ಲಿ ಒಂದೆರಡು ಸೆಂ.ಮೀ. ನಿಂದ ಅರ್ಧ ಮೀಟರ್ ಗಳವರೆಗೂ ಬೆಳೆಯುತ್ತದೆ ಭರತದ ಸಂದರ್ಭದಲ್ಲಿ ಸಮುದ್ರ ದಿಂದ ಲೋಳೆಮೀನುಗಳು ತೇಲುತ್ತಾ ನದಿಗಳಿಗೆ ಬರುತ್ತದೆ ಪ್ರಪಂಚದ ಬಹುತೇಕ ಎಲ್ಲಾ ಸಮುದ್ರಗಳಲ್ಲಿ ಕಂಡುಬರುವ ಲೋಳೆಮೀನುಗಳು ಮನುಷ್ಯರಿಗಷ್ಟೇ ಅಲ್ಲ ಮೀನುಗಳಿಗೂ ಕಂಟಕಪ್ರಾಯವಾಗಿವೆ ರಕ್ತಬೀಜಾಸುರರಂತೆ ಇವುಗಳ ಸಂತತಿ ಅತಿ ವೇಗದಲ್ಲಿ ಅದರ ಪಾಲಿಪ್ ಎಂಬ ವಿಶಿಷ್ಟ ಅಂಗಗಳಿಂದ ಹುಟ್ಟಿಕೊಳ್ಳುತ್ತದೆ ಇವುಗಳ ಸಂತತಿ ನಿಯಂತ್ರಣಕ್ಕೆ ಏಕ ಮಾತ್ರ ಉಪಾಯವೆಂದರೆ ಕಡಲಾಮೆಗಳ ಸಂತತಿಯನ್ನು ಹೆಚ್ಚು ಹೆಚ್ಚು ವೃದ್ಧಿ ಮಾಡುವುದು ಮಾತ್ರ ಆಗಿದೆ.

ಉಮಾಕಾಂತ ಖಾರ್ವಿ ಕುಂದಾಪುರ

One thought on “ಜೆಲ್ಲಿ (ಜಾರ್) ಫಿಶ್ ಗಳ ಭಯಾನಕ ಲೋಕ

Leave a Reply

Your email address will not be published. Required fields are marked *