ಶ್ರೇಷ್ಠತೆಯ ಆಮಲಿನಲ್ಲಿ ಅಸ್ಪೃಶ್ಯತೆಯ ಆಧ್ವಾನಗಳು

ಅದು ಆರ್ಥಿಕವಾಗಿ ಪ್ರಬಲವಾಗಿರುವ ಸಮಾಜದ ಒಡೆತನದಲ್ಲಿರುವ ಪ್ರಸಿದ್ಧ ಗಣಪತಿ ದೇಗುಲ ಅಂದು ಅಂಗಾರಕ ಸಂಕಷ್ಟಿಯ ಪವಿತ್ರ ದಿನ ವಿಘ್ನ ನಾಯಕನಿಗೆ ಭಕ್ತಿಯಿಂದ ಕೈಮುಗಿದು ಪ್ರಾರ್ಥನೆ ಸಲ್ಲಿಸಿ ದೇಗುಲದ ಜಗಲಿಯಲ್ಲಿ ಕುಳಿತು ತೀರ್ಥ ಪ್ರಸಾದಕ್ಕಾಗಿ ಕಾದರೂ ಅರ್ಚಕರು ದೇಗುಲದ ಗರ್ಭ ಗುಡಿಯಿಂದ ಕದಲಲಿಲ್ಲ ದೇವರು ಇನ್ನೇನು ಪ್ರತ್ಯಕ್ಷನಾಗುತ್ತಾನೆ ಎಂಬಂತೆ ಅರ್ಚಕರು ಭಯಂಕರವಾಗಿ ದೇವರ ಧ್ಯಾನದಲ್ಲಿ ತಲ್ಲೀನರಾಗಿದ್ದರು.

ತುಸು ಹೊತ್ತಿನಲ್ಲೇ ಅವರದ್ದೇ ಸಮಾಜದ ಶ್ರೀಮಂತ ದಂಪತಿಗಳು ದೇವರ ದರ್ಶನಕ್ಕೆ ಬಂದರು ದಿವ್ಯ ದೃಷ್ಟಿ ಎಂಬಂತೆ ಅರ್ಚಕರು ಧ್ಯಾನದಿಂದ ಜಾಗೃತರಾದರು ಅವರ ಭಯಂಕರ ದೇವರ ಧ್ಯಾನ ಕ್ಷಣ ಮಾತ್ರದಲ್ಲೇ ಹಾರಿಹೋಯಿತು ಎದ್ದನೋ ಬಿದ್ದನೋ ಎಂಬಂತೆ ಗರ್ಭ ಗುಡಿಯಿಂದ ಓಡಿಬಂದ ಅರ್ಚಕರು ಆ ಶ್ರೀಮಂತ ದಂಪತಿಗಳನ್ನು ಉಪಚರಿಸಿದರು ಅವರ ಸಂಕಲ್ಪ ಸೇವೆಗಳೆಲ್ಲ ಮುಗಿದ ಬಳಿಕ ತೀರ್ಥ ಪ್ರಸಾದದ ವಿತರಣೆಯೂ ನಡೆಯಿತು ಹರಿವಾಣದಲ್ಲಿ ದೊಡ್ಡ ನೋಟುಗಳ ಸುರಿಮಳೆಯಾಯಿತು ದೂರದಲ್ಲಿ ಕುಳಿತಿದ್ದ ನನ್ನನ್ನು ತಿರುಗಿಯೂ ಅರ್ಚಕರು ನೋಡಲಿಲ್ಲ ಅವರಿಂದ ತೀರ್ಥ ಪ್ರಸಾದ ಸ್ವೀಕರಿಸಲು ನನ್ನ ಮನಸಾಕ್ಷಿ ಒಪ್ಪಲಿಲ್ಲ.

ಎಲ್ಲವೂ ಮುಗಿದ ಬಳಿಕ ಅರ್ಚಕರು ಆ ದಂಪತಿಗಳ ಬಳಿ ಬಂದು ಕೊಂಕಣಿ ಭಾಷೆಯಲ್ಲಿ ಒಳಗಡೆ ನನ್ನ ಮನೆ ಇದೆ ನೀವು ಬಂದು ಬಿಸಿ ಬಿಸಿ ಚಾ ಕುಡಿದು ಹೋಗುವಂತೆ ಒತ್ತಾಯಿಸಿದರು ಆ ದಂಪತಿಗಳು ಸ್ವಲ್ಪ ನನ್ನ ಕಡೆ ಕಣ್ಣು ಹಾಯಿಸಿದೊಡನೆ ಅರ್ಚಕ ಮಹಾಶಯ ಈ ವ್ಯಕ್ತಿ ನಮ್ಮ ಜಾತಿಯವನಲ್ಲ ಎಂದು ಕೊಂಕಣಿಯಲ್ಲಿ ಆ ದಂಪತಿಗಳಿಗೆ ಸೂಚಿಸಿ ಅವರನ್ನು ದೇಗುಲದ ಒಳಭಾಗದಲ್ಲಿರುವ ತನ್ನ ಮನೆಗೆ ಕರೆದೊಯ್ದುರು ಸರ್ವಾಂತರ್ಯಾಮಿ ಭಗವಂತನ ಸನ್ನಿಧಿಯಲ್ಲಿ ಜಾತಿಬೇಧದ ಅನುಚಿತ ವರ್ತನೆ ವಿಘ್ನ ನಿವಾರಕನ ಎದುರೇ ಅರ್ಚಕ ಮಹಾಶಯನ ಧೂರ್ತ ಬುದ್ಧಿ ದೇಗುಲಕ್ಕೆ ಬಂದ ಜನರನ್ನು ಜಾತಿಬೇಧ ಮಾಡಿ ದ್ವೇಷಿಸುವ ಇಂತವರು ದೇವರನ್ನು ಹೇಗೆ ಪ್ರೀತಿಸಬಲ್ಲರು? ಮನಸ್ಸಿನಲ್ಲಿ ಜಾತಿ ಮತ್ಸರ ತುಂಬಿಕೊಂಡ ಇಂತಹ ಧರ್ಮ ಲಂಪಟರು ಮಾಡುವ ಪೂಜೆ ಸೇವೆಯನ್ನು ದೇವರು ಹೇಗೆ ಸ್ವೀಕರಿಸುತ್ತಾನೆ.

ಅರ್ಚಕರ ಬಗ್ಗೆ ನನಗೆ ಬೇಸರವಾಗಲಿಲ್ಲ ಬದಲಿಗೆ ಅಸಹ್ಯ ಉಂಟಾಯಿತು ಕೆಲವು ದಿನಗಳ ಬಳಿಕ ಕ್ಷೌರದಂಗಡಿಯಲ್ಲಿ ಈ ಅರ್ಚಕ ಕ್ಷೌರ ಮಾಡಿಸಿಕೊಳ್ಳುವ ಸಂಧರ್ಭದಲ್ಲಿ ದೇಶಭಕ್ತಿ, ಹಿಂದೂ ಧರ್ಮದ ಶ್ರೇಷ್ಠತೆ ಇತ್ಯಾದಿ ವಿಷಯಗಳ ಬಗ್ಗೆ ತುಂಬಾ ಮಾತನಾಡುತ್ತಿದ್ದ ಆತನ ಮಾತನ್ನುಕೇಳಿ ನನಗೆ ನಿಜಕ್ಕೂ ವಾಕರಿಕೆ ಬಂತು ಭಾರತದಲ್ಲಿ ಸುಮಾರು 6400 ಜಾತಿ ಉಪಜಾತಿಗಳಿವೆ ಇವುಗಳು ಹಿಂದೂಗಳನ್ನು ಜಾತಿಯ ಆಧಾರದಲ್ಲಿ ವರ್ಗೀಕರಿಸುತ್ತಿದೆ ಭಾರತೀಯ ಹಿಂದೂಗಳ ಒಗ್ಗಟ್ಟಿಗೆ ಮಾರಕವಾಗಿ ಪರಿಣಮಿಸಿರುವ ಈ ಜಾತಿ ವ್ಯವಸ್ಥೆ ಹಿಂದೂ ಸಮಾಜದ ಬೇರ್ಪಡಿಸಲಾಗದ ಒಂದು ಭಾಗವಾಗಿ ,ಸಾಮಾಜಿಕ ಅಂತಸ್ತನ್ನು ನಿರ್ಧರಿಸುವ ಅಂಶವಾಗಿದೆ.

ಇತ್ತೀಚಿನ ದಿನಗಳಲ್ಲಿ ಜಾತಿ ವ್ಯವಸ್ಥೆ ಸ್ವಲ್ಪ ಮಟ್ಟಿಗೆ ತನ್ನ ಆಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದರೂ ಕೆಲವೊಂದು ಪ್ರಬಲ ಸಮುದಾಯಗಳು ತಮ್ಮ ಜಾತಿ ವ್ಯವಸ್ಥೆಯ ಆಸ್ತಿತ್ವದ ಪಟ್ಟನ್ನು ಇನ್ನೂ ಬಿಟ್ಟು ಕೊಟ್ಟಿಲ್ಲ. ಅದಕ್ಕೆ ಮುಖ್ಯ ಕಾರಣ ಆ ಸಮಾಜಗಳ ಸುದೃಢವಾದ ಆರ್ಥಿಕ ಪರಿಸ್ಥಿತಿ ಇವರಿಗೆ ಪರಧರ್ಮೀಯರು ಹೊಡೆಯಲು ಬಂದಾಗ ಮಾತ್ರ ಇತರ ಶೂದ್ರ ಸಮಾಜದವರ ನೆನಪಾಗುತ್ತದೆ. ಆಗ ನಾವೆಲ್ಲರೂ ಒಂದು ನಾವೆಲ್ಲರೂ ಹಿಂದೂ ಎಂಬ ಘೋಷಣೆ ಮೊಳಗುತ್ತದೆ ಅನುವಂಶೀಯವಾದ ಉದ್ಯೋಗಗಳು, ತಮ್ಮ ಪರಿಶುದ್ಧತೆಯನ್ನು ಕಾಯ್ದುಕೊಳ್ಳಬೇಕೆಂಬ ಧೂರ್ತತನ ಈ ಶ್ರೇಷ್ಠತೆಯ ಆಮಲನ್ನು ಇತರ ಜಾತಿಯವರ ಮೇಲೆ ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ ಪ್ರಬಲ ಸಮಾಜದವರು ಪ್ರಯೋಗಿಸುತ್ತಿದ್ದಾರೆ ನಾಗರಿಕತೆ ನಾಗಾಲೋಟದಲ್ಲಿದ್ದರೂ, ಪ್ರಬಲ ಸಮಾಜಗಳು ಇತರ ಬಡ ಸಮಾಜಗಳನ್ನು ಅಸ್ಪೃಶ್ಯರಂತೆ ಕಾಣುವ ಮನೋಭಾವ ಇನ್ನೂ ನಿಂತಿಲ್ಲಇದು ಪುಣ್ಯ ಪುರುಷರು, ಹುಟ್ಟಿದ ಪವಿತ್ರ ದೇಗುಲಗಳಿಂದ ಕಂಗೊಳಿಸುವ ನಮ್ಮ ಭಾರತ ದೇಶದ ದುರಂತ .

ಉಮಾಕಾಂತ ಖಾರ್ವಿ ಕುಂದಾಪುರ

Leave a Reply

Your email address will not be published. Required fields are marked *