ಇವರ ಹಾಡು ಕೇಳಿದರೆ ಆನಂದ ಪರಮಾನಂದ, ಅಮಿತಾನಂದ. ಕೊಂಕಣಿ ಖಾರ್ವಿ ಸಮಾಜದ ದಕ್ಷಿಣದ ಕೊಂಡಿಯಾಗಿ ಪ್ರತಿನಿಧಿಸಲ್ಪಡುವ ಕಡಲ ನಗರಿ ಮಂಗಳೂರು ತೋಟಬೆಂಗ್ರೆಯ ಯುವಕ ಅಮಿತ್ ಖಾರ್ವಿ ಸಣ್ಣ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಪರಿಮಿತ. ಬಾಲ್ಯ ದಲ್ಲಿ ಸಂಗೀತದ ಬಗ್ಗೆ ಅಪಾರವಾದ ಆಸಕ್ತಿಯಿದ್ದ ಅಮಿತ್ ಖಾರ್ವಿ ಭಜನಾ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದರು. ಶಾಲಾ ಕಾಲೇಜುಗಳ ಮತ್ತು ಇತರ ಕಡೆ ಯಲ್ಲಿ ಹಲವಾರು ಸಂಗೀತ ಹಾಡುಗಾರಿಕೆ ಸ್ಪರ್ಧೆ ಯಲ್ಲಿ ಭಾಗವಹಿಸುತ್ತಿದ್ದರಿಂದ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಇವರ ಸ್ವರ ಮಾಧುರ್ಯದ ಘನತೆಯನ್ನು ಹೆಚ್ಚಿಸುತ್ತಿದ್ದವು.
ಅಮಿತ್ ಖಾರ್ವಿಯ ಸುಶ್ರಾವ್ಯ ಕಂಠಸಿರಿಗೆ ಮನಸೋತ ಸಹೃದಯಿಗಳು ಹಲವಾರು ಅವಕಾಶಗಳನ್ನು ಕಲ್ಪಿಸಿಕೊಟ್ಟ ಪರಿಣಾಮವಾಗಿ ಅಮಿತ್ ಸಂಗೀತ ಯಾತ್ರೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕತೊಡಗಿತು. ದೊಡ್ಡ ದೊಡ್ಡ ವೇದಿಕೆಗಳು ಅಮಿತ್ ಗಾಗಿ ರತ್ನ ಗಂಬಳಿ ಹಾಸಿದವು. ನಮ್ಮ ಟಿವಿ, ಸ್ಪಂದನ ವಾಹಿನಿ, ದೈಜೀವಲ್ಡ್ ನಮ್ಮ ಕುಡ್ಲ 24X7 FM ಸಾರಾಂಗ್ ಹೀಗೆ ಅಮಿತ್ ಖಾರ್ವಿ ಯ ಸಂಗೀತ ಕ್ಷೇತ್ರದ ನಾಗಾಲೋಟ ಯಶಸ್ವಿಯಾಗಿ ಸಾಗತೊಡಗಿ ಕೀರ್ತಿ ಎಲ್ಲೆಡೆ ಪಸರಿಸಿತು.
ಬಹಳ ಜನರ ಒತ್ತಾಯದ ಮೇರೆಗೆ ಸುರತ್ಕಲ್ ನಲ್ಲಿ ಸಂಗೀತ ತರಬೇತಿ ಕೇಂದ್ರ ಪ್ರಾರಂಭಿಸಿದರು. ಮೂರು ವರುಷಗಳ ಅವಧಿಯಲ್ಲಿ 120 ಕ್ಕೂ ಹೆಚ್ಚು ವಿಧ್ಯಾರ್ಥಿ ಗಳಿಗೆ ಸಂಗೀತ ಕಲಿಸಿರುವ ಅಮಿತ್ ಸಂಗೀತ ಕಲಿಕೆಯ ವಿಧ್ಯಾರ್ಥಿ ಗಳ ಅಚ್ಚುಮೆಚ್ಚಿನ ಗುರುವಾಗಿ ಕಂಗೊಳಿಸಿದ್ದಾರೆ. ಇವರ ಗರಡಿಯಲ್ಲಿ ಹಲವಾರು ಸಂಗೀತ ಪ್ರತಿಭೆಗಳು ಪಳಗಿ ಸಾಧಕರಾಗಿ ಹೊರಹೊಮ್ಮಿದ್ದಾರೆ. ಸಂಗೀತ ಕ್ಷೇತ್ರವನ್ನು ವಿಸ್ತರಿಸಬೇಕೆಂಬ ಮಹಾತ್ವಾಕಾಂಕ್ಷೆಯಿಂದ ಅಮಿತ್ ಮೆಲೋಡಿಸ್ ಎಂಬ ಆರ್ಕೆಸ್ಟಾ ತಂಡವನ್ನು ಹುಟ್ಟು ಹಾಕಿದ ಅಮಿತ್ ಖಾರ್ವಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಹಲವಾರು ಉದಯೋನ್ಮುಖ ಸಂಗೀತ ಕಲಾವಿದರಿಗೆ ಅವಕಾಶ ಮಾಡಿಕೊಟ್ಟು ಓದಾರ್ಯ ಮೆರೆಯುತ್ತಿದ್ದಾರೆ.
ಸುರತ್ಕಲ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟಿಕ್ನಾಲಜಿ ಕರ್ನಾಟಕ ಸಂಸ್ಥೆಯಲ್ಲಿ ಸಿವಿಲ್ ವಿಭಾಗದಲ್ಲಿ ಅಮಿತ್ ಖಾರ್ವಿ ಉದ್ಯೋಗ ಮಾಡುತ್ತಿದ್ದಾರೆ. ತಾಂತ್ರಿಕತೆಯ ಜಗತ್ತಿನೊಳಗೆ ಸಂಗೀತ ಸರಸ್ವತಿ ಅಮಿತ ರೂಪದಲ್ಲಿ ಪ್ರವಹಿಸುತ್ತಿರುವುದು ಸಂತೋಷದ ವಿಷಯವಾಗಿದೆ. ನಾಡಿನಾದ್ಯಂತ ತನ್ನ ಅದ್ಭುತವಾದ ಸಿರಿಕಂಠದಿಂದ ಪ್ರಜ್ವಲಿಸುತ್ತಿರುವ ಅಮಿತ್ ಖಾರ್ವಿ ಗೆ ಖಾರ್ವಿ ಆನ್ಲೈನ್ ತುಂಬು ಹೃದಯದಿಂದ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಸಮಾಜದ ಹೆಸರನ್ನು ಬೆಳಗಿಸುತ್ತಿರುವ ಅಮಿತ್ ಖಾರ್ವಿ ಯ ಸಾಧನೆಯನ್ನು ಸಮಾಜ ಗುರುತಿಸಬೇಕಾಗಿದೆ. ಹಲವಾರು ಸುದ್ದಿ ದೃಶ್ಯ ಮಾಧ್ಯಮಗಳು ನಮ್ಮ ಸಮಾಜದ ಈ ಹೆಮ್ಮೆಯ ಗಾಯಕನನ್ನು ಸಂದರ್ಶಿಸಿ ನಾಡಿಗೆ ಪರಿಚಯ ಮಾಡಿಕೊಟ್ಟಿದೆ. ನಿಸರ್ಗದಲ್ಲಿ ಸರಿಗಮಪದನಿ ಎಂಬ ಏಳು ಸ್ವರಗಳಿವೆ. ಈ ಏಳೂ ಸ್ವರಗಳ ತೂಕ, ಏರಿಳಿತಗಳು, ವಿಸ್ತಾರಗಳು, ಆಳಗಳು ಭಿನ್ನ ವಿಭಿನ್ನ. ಈ ಏಳೂ ಸ್ವರಗಳನ್ನು ವಿವಿಧ ರೀತಿಯಲ್ಲಿ ಮಿಶ್ರ ಮಾಡಿ ಅವುಗಳಿಂದ ಅದ್ಭುತವಾದ ರಾಗಗಳನ್ನು ಸೃಜಿಸಿ ಅವನ್ನು ಸಾಹಿತ್ಯ ದೊಂದಿಗೆ ಹಾಡಿದಾಗ ಅರ್ಥ ಪೂರ್ಣ ಗಾನವೈಭವದ ಸಾಕ್ಷಾತ್ಕಾರವಾಗುತ್ತದೆ. ಈ ಅದ್ಭುತವಾದ ಸಂಗೀತ ಕಲೆಯನ್ನು ಅಮಿತ್ ಖಾರ್ವಿ ಬಹಳ ಶ್ರದ್ಧೆ ಭಕ್ತಿ ಪರಿಶ್ರಮದಿಂದ ಒಲಿಸಿಕೊಂಡಿದ್ದಾರೆ. ಈ ಗಾನಗಾರುಡಿಗನ ಕೀರ್ತಿ ಪತಾಕೆ ದೈದೀಪ್ಯಮಾನವಾಗಿ ಪ್ರಜ್ವಲಿಸಲಿ ಎಂದು ಪ್ರೀತಿ ಅಭಿಮಾನದಿಂದ ಶುಭ ಹಾರೈಸುತ್ತೇನೆ.
ಸುಧಾಕರ್ ಖಾರ್ವಿ
www.kharvionline.com
ಮಂಗಳೂರಿನ ಗಾನಕೋಗಿಲೆ ಅಮಿತ್ ಖಾರ್ವಿ ಗೆ ವಂದನೆ ಅಭಿನಂದನೆ.ತಮ್ಮ ಸುಶ್ರಾವ್ಯ ಗಾನಸುಧೆಯ ಮೂಲಕ ಮನೋಲ್ಲಾಸ ನೀಡುತ್ತಿರುವ ನಮ್ಮ ಸಮಾಜದ ಹೆಮ್ಮೆಯ ಗಾನಗಾರುಡಿಗನಿಗೆ ಶುಭ ಹಾರೈಕೆಗಳು👌👌👌👋👋👋👋👋👋👍👍👍👍👍🙏🙏🙏🙏🙏🙏🙏🙏👌👋👍💐💐💐💐💐🎉🎉🎉🎉🎉🎉
Thank you sooo much Umanath sir
Nimma prothsaha abhimana nanna mele sada heege irali🌼🌼🌼🌼🙏🙏🙏🙏🙏🙏
All the best Amith Kharvi … You make us proud 👍
Thank you sooo much Ram Prasanna Sir
Nimma support nanna mele sada heege erali
Super sir
ಅಮಿತವಾದ ಗಾನ ಪ್ರತಿಭೆಯಿಂದ ಗಾನ ಪ್ರಿಯರಿಗೆ ಅಮಿತವಾದ ಆನಂದ ಕೊಡುವ ಅಮಿತನ ಗಾಯನಕ್ಕೆ ನಮೋ ನಮಃ. 👍
thank you so much sir
All the best bhava❤️
Super Amith anna.. I wish you Many more success comes to your way in Future ..
With best wishes….💐💐🌹💐💐🥰🥰
Pratibha Suvarna